ವಾರದಲ್ಲಿ ಐದು ದಿನಗಳ ಬ್ಯಾಂಕಿಂಯಿಯಿಗ್ ಸೇವೆಗೆ ಆಗ್ರಹ
ಕಲಬುರಗಿ 31: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಗಳು ಹಾಗೂ ಒಂಬತ್ತು ಬ್ಯಾಂಕುಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವಾರದಲ್ಲಿ ಐದು ದಿನಗಳು ಮಾತ್ರ ಬ್ಯಾಂಕ್ ಸೇವೆ ನೀಡಬೇಕು ಎಂಬ ಆಗ್ರಹಿಸಿ ನಗರದ ಎಸ್ ಬಿ.ಐ. ಸ್ಟೇಷನ್ ಬಜಾರ್ ಶಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಗಈಃಗ ಕಲಬುರಗಿ ಕಾರ್ಯದರ್ಶಿ ಚಂದ್ರಮೋಹನ್, ಎಸ್ಬಿಐ ಅಧಿಕಾರಿಗಳ ಸಂಘಟನೆಯ ರವಿಗೌಡ, ಎಸ್ಬಿಐ ನೌಕರರ ಸಂಘದ ನವೀನ್ ಕಾಗಲಕರ್ ಸೇರಿದಂತೆ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಬ್ಯಾಂಕ್ ನೌಕರರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವುದು, ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ಗ್ರಾಹಕ ಸೇವೆಯ ಗುಣಮಟ್ಟವನ್ನು ಉತ್ತಮಗೊಳಿಸುವ ಉದ್ದೇಶದಿಂದ ವಾರದಲ್ಲಿ ಐದು ದಿನಗಳ ಬ್ಯಾಂಕ್ ಕಾರ್ಯಾವಧಿ ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.