ಊದಬತ್ತಿ ಗೃಹ ಕೈಗಾರಿಕಾ ಘಟಕಕ್ಕೆ ಬೆಂಕಿ, ಲಕ್ಷಾಂತರ ಹಾನಿ
Fire at blowtorch industrial unit, damage worth lakhs
ಮಹಾಲಿಂಗಪುರ 30: ಪಟ್ಟಣದ ಢವಳೇಶ್ವರ ರಸ್ತೆಯಲ್ಲಿರುವ ಊದಬತ್ತಿ ಗೃಹ ಕೈಗಾರಿಕಾ ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಹೊತ್ತಿ ಪತ್ರಾಸ್ ಶೆಡ್ಡಿನ ಕಾರ್ಖಾನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ತೇರದಾಳ ಶಾಸಕರಾದ ಸಿದ್ದು ಸವದಿ ಭೇಟಿ ನೀಡಿ ಹಾನಿಗೊಳಗಾದ ಮಾಲಿಕನಿಗೆ ಸಾಂತ್ವನ ಹೇಳಿದರು.
ಕಳೆದ ವರ್ಷ ಸ್ಥಾಪನೆಗೊಂಡ ಈ ಕಾರ್ಖಾನೆಯಲ್ಲಿ ಊದಬತ್ತಿ ಮತ್ತು ಇನ್ನಿತರ ಸುಗಂಧ ಕಡ್ಡಿಗಳನ್ನು ತಯಾರಿಸುವ 15 ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಇವುಗಳ ಅಂದಾಜು ಮೊತ್ತ 15 ಲಕ್ಷಗಳು. ಜೊತೆಗೆ ಸುಗಂಧ ದ್ರವ್ಯಗಳ ಸಂಗ್ರಹದ ಮೊತ್ತ 6 ಲಕ್ಷಗಳು ಒಟ್ಟು 20 ರಿಂದ 25 ಲಕ್ಷಗಳ ಹಾನಿಯಾಗಿದೆ ಎಂದು ಮಾಲಿಕರು ತಿಳಿಸುತ್ತಾರೆ.
ಅಲ್ಲಿ ಇಲ್ಲಿ ಸಾಲ ಸೋಲ ಮಾಡಿ ಚಿಕ್ಕ ಉದ್ದಿಮೆ ಆರಂಭಿಸಿದ ವ್ಯಕ್ತಿ ಈ ಘಟನೆಯಿಂದ ಕಂಗಾಲಾಗಿ, ಶಾಸಕ ಸವದಿ ಸ್ಥಳಕ್ಕಾಗಮಿಸಿದ ವೇಳೆ ಗೋಳೋ ಅಂತ ಅಳಲಾರಂಭಿಸಿ ಸರ್ಕಾರದ ಪರಿಹಾರಕ್ಕೆ ಆಗ್ರಹಿಸಿದ.ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿಯಾದ ಬಗ್ಗೆ ಮತ್ತು ಈ ಘಟನೆ ಯಾವ ರೀತಿ ನಡೆಯಿತು ಎಂದು ತಿಳಿದು ಬಂದಿಲ್ಲ.
ಈ ಸಂದರ್ಭದಲ್ಲಿ ಮುಖಂಡರಾದ ಶೇಖರ ಅಂಗಡಿ, ಮಹಾಂತೇಶ ಹಿಟ್ಟಿನಮಠ, ಶಂಕರಗೌಡ ಪಾಟೀಲ, ಚನ್ನಬಸು ಯರಗಟ್ಟಿ,ಆನಂದ ಕಂಪು, ಮುತ್ತಪ್ಪ ಕಲ್ಲೋಳ್ಳಿ, ದುಂಡಪ್ಪ ನಂದೆಪ್ಪನ್ನವರ, ಅಲ್ಲಪ್ಪ ಕಲ್ಲೋಳ್ಳಿ, ಮಹೇಶ್ ಜಿಡ್ಡಿಮನಿ, ಚೆನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಕಂಠಿ, ಲೋಹಿತ ನಂದೆಪ್ಪನ್ನವರ ಮುಂತಾದವರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 