ರಾಮದುರ್ಗ

ಪಾಥಮಿಕ ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ

ಪಾಥಮಿಕ ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ರಾಮದುರ್ಗ 10: ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಅಗತ್ಯವಿದ್ದ ಕೆಲಸಗಳನ್ನು ಆದ್ಯತೆ ಮೆರೆಗೆ ಕಾಮಗಾರಿ ಪ್ರಾರಂಭಿಸಲಾಗಿದೆ, ಇನ್ನುಳಿದ ರಸ್ತೆ ಮತ್ತು ಇತರ ಕಾಮಗಾರಿಗಳ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿ ಕಾಮಗಾರಿ ಕೈಕೊಳ್ಳಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ನುಡಿದರು. 

ತಾಲೂಕಿನ ಆರಿಬೆಂಚಿ ಪಾಥಮಿಕ ಶಾಲೆಯ 2 ನೂತನ ಕಟ್ಟಡಕ್ಕೆ ರೂ. 22 ಲಕ್ಷ, ಆರಿಬೆಂಚಿ ತಾಂಡಾ ಶಾಲೆಯ 2 ನೂತನ ಕಟ್ಟಡಕ್ಕೆ ರೂ. 22 ಲಕ್ಷ, ಬನ್ನೂರ ತಾಂಡಾದಿಂದಾ ಆರಿಬೆಂಚಿ ತಾಂಡಾದ ವರೆಗೆ ರಸ್ತೆ ಸುಧಾರಣೆಗೆ ರೂ. 37.75 ಲಕ್ಷ. ಬನ್ನೂರಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಸಿಸಿ ರಸ್ತೆಗೆ ರೂ. 1 ಕೋಟಿ, ದಾಡಿಬಾವಿ ತಾಂಡಾದಲ್ಲಿ ಅಂಗನವಾಡಿ ಕಟಡ ನಿಮರ್ಾಣಕ್ಕೆ ರೂ. 18 ಲಕ್ಷ. ಓಗಳಾಪೂರ ಎಸ್ ಎಲ್ ಟಿ ಮತ್ತು ಆರ್ ಎಲ್ ಟಿ ರಸ್ತೆ ಸುಧಾರಣೆಗೆ ರೂ. 62.25 ಲಕ್ಷ ಹಾಗೂ ದಾಡಿಬಾವಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1 ಕೊಠಡಿ ನಿಮರ್ಾಣಕ್ಕೆ ರೂ. 11 ಲಕ್ಷ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಗ್ರಾಮಗಳ ಪ್ರಮುಖರು ಕಾಮಗಾರಿಯ ನಡೆದ ಸಂದರ್ಭದಲ್ಲಿ ಕಳಕಳಿಯಂದಾ ಮೇಲುಸ್ತುವಾರಿ ಮಾಡಿ ಇಲಾಖೆ ಅಧಿಕಾರಿಗಳು ವೀಕ್ಷಣೆಗೆ ಬಂದಾಗ ಏನಾದರೂ ಕಾಮಗಾರಿಯಲ್ಲಿ ವ್ಯತ್ಯಾಸ ಕಂಡು ಬಂದರೆ ಅವರ ಗಮನಕ್ಕೆ ತಂದು ಗುಣಾತ್ಮಕ ಕಾಮಗಾರಿಯಾಗುವಂತೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಾ ಲಮಾಣಿ, ಎಪಿಎಮ್ ಸಿ ಉಪಾಧ್ಯಕ್ಷ ಪ್ರಕಾಶ ಬರದೇಲಿ, ಜಿಲ್ಲಾ ಪಂಚಾಯತ ಇಲಾಖೆ ಸಹಾಯಕ ಅಭಿಯಂತರ ಗದಿಗೆಪ್ಪ ಕುರ್ತಕೋಟಿ, ಸಹಾಯಕ ಅಭಿಯಂತರರಾದ ಬಿ ಐ ಕಕರ್ಿ, ಸಿ ಟಿ ಚವ್ಹಾಣ, ಅಶ್ವೀನಿ ಚಿಟಗುಪ್ಪಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು 

ಸುದ್ದಿ ಓದಿ