ಸಿರುಗುಪ್ಪ

ಸೌದಾಗರ್ ಮಸೀದಿಯಲ್ಲಿ ಸೌಹಾರ್ದ ರೋಜಾ ಇಫ್ತಾರ್ ಕೂಟ

ಸೌದಾಗರ್ ಮಸೀದಿಯಲ್ಲಿ ಸೌಹಾರ್ದ ರೋಜಾ ಇಫ್ತಾರ್ ಕೂಟ

ಸಿರುಗುಪ್ಪ 03: ಪ್ರತಿಯೊಬ್ಬರೂ ಕೆಟ್ಟದ್ದನ್ನು ತ್ಯಾಗ ಮಾಡಿರಿ ಒಳ್ಳೆಯದನ್ನು ಅನುಸರಿಸಿರಿ ನಮ್ಮನ್ನು ನಾವು ದಂಡಿಸಿಕೊಳ್ಳುತ್ತಾ ಮನಸ್ಸಿನ ಸ್ವಯಂ ನಿಯಂತ್ರಣ ಶಿಸ್ತು ತ್ಯಾಗ ಒಳಪಡುವುದನ್ನು ನೋಡಿ ಎಲ್ಲರೂ ಕಲಿಯುವಂತಹದ್ದು ಅಲ್ಲಾಹನ ರಸುಲರು ನೀಡಿದ ಆಜ್ಞೆ ಪಾಲಿಸಿರಿ ಪ್ರಪಂಚದ ಎಲ್ಲಾ ಸಮಸ್ಯೆಗಳಿಗೂ ಉತ್ತರ ಇರುವುದು ಅಲ್ಲಾಹನ ಪವಿತ್ರ ಗ್ರಂಥ ಕುರಾನ್ ಓದಿರಿ ಓದಿಸಿರಿ ಕಲಿಯಿರಿ ಮತ್ತು ಕಲಿಸಿರಿ 5 ಬಾರಿ ನಮಾಜ್ ಮಾಡಿರಿ ಬಡವರಿಗೆ ದಾನ ನೀಡಿರಿ ಕಷ್ಟ ಸುಖ ವಿಚಾರಿಸಿರಿ ಉಪವಾಸ ಇನ್ನೊಬ್ಬರ ಹಸಿವನ್ನು ಅರಿಯುವುದೇ ರಂಜಾನ್ ತಿಂಗಳ ಶಾಂತಿಯ ಸೌಹಾರ್ದದ ಸಂದೇಶ ನೀಡುವ ಮೂಲ ಉದ್ದೇಶ ಎಂದು ಮೌಲಾನಾ ಹಾಜಿ ಎಸ್ ಅಬ್ದುಲ್ ಸಮ್ಮದ್ ನಿಜಾಮಿ ಕಾಮಿಲೆ ಜಾಮಿಯಾ ನಿಜಾಮಿಯ ಹೈದರಾಬಾದ್ ಅವರು ಹೇಳಿದರು.

 ನಗರದ ಸೌದಾಗರ್ ಜುಮ್ಮ ಸುನ್ನಿ ಮಸೀದಿಯಲ್ಲಿ ಎ. 2ರಂದು ಸಂಜೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್  ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯರು ಸಮಾಜ ಸುಧಾರಕರು ಸಾಕ್ಷರತಾ ಅಲ್ ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಮತ್ತು ಇವರ ಮಕ್ಕಳಿಂದ ಸೌಹಾರ್ದ ರೋಜಾ ಇಫ್ತಾರ್  ಔತಣ ಕೂಟ  ಆಯೋಜಿಸಲಾಗಿತ್ತು ರೋಜಾ ಇಫ್ತಾರ್ ಔತಣಕೂಟದಲ್ಲಿ ಮಸೀದಿಯ ಅಧ್ಯಕ್ಷ ಮಕಾಂದರ ಮಹಬೂಬ್ ಬಾಷಾ, ಗೌರವ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಈದ್ಗಾ ಮತ್ತು ಖಬರ ಸ್ಥಾನ ಕಮಿಟಿ ಅಧ್ಯಕ್ಷ ಹಂಡಿ ಹಾಶಿಂ, ಖತೀಬ್ ಜಹೀರುದ್ದೀನ್ ಬಾಬು, ಖಾಜಿ ಖುರಾನ್ ಹಾಫೀಜ್  ನೂರುಲ್ ಹಕ್, ಸೈಯದ್ ಶಾ ಹುಸೇನ್ ಖಾದ್ರಿ ಅವರ ಮೊಮ್ಮಗ ಹಾಫೀಜ್ ಸೈಯದ್ ಶಾ ಖಾದ್ರಿ, ಹಾಜಿ ಅಬ್ದುಲ್ ಹಮೀದ್ ಫಾರುಕಿ, ಹಾಜಿ ಖಾಲಿ ಚೀಲಾ ಹುಸೇನ್ ಸಾಬ್, ಹಂಡಿ ಹುಸೇನ್ ಸಾಬ್, ಹಾಜಿ ದೇಶ್ನೂರ್ ಅಬ್ದುಲ್ ಗಫೂರ್ ಸಾಬ್, ಅಲ್ ಹಾಜ್ ಎ ಮೊಹಮ್ಮದ್ ಇಬ್ರಾಹಿಂ ನಿಜಾಮಿ,ಎ ಮೊಹಮ್ಮದ್ ರಫಿ,ಎ ಮೊಹಮ್ಮದ್ ನೌಶಾದ್ ಅಲಿ,ಎ ಮೊಹಮ್ಮದ್ ನಿಜಾಮುದ್ದೀನ್, ಎ ಮೊಹಮ್ಮದ್ ಹಾಜಿ, ಬಿ ಅಬ್ದುಲ್ ಗನಿ,ಬಿ ದಾದಾ ಖಲಂದರ್, ಬಿ ಮೊಹಮ್ಮದ್ ಗೌಸ್,ಎ ಟೈಲರ್ ಮಹೆಬೂಬ್ ಸುಬಾನಿ, ಮೊಹಮ್ಮದ್ ಗೌಸ್,ಎ.ಟಿ. ಇಬ್ರಾಹಿಂ, ಎ.ಟಿ.ಹಾಜಿ,ಎ.ಟಿ ಜಿಲಾನಿ, ಎ.ಟಿ.ಶಾಶ, ಮೌಜನ್ ಕೆ ಎಂ ಹೊನ್ನೂರ್ ವಲಿ ಸಮುದಾಯದ ನೂರಾರು ಜನ  ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು.


ಸುದ್ದಿ ಓದಿ