ವಿದ್ಯುತ್ ಸ್ಪರ್ಶ: ಯುವ ರೈತನ ಸಾವು
ಲೋಕದರ್ಶನ ವರದಿ
ಯಲಬುರ್ಗಾ 30: ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಯುವ ರೈತ ಗವಿಸಿದ್ದಪ್ಪ ಹನುಮಪ್ಪ ಮುದೇನೂರ (27) ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಘಟನೆ ಗುರುವಾರ ಜರುಗಿದೆ. ಗುರುವಾರ ಜಮೀನಿನಲ್ಲಿ ಕೃಷಿ ಕೆಲಸ ನಿರ್ವಹಿಸುವಾಗ ವಿದ್ಯುತ್ ತಂತಿ ತಗುಲಿದೆ. ತೀವ್ರ ವಿದ್ಯುತ್ ಸ್ಪರ್ಶದಿಂದಾಗಿ ಯುವ ರೈತ ಗವಿಸಿದ್ದಪ್ಪ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಈ ಕುರಿತು ಯಲಬುರ್ಗಾ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ