ರಾಣೆಬೆನ್ನೂರ

ನಿವೃತ್ತರಾದ ಎಂ ಎಸ್ ಪಾಟೀಲ್ ಅವರ ಬೀಳ್ಕೊಡುಗೆ ಸಮಾರಂಭ

ನಿವೃತ್ತರಾದ ಎಂ ಎಸ್ ಪಾಟೀಲ್ ಅವರ ಬೀಳ್ಕೊಡುಗೆ ಸಮಾರಂಭ

ರಾಣೆಬೆನ್ನೂರು 15:  ಸಮಾಜದಲ್ಲಿ ಶಿಕ್ಷಕ ಸಮುದಾಯಕ್ಕೆ ವೇದ ಇತಿಹಾಸ ಕಾಲಗಳಿಂದಲೂ ಬಹುದೊಡ್ಡ ಗೌರವ ಮಾನ ಸನ್ಮಾನಗಳಿವೆ ಗುರುವಿಗೆ ಇರುವ ಸ್ಥಾನ ಬೇರೆ ಯಾರಿಗೂ ಇಲ್ಲ ಇದು ಶಿಕ್ಷಕ ಸಮುದಾಯಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು. ಅವರು  ಇಲ್ಲಿನ ಮೇಲಿರಿ ರಸ್ತೆಯ  ಎಂ.ಜಿ.ಇ. ಶಿಕ್ಷಣ ಸಂಸ್ಥೆಯ, ಲಯನ್ಸ್‌ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿ  ವಯೋ ಸಹಜ  ನಿವೃತ್ತರಾದ ಎಂ ಎಸ್ ಪಾಟೀಲ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 


ಸುದ್ದಿ ಓದಿ