ಅಭಿವೃದ್ಧಿಯೆ ಮೂಲ ಮಂತ್ರ ; 1ಕೋಟಿ ರೂ. ವೆಚ್ಚದ ಸಿಸಿ ರಸ್ತೆಗೆ ಚಾಲನೆ

ಅಭಿವೃದ್ಧಿಯೆ ಮೂಲ ಮಂತ್ರ ; 1ಕೋಟಿ ರೂ. ವೆಚ್ಚದ ಸಿಸಿ ರಸ್ತೆಗೆ ಚಾಲನೆ

            ಬೀದರ್ 23: ನನ್ನ ಕಾರ್ಯದ ಅವಧಿಯಲ್ಲಿ ಅಭಿವೃದ್ಧಿಯೇ ಮುಖ್ಯ ಮಂತ್ರವಾಗಿದೆ. ರಸ್ತೆ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಎಲ್ಲಾ ಗ್ರಾಮಗಳಲ್ಲಿ ಸಮರ​‍್ಿತ ಹಾಗೂ ಸಮನ್ವಿತ ಕ್ರಮಗಳಿಂದ ಜನರ ಜೀವನಮಟ್ಟವನ್ನು ಉನ್ನತಗೊಳಿಸುವುದು ನನ್ನ ಪ್ರಮುಖ ಗುರಿಯಾಗಿದೆ. ಅಭಿವೃದ್ಧಿಯ ದಾರಿಗೆ ನಿಮ್ಮ ಸಹಕಾರ ಅಗತ್ಯ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗೋರನಳ್ಳಿ ಗ್ರಾಮದ ಶಿವಾಜಿನಗರ ಹಾಗೂ ತೋರಣ ಕಾಲೋನಿಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದ ಜನರ ಸುಲಭ ಜೀವನಕ್ಕಾಗಿ ಹಾಗೂ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಸ್ಥಳೀಯ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು .

             ರಸ್ತೆಗಳು, ನೀರು, ವಿದ್ಯುತ್, ಶಾಲೆಗಳು, ಆರೋಗ್ಯ ಸೇವೆಗಳು ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು.ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಒಂದಿಲ್ಲೊಂದು ರೀತಿಯ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದೇನೆ. ರಸ್ತೆ, ಕುಡಿಯುವ ನೀರು, ನೀರಾವರಿ, ಶಾಲೆ ಕಟ್ಟಡ, ಸಮುದಾಯ ಭವನ, ಕಲ್ಯಾಣ ಮಂಟಪ, ವಿಧ್ಯುತ ದ್ವೀಪ ಹೀಗೆ ಅನೇಕ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದೇನೆ. ಕ್ಷೇತ್ರದ ಜನತೆಗಾಗಿ ಹಲವಾರು ದೊಡ್ಡ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದೇನೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಕಂಡುಬರುವ ಗುಣಮಟ್ಟದ ಮೂಲಸೌಕರ್ಯಗಳು ಆಯಾ ಗ್ರಾಮಗಳ ಪ್ರಗತಿಯ ಸಂಕೇತವಾಗಲಿದೆ.

              ನನ್ನ ಕಾರ್ಯ ಸಾರ್ವಜನಿಕರ ಸುಖ, ಕ್ಷೇಮ ಮತ್ತು ಅಭಿವೃದ್ಧಿಗೆ ಸಮರ​‍್ಿತವಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಕೇಳಿ, ಪರಿಹಾರ ಕಂಡು ನೀಡುವುದು ನನ್ನ ಪ್ರಮುಖ ಉದ್ದೇಶ. ನಿಮ್ಮ ಬೆಂಬಲ ಮತ್ತು ಸಹಕಾರದಿಂದ ನಮ್ಮ ಪ್ರದೇಶದ ಅಭಿವೃದ್ಧಿಗೆ ನಾನು ಸದಾ ಕೆಲಸ ಮಾಡುತ್ತೇನೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಮುಖಂಡರಾದ ಉದಯಕುಮಾರ ತೋರಣ, ಘಾಳೇಪ್ಪ ತೋರಣ, ಮಲ್ಲಿಕಾರ್ಜುನ ಚಿಟ್ಟಾ ವಾಡಿ, ಸಂಜುಕುಮಾರ ಯದಲಾಪುರ, ಉಮೇಶ್ ಯಾಬಾ, ಶರಣಯ್ಯಾ ಸ್ವಾಮಿ,ಮಹೇಶ ತೋರಣ, ಆಕಾಶ ಕೋಟೆ, ಗೋಪಾಲ ರೆಡ್ಡಿ, ಮಹೇಶ ಮದರಗಿ ಸಂಗಮೇಶ ಸ್ಥಳೀಯರು ಮತ್ತಿತರರು ಉಪಸ್ಥಿತರಿದ್ದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ ಸಹಾಯಕ ನಾಗೇಶ ಸಿದ್ದಾ. 


ಸುದ್ದಿ ಓದಿ