ಜ.22ರವರೆಗೆ ಪ್ರತಿ ನಿತ್ಯ ದಾನಮ್ಮದೇವಿ ಮಹಾಪುರಾಣ
Danammadevi Mahapurana every day till January 22nd
ಸಿಂದಗಿ 16: ನಗರದಲ್ಲಿ ಬಾಳೆಹೊನ್ನುರ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪಾವನ ಸಾನಿಧ್ಯದಲ್ಲಿ ಸಿಂದಗಿ ಬಸ್ ಡಿಪೋ ಬಳಿ ಇರುವ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ 30ನೇ ಜಾತ್ರಾ ಮಹೋತ್ಸವದ ಅಂಗವಾಗಿ ದಾನಮ್ಮದೇವಿ ಮಹಾಪುರಾಣವನ್ನು ಜ.15 ರಿಂದ ಜ.22ರ ವರೆಗೆ ಪ್ರತಿ ನಿತ್ಯ ಸಾಯಂಕಾಲ 6:30ಗಂಟೆಗೆ ಜರುಗಲಿದೆ. ಪುರಾಣವನ್ನು ಯಂಕಂಚಿಯ ವೀರಭದ್ರಯ್ಯ ಶಾಸ್ತ್ರೀಗಳು, ಸಂಗೀತ ಸೇವೆಯನ್ನು ಕೆರೂಟಗಿಯ ರೇಣುಕ ಗವಾಯಿಗಳು, ತಬಲಾ ವಾದಕರಾಗಿ ಜೇವರ್ಗಿಯ ಮಹಾಂತೇಶ ಕಾಳಗಿ ಇರಲಿದ್ದಾರೆ ಎಂದು ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಜ.22ರಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಲ್ಲಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 10ಗಂಟೆಗೆ ಉಚಿತ ನೇತ್ರ ತಪಾಸಣೆ ಹಾಗೂ ನಾಲವಾರದ ಆದಿಶೇಷ ಸಂಸ್ಥಾನ ಹಿರೇಮಠದ ಕಾಯಕಯೋಗಿ, ಪವಾಡ ಪುರುಷ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ಜಹಗಿರದಾರ ಶ್ರೀಗಳ 55ನೇ ವರ್ಷದ ಅನುಷ್ಠಾನ ಸುಮರ್ಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಜನತೆ ಹಾಗೂ ಶ್ರೀಮಠದ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜ.23ರಂದು ಬೆಳಗಿನ ಬ್ರಾಹ್ಮೀ ಮುಹೂರ್ತದ 5ಗಂಟೆಗೆ ಆಶ್ಲೇಷ ನಾಗಪೂಜೆ, ಕುಜದೋಷ, ಕಾಳಸರ್ ದೋಷ, ಸುದರ್ಶನ ಹೋಮ ಈ ಎಲ್ಲ ದೋಷಗಳ ಪರಿಹಾರ ನೀಡಲಾಗುವುದು.
ಕುಂಭ, ಕಳಸ ವಾದ್ಯ ಮೇಳಗಳ ಮೂಲಕ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ನಡೆಯುವುದು. ಬಳಿಕ ಬೆಳಿಗ್ಗೆ 11:39ಕ್ಕೆ ಆದಿಶೇಷ ಸಂಸ್ಥಾನ ಶ್ರೀಮಠದ ಆವರಣದಲ್ಲಿ ಹರಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಹಾಗೂ ರಾಜಕಾರಣಿಗಳ ಉಪಸ್ಥಿತಿಯಲ್ಲಿ ಧರ್ಮ ಸಮಾವೇಶ ನಡೆಯಲಿದೆ. ಜ.23ರಂದು ಮುತೈದೆಯರ ಉಡಿ ತುಂಬುವ, ಅಯ್ಯಾಚಾರ, ಲಿಂಗದೀಕ್ಷೆ ಹಾಗೂ ಆದಿಶೇಷ ದೇವಸ್ಥಾನದ ನೂತನ ಶಿಲಾ ವಿನ್ಯಾಸ ಕಾರ್ಯಕ್ರಮಗಳು ಜರಗುವವು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 