ಸಕ್ಕರೆ ಕಾರ್ಖಾನೆಯ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಮಹಾಲಿಂಗಪುರ : ಗೋದಾವರಿ ಸೋಮಯ್ಯ ಸಕ್ಕರೆ ಕಾರ್ಖಾನೆಯ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮ ಪಟ್ಟಣಗಳ ರೈತರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಕಾರ್ಖಾನೆಯ ಆವರಣದಲ್ಲಿ ಲಾಭದಾಯಕ ಉತ್ತಮ ಫಸಲು, ಎಲ್ಲ ವರ್ಗದ ಜನತೆಯ ನೆಮ್ಮದಿಯ ಬದುಕಿಗೆ ಮತ್ತು ಆಡಳಿತ ಸುಗಮವಾಗಿ ನಡೆಯಲು ಸುಮಾರು 2ಗಂಟೆಗಳ ಕಾಲ ಘನ ಹೋಮ ನಡೆಯಿತು. ರೈತರು, ಕಾರ್ಖಾನೆಯ ಸಿಬ್ಬಂದಿಗಳು ಒಳಗೊಂಡಂತೆ ಅನೇಕರು ಈ ಸಮಯದಲ್ಲಿ ಶಾಂತಚಿತ್ತರಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಳೆದ 28ರಂದು ಬಾಯ್ಲ್ರಗೂ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. ಗುರುವಾರ ಹೋಮ ಹವನ ಪ್ರಕ್ರಿಯೆಗೆ ಮಂಗಲ ದೊರೆಯುತ್ತಲೆ ರೈತರೆಲ್ಲರೂ ಸೇರಿಕ್ಕೊಂಡು ಸಾಂಕೇತಿಕವಾಗಿ ಸಂಗ್ರಹ (ಕೇನ್ ಕ್ಯಾರಿಯರ್)ಗಾರಕ್ಕೆ ಕಬ್ಬು ಹಾಕಿ ಯಂತ್ರೋಪಕರಣಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದರು.
ಈ ಕಾರ್ಯಕ್ರಮಕ್ಕೆ ಸುಂದರ ಶಾಮಿಯಾನ ಮತ್ತು ಆಸನಗಳ ವ್ಯವಸ್ಥೆಯೊಂದಿಗೆ ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟ ಹಾಗೂ ಇನ್ನಿತರೆಯಾಗಿ ಯಾವುದೇ ಕೊರತೆಯಾಗದಂತೆ ಕಾರ್ಖಾನೆ ಸಿಬ್ಬಂದಿಗಳು ಶ್ರಮವಹಿಸಿದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಕಾರ್ಯದರ್ಶಿ ರಂಗನಗೌಡ ಪಾಟೀಲ್ ಸದಸ್ಯರಾದ ಲಕ್ಷ್ಮಣ ಹುಚ್ಚರಡ್ಡಿ, ಬಿ ಜಿ ಹೊಸೂರು, ಮಹಾದೇವ ಮಾರಾಪೂರ ಹಿರಿಯ ರೈತರಾದ ಕೃಷ್ಣಪ್ಪ ಕನಕರೆಡ್ಡಿ, ಬಸವಂತಪ್ಪ ಕಾಟೆ, ಮಲ್ಲಪ್ಪ ದೊಡಮನಿ, ಕೆ ಟಿ.ಧಾರವಾಡ, ಸುಭಾಸ ಬೋರಡ್ಡಿ, ಮಹಾಂತಪ್ಪ ನಾಲ್ವತ್ತವಾಡ, ಶಿವಲಿಂಗ ಕೌಜಲಗಿ, ಮಹಾಲಿಂಗ ಸನದಿ, ಬಸವರಾಜ ಮುಕುಂದ, ರಾಜೇಂದ್ರ ದೊಡಮನಿ, ಪಿಯೂಸ್ ಓಸ್ವಾಲ್, ಬಸವರಾಜ ರಾಯರ, ಮಹಾಲಿಂಗ ಇಟ್ನಾಳ, ಭೀಮಶಿ ಮಗದುಮ, ರಾಮಣ್ಣ ಮಳಲಿ, ಪಿ ಜಿ. ಬಂಗಿ, ಯಲ್ಲಪ್ಪ ಉಪ್ಪಾರ, ರವಿ ಬ್ಯಾಳಿ, ಮಲ್ಲಪ್ಪ ಲದ್ದಿ, ಶಿವು ಅಂಗಡಿ, ಸಿದ್ದಪ್ಪ ಕೋರಿಶೆಟ್ಟಿ, ಕಾರ್ಖಾನೆಯ ರಾಹುಲ್ ಭಕ್ಷಿ, ಅಲಕಾ ಭಕ್ಷಿ, ಸಿಂಧೂಜಾ ಭಕ್ಷಿ, ಅಧಿಕಾರಿಗಳಾದ ಬಿ ಆರ್ ಭಕ್ಷಿ, ರಾಮಚಂದ್ರ, ಈರಣ್ಣ ಕಣಬೂರ, ಅತೂಲ್ ಅಗರವಾಲ್, ರಾಮಚಂದ್ರ ಸೋನವಾಲ್ಕರ ಮತ್ತು ಮಜ್ದೂರ್ ಯುನಿಯನ್ ಪದಾಧಿಕಾರಿಗಳು, ಕಾರ್ಮಿಕರು, ಸಾವಿರಾರು ಸಂಖ್ಯೆಯ ರೈತರು ಪಾಲ್ಗೊಂಡಿದ್ದರು