ಬಸವ ಜಯಂತಿ ಹಾಗೂ ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಣೆ

ಬಸವ ಜಯಂತಿ ಹಾಗೂ ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಣೆ

ಲೋಕದರ್ಶನ ವರದಿ

ಬೆಳಗಾವಿ, 9: ಬಸವಣ್ಣನವರ ವಿಚಾರ ಧಾರೆಗಳು ಜಾಗತಿಕ ಮಟ್ಟದಲ್ಲಿ ಚರ್ಚೆ ಯಾಗುತ್ತಿರುವ ಈ ಸಂದರ್ಭದಲ್ಲಿ ಬಸವಣ್ಣನವರ ವಿಚಾರ ಧಾರೆಗಳನ್ನು ನಾವಿಂದು ನಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಪ್ರತಿನಿತ್ಯ ಪಾಲಿಸಬೇಕು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.

ಲಿಂಗಾಯತ ಸೇವಾ ಸಮಿತಿ, ಬಸವ ಪ್ರತಿಷ್ಠಾನ, ಸಂಚಾರಿ ಗುರು ಬಸವ ಬಳಗ ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ಆಶ್ರಯದಲ್ಲಿ ನಗರದ ಶ್ರೀ ದಾನಮ್ಮ ದೇವಿ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಹಾಗೂ ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅತ್ಯಂತ ಆರ್ಥಪೂರ್ಣವಾಗಿ ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿರುವದಕ್ಕೆ ಆಯೋಜಕರನ್ನು ಅಭಿನಂದಿಸಿದ ಅವರು, ಕೇವಲ ಜಯಂತಿಯನ್ನು ಆಚರಿಸದೆ, ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುತ್ತಿರುವದು ಸಂತಸ ತಂದಿದೆ. ಬಸವ ಜಯಂತಿ ಕಾರ್ಯಕ್ರಮಗಳಿಗೆ ತಮ್ಮಿಂದ ಬಯಸುವ ಎಲ್ಲ ಸಹಕಾರ ನೀಡುವದಾಗಿ ಭರವಸೆ ನೀಡಿದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, 12 ನೇ ಶತಮಾನದಲ್ಲಿಯೇ ಬಸವಣ್ಣನವರು ವರ್ಣ ಮತ್ತು ವರ್ಗ ವ್ಯವಸ್ಥೆಯ ವಿರುದ್ಧ ಸಮಾನತೆಯ ಸಮಾಜ ನಿರ್ಮಿ ಸುವ ಸಮಾನತೆಯ ಕ್ರಾಂತಿ ಆರಂಭಿಸಿದ್ದರು. ಕೆಳ ವರ್ಗದ ಜನರನ್ನು ಮೃಗಗಳಿಗಿಂತ ಕಡೆಯಾಗಿ ಕಾಣುತ್ತಿದ್ದ ಅಂದಿನ ದಿನಮಾನಗಳಲ್ಲಿ ಕೆಳ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿದ್ದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ಜಾರಿಗೆ ತಂದಿದ್ದರು. ಸಮಾನತೆಯ ಸಮಾಜ ನಿಮರ್ಾಣದ ಆ ಕ್ರಾಂತಿಯನ್ನು ನಾವಿಂದು ಮುಂದುವರೆಸಬೇಕಾಗಿದೆ 

ಎಂದರು.

ಬಸವ ಜಯಂತಿಯ ಕಾರ್ಯಕ್ರಮಗಳು ಕೇವಲ ಬೆಳಗಾವಿ ಉತ್ತರಕ್ಕೆ ಸೀಮಿವಾಗಿದ್ದವು. ದಕ್ಷಿಣ ಭಾಗದಲ್ಲೂ ಬಸವ ಜಯಂತಿಯ ಕಾರ್ಯಕ್ರಮಗಳು ನಡೆಯಬೇಕು ಎಂಬ ಉದ್ದೇಶದಿಂದ ಲಿಂಗಾಯತ ಸೇವಾ ಸಮಿತಿಯನ್ನು ಸ್ಥಾಪಿಸಿ, ಆ ಸಮಿತಿಯ ಮೂಲಕ ಖಾಸಬಾಗದ ಬಸವೇಶ್ವರ ವೃತ್ತದಲ್ಲಿ 18 ಅಡಿ ಎತ್ತರದ ಬಸವಣ್ಣನವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಬಸವ ಜಯಂತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.

ನಗರ ಸೇವಕ ದೀಪಕ ಜಮಖಂಡಿ ಮಾತನಾಡಿ, ಈ ಹಿಂದೆ ದಕ್ಷಿಣ ಭಾಗದಲ್ಲಿ ಬಸವ ಜಯಂತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಕಾರಣಾಂತರಗಳಿಂದ ನಿಂತು ಹೋಗಿದ್ದ ಕಾರ್ಯಕ್ರಮಗಳಿಗೆ ಮತ್ತೆ ಚಾಲನೆ ನೀಡಿರುವ ಲಿಂಗಾಯತ ಸೇವಾ ಸಮಿತಿಯ ಪದಾಧಿಕಾರಿಗಳು ಅಭಿನಂದನಾರ್ಹರು. ಇವ ನಮ್ಮವ ಇವ ನಮ್ಮವ ಎಂಬ ಬಸವಣ್ಣನವರ ಸಂದೇಶದಂತೆ ಎಲ್ಲರು ಒಂದಾಗಿ ಬಸವ ತತ್ವಗಳನ್ನು ಪಾಲಿಸಬೇಕಾಗಿದೆ ಎಂದರು.

ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಿಂದ ಬಸವ ಸಮಾಜದಲ್ಲಿ ಜಾಗೃತಿ ಮೂಡಿದೆ. ಧರ್ಮದ ಹೋರಾಟದಿಂದ ಸಮಾಜ ಒಡೆದಿಲ್ಲ. ಬಸವ ಸಮಾಜ ಒಂದಾಗುವತ್ತ ಹೆಜ್ಜೆ ಹಾಕುತ್ತಿದೆ. ಬಸವಣ್ಣ ಎಂದರೆ ಕೇವಲ ಲಿಂಗಾಯತರಲ್ಲ. ಲಿಂಗಾಯತರು ಸೇರಿದಂತೆ 99 ಜಾತಿ ಉಪಜಾತಿಗಳಿಂದ ಕೂಡಿರುವ ಬಸವ ಸಮಾಜ ಬಹುದೊಡ್ಡ ಸಮಾಜವಾಗಿದೆ ಎಂದರು.  

99 ಜಾತಿ ಉಪಜಾತಿಗಳು. ನಾಲ್ಕುವರೆ ಕೋಟಿ ಜನಸಂಖ್ಯೆ. ಎರಡು ಸಾವಿರಕ್ಕೂ ಹೆಚ್ಚು ಮಠಮಾನ್ಯಗಳನ್ನು ಹೊಂದಿರುವ ಬಸವ ಪರಿವಾರ ಬಸವ ತತ್ವದ ಅಡಿಯಲ್ಲಿ ಒಂದಾಗುವ ಮೂಲಕ ಕಲಿಯುಗದಲ್ಲಿ ಕಲ್ಯಾಣ ರಾಜ್ಯವನ್ನು ಸ್ಥಾಫಿಸಬೇಕಾಗಿದೆ. ಸಮಾಜದಲ್ಲಿ ಬಸವ ಧರ್ಮದ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಬಸವ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ವಚನ ಕಂಠ ಪಾಠ, ಬಸವಾದಿ ಶರಣರ ಪ್ರಬಂಧ ಸ್ಪರ್ಧೆ ಗಳ ವಿಜೇತರಿಗೆ ಹಾಗೂ  ಪಿಯುಷಿ ಮತ್ತು ಮೆಟ್ರಿಕ್ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭೆಗಳಿಗೆ ತೇಲಸಂಗ ಉದ್ಯೋಗ ಸಮೂಹ ಸಂಸ್ಥೆ ಹಾಗೂ ಬಸವ ಪ್ರತಿಷ್ಠಾನದಿಂದ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.

ಲಿಂಗಾಯತ ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ ತೇಲಸಂಗ, ತೇಲಸಂಗ ಉದ್ಯೋಗ ಸಂಸ್ಥೆಗಳ ಅಧ್ಯಕ್ಷೆ ವಿದ್ಯಾ ತೇಲಸಂಗ, ಗುರುಬಸಪ್ಪ ಚೊಣ್ಣದ, ಡಾ. ಎಸ್.ಎಂ.ದೊಡಮನಿ, ಅರವಿಂದ ಪರುಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ರಾಜು ಕುಂದಗೋಳ ಸ್ವಾಗತಿಸಿದರು. ಮಹಾಂತೇಶ ತೋರಣಗಟ್ಟಿ ನಿರೂಪಿಸಿದರು.

ಸುದ್ದಿ ಓದಿ