ರಬಾಕಾವಿಬನಹಟ್ಟಿ

ಅದ್ಧೂರಿ ಬಸವ ಜಯಂತಿ ಆಚರಿಸಲು ನಿರ್ಧಾರ

ಅದ್ಧೂರಿ ಬಸವ ಜಯಂತಿ ಆಚರಿಸಲು ನಿರ್ಧಾರ

ರಬಕವಿ-ಬನಹಟ್ಟಿ : 12 ನೇ ಶತಮಾನದ ಮಹಾನ್ ದಾರ್ಶನಿಕರಾದ ಬಸವಣ್ಣನವರ ಜಯಂತಿಯನ್ನು ರಬಕವಿ-ಬನಹಟ್ಟಿ ತಾಲೂಕಾ ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬನಹಟ್ಟಿಯ ಬಸವ ಸಮಿತಿ ಅಧ್ಯಕ್ಷ ಶಂಕರ ಹೋಳಗಿ ಹೇಳಿದರು.

ಬನಹಟ್ಟಿಯ ಆಸಂಗಿ ರಸ್ತೆಯ ಮುಮುಕ್ಷ ಮಠದಲ್ಲಿ ಜರುಗಿದ  ಬಸವ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬಸವ ಕೇಂದ್ರ, ರಾಷ್ಟ್ರೀಯ ಬಸವದಳ, ಮನೆಯಲ್ಲಿ ಮಹಾಮನೆ ಸಮಿತಿ, ಸಿಧ್ಧಾರೂಡ ಮಠದ ಬಳಗ ಮತ್ತಿತ್ತರ ಸಂಘ-ಸಂಸ್ಥೆಗಳ ಅಡಿಯಲ್ಲಿ   ಜಯಂತಿಯ ಆಚರಿಸಲಾಗುವುದು. ಜಯಂತಿ ಪ್ರಯುಕ್ತ ದಿ. 21 ಮತ್ತು 22 ವಚನ ದರ್ಶನ ಎಂಬ ವಿಷಯ ಕುರಿತು ನದಿಇಂಗಳಗಾಂವಿಯ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಇವರಿಂದ ಪ್ರವಚನವನ್ನು ಬೈಲಹೊಂಗಲದ ಮಹಾದೇವ ಸರಸ್ವತಿ ಮಹಾಸ್ವಾಮಿಗಳು ಇವರ ಸಾನಿಧ್ಯದಲ್ಲಿ ಜರುಗಲಿದ್ದು, ದಿ.23ರಂದು ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ಬಸವ ಭಾವಚಿತ್ರದ ಬೃಹತ್ ಮೆರವಣಿಗೆ ಬನಹಟ್ಟಿ ನಗರದ ಪ್ರಮುಖ ರಸ್ತೆಗಳ ಮುಖಾಂತರ ಸಾಗಿ ಮುಮುಕ್ಷ ಮಠದಲ್ಲಿ ಮಂಗಲಗೊಳ್ಳವುದು ಎಂದು ತಿಳಿಸಿದರು.

ಭೀಮಶಿ ಹಾದಿಮನಿ, ಮಹಾಂತ ದೇವರು, ರಮೇಶ ಮಂಡಿ, ರಮೇಶ ಸೋರಗಾಂವಿ, ಈರಣ್ಣಾ ಶಿರಹಟ್ಟಿ ಸೇರಿದಂತೆ ಬಸವಾಭಿಮಾನಿಗಳು ಹಾಗೂ ಸದ್ಭಕ್ತರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.


ಸುದ್ದಿ ಓದಿ