ಸಿರುಗುಪ್ಪ

ಸಿರುಗುಪ್ಪ ಮಸಣ ಕಾರ್ಮಿಕರಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಸಿರುಗುಪ್ಪ ಮಸಣ ಕಾರ್ಮಿಕರಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಸಿರುಗುಪ್ಪ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ತಾಲೂಕು ಸಂಘದ ಪದಾಧಿಕಾರಿಗಳಾದ ಬಿ ಮಾರುತಿ ಸದಸ್ಯರಾದ ಎಲ್ಲಪ್ಪ ಮಾರೇಶ ಎಂ ಹುಲೇಪ್ಪ ಹನುಮಂತ ಹೆಚ್ ಬಿ ಓಬಳೇಶಪ್ಪ ಲಕ್ಷ್ಮಣ ಗಂಗಮ್ಮ ಅಂಬಮ್ಮ ಮಲ್ಲಮ್ಮ ಮತ್ತಿತರ ಸಮ್ಮುಖದಲ್ಲಿ ಸಾರ್ವಜನಿಕರ ಸ್ಮಶಾನಕ್ಕೆ ಒಬ್ಬರಂತೆ ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ಮಸಣ ನಿರ್ವಾಹಕ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಮತ್ತು ಸ್ಮಶಾನಗಳಲ್ಲಿ ಪಾರಂಪರಿಕವಾಗಿ ಕಾರ್ಯ ನಿರ್ವಹಿಸುವ ಮಸಣ ಕಾರ್ಮಿಕರ ಕುಟುಂಬಗಳು ಸದಸ್ಯರ ಗಣತಿ ಮಾಡಬೇಕು ಮತ್ತು ಅವರ ಪುನರ್ ವಸತಿ ಕ್ರಮ ವಹಿಸಬೇಕು ಉದ್ಯೋಗ ಖಾತ್ರಿ ಯೋಜನೆ ಅಡಿ ಪ್ರತಿ ಕುಣಿ ಅಗಿಯುವ ಮುಚ್ಚುವ ಕೆಲಸವನ್ನು ಉದ್ಯೋಗವೆಂದು ಪರಿಗಣಿಸಿ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 3000 ಕೂಲಿ ಪಾವತಿಸಬೇಕು ಅಲ್ಲದೆ ಮಸಣ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆಯನ್ನು ಜಾರಿಗೊಳಿಸಬೇಕು ಉಚಿತ ಆರೋಗ್ಯ ತಪಾಸಣೆ ನಡೆಸಬೇಕು ಎಲ್ಲರ ಎಲ್ಲ ಮಸಣ ಕಾರ್ಮಿಕರ ಕುಟುಂಬಗಳಿಗೆ ಕಡ್ಡಾಯವಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿ 200 ದಿನಗಳ ಕಾಲ ಉದ್ಯೋಗ ಒದಗಿಸಬೇಕು ವಸತಿ ಶಾಲೆಗಳಲ್ಲಿ ಹಾಗೂ ಉದ್ಯೋಗಕ್ಕಾಗಿ ಉದ್ಯೋಗಾವಕಾಶ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕು ಇನ್ನಿತರ ಬೇಡಿಕೆಗೆ ಒತ್ತಾಯಿಸಿ ತಾಲೂಕು ಪಂಚಾಯತ್ ಕಚೇರಿಗೆ ತೆರಳಿ ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು

ಸುದ್ದಿ ಓದಿ