ಮಹಲಿಂಗಪುರ

ಚಂದ್ರಶೇಖರ್ ದಾದನಟ್ಟಿ ಗೆ ಜಿಲ್ಲಾ ಆದರ್ಶ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ.

ಚಂದ್ರಶೇಖರ್ ದಾದನಟ್ಟಿ ಗೆ ಜಿಲ್ಲಾ ಆದರ್ಶ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ.
 ಮಹಾಲಿಂಗಪುರ :ಸಮೀಪದ ಶ್ರೀ ಢವಳನಾಥ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಚಂದ್ರಶೇಖರ್ ದಾದನಟ್ಟಿ ಅವರಿಗೆ 2023 ನೇ ಸಾಲಿನಲ್ಲಿ ಕೊಡ ಮಾಡುವ ಬಾಗಲಕೋಟ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
 ತಮ್ಮ 18 ವರ್ಷದ ಸೇವಾ ಅವಧಿಯಲ್ಲಿ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಸತತ 15 ವರ್ಷ ಖೋ ಖೋ ತಂಡ ಪ್ರಥಮ,  15 ವರ್ಷವೂ ತಾಲೂಕು ಮಟ್ಟಕ್ಕೆ ಪ್ರವೇಶ ಪಡೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ವೈಯಕ್ತಿಕ ಕ್ರೀಡೆಗಳಲ್ಲಿ ರಾಜ್ಯ ಹಂತದವರೆಗೂ ಪ್ರವೇಶ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮತ್ತು ಮಕ್ಕಳೊಂದಿಗೆ ಸದಾ ಬೆರೆಯುವ ಚಟುವಟಿಕೆಯಿಂದ ಇರುವ ಸೌಮ್ಯ ಸ್ವಭಾವದ ಚಂದ್ರಶೇಖರ್ ಅವರಿಗೆ ಪ್ರಶಸ್ತಿ ದೊರೆತಿದ್ದಕ್ಕಾಗಿ ಶಾಲೆಯ ಶಿಕ್ಷಕ ವೃಂದದವರು ಎಸ್ ಡಿ ಎಮ್ ಸಿ   ಸದಸ್ಯರು ಅಧ್ಯಕ್ಷರು ತಾಲೂಕಿನ ಶಿಕ್ಷಕ ಗುರು ಬಳಗದವರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸುದ್ದಿ ಓದಿ