ಮಕ್ಕಳಿಂದ ದೇಶ ಭಕ್ತಿ ಗೀತೆ ಹಾಡಿಸಿ ನೃತ್ಯ ಮಾಡಿಸಬೇಕು: ಪಾಟೀಲ

ಮಕ್ಕಳಿಂದ ದೇಶ ಭಕ್ತಿ ಗೀತೆ ಹಾಡಿಸಿ ನೃತ್ಯ ಮಾಡಿಸಬೇಕು: ಪಾಟೀಲ

ಕೊಲ್ಹಾರ, ಜ.5 : ಮಕ್ಕಳಿಗೆ ಸಿನಿಮಾ ಹಾಡುಗಳಿಂದ ನೃತ್ಯ ಮಾಡಿಸದೆ ಮಕ್ಕಳಿಂದ ದೇಶ ಭಕ್ತಿ ಗೀತೆಗಳನ್ನು ಹಾಡಿಸಿ ಅವರಿಂದ ನೃತ್ಯ ಮಾಡಿಸಬೇಕು ಜಾನಪದ ವಿದ್ವಾಂಸ ಪೊಲೀಸ್ ಪಾಟೀಲ ಹೇಳಿದರು. ಪಟ್ಟಣದ ಶ್ರೀ ಸಂಗಮೇಶ್ವರ ಶಿಶು ವಿಹಾರ, ಹಿರಿಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು ಪ್ರತಿಯೊಬ್ಬ ಪಾಲಕರು ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಕಲ್ಪಿಸಬೇಕಾಗಿದೆ ಇಂದಿನ ನಮ್ಮ ಮಕ್ಕಳು ಮೊಬೈಲದಲ್ಲಿ ಕಳೆದು ಹೋದರೆ ಹೆಣ್ಣು ಮಕ್ಕಳು ಧಾರಾವಾಹಿಯಲ್ಲಿ ಕಳೆದು ಹೋಗಿದ್ದಾರೆ ಇನ್ನೂ ಗಂಡುಮಕ್ಕಳು ಇಸ್ಪೀಟ್ ಅಡ್ಡೆ ಯಲ್ಲಿ ಕಳೆದು ಹೋಗಿದ್ದಾರೆ ಮಕ್ಕಳ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಶಿಕ್ಷಣದ ಜೊತೆಗೆ ಪ್ರತಿಯೊಬ್ಬ ಪಾಲಕರು ಸಂಸ್ಕಾರ ಕಲಿಸಬೇಕಾಗಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ ಯು ಗಿಡ್ಡಪ್ಪಗೋಳ ವಹಿಸಿದ್ದರು. ಸಂಘದ ನಿರ್ದೇಶಕರು ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಸಿ ಎಸ್ ಗಿಡ್ಡಪ್ಪಗೋಳ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಈ ವೇಳೆ ಸಂಘದ ನಿರ್ದೇಶಕರಾದ ಎನ್ ಕೆ ಮೇಲಗಿರಿ,ಎಸ್ ಸಿ ಕುಂಬಾರ, ಎಸ್ ಜಿ ಗಿಡ್ಡಪ್ಪಗೋಳ, ಎಸ್ ಎಂ ಶೀಲವಂತ, ಟಿ ಟಿ ಹಗೇದಾಳ ಇತರರು ಉಪಸ್ಥಿತರಿದ್ದರು 


ಸುದ್ದಿ ಓದಿ