ಆತ್ಮನಿರ್ಭರ ಭಾರತದತ್ತ ಕೇಂದ್ರದ ದೃಢವಾದ ಹೆಜ್ಜೆ : ಶಾಸಕ ಡಾ.ಬೆಲ್ದಾಳೆ ; ವ್ಯಾಖ್ಯಾನಆರ್ಥಿಕತೆಗೆ ವೇಗ ನೀಡುವ ಬಜೆಟ್
ಬೀದರ್ 01: ಕೇಂದ್ರದ ಬಜೆಟ್ ದೇಶದ ಆರ್ಥಿಕತೆಗೆ ಮತ್ತಷ್ಟು ವೇಗ ನೀಡುವ ಹಾಗೂ ಸರ್ವರ ಹಿತದಿಂದ ಕೂಡಿದೆ. ಮೇಕ್ ಇನ್ ಇಂಡಿಯಾಗೆ ಆದ್ಯತೆ ಮುಖಾಂತರ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಲಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ಸಬ್ ಕಾ ವಿಶ್ವಾಸ್ ಗಳಿಸುವ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನೇತೃತ್ವ ಮತ್ತು ವಿಕಸಿತ, ವಿಶ್ವಗುರು ಭಾರತ ನಿರ್ಮಾಣದ ಅವರ ದೂರದೃಷ್ಟಿತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ದೇಶದ ಅರ್ಥ ಕ್ರಾಂತಿಗೆ ಹೊಸ ಮುನ್ನುಡಿ ಬರೆಯುವ ಅಂಶಗಳನ್ನು ಹೊಂದಿದೆ. ಬಡವರು, ಯುವಕರು, ರೈತರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಶಕ್ತಿ ತುಂಬಲು ಒತ್ತು ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗೆ ಒಂದು ವಸತಿ ನಿಲಯ ಸ್ಥಾಪನೆ ಮಹತ್ವದ ಕ್ರಮವಾಗಿದೆ. ತಂತ್ರಜ್ಞಾನದಲ್ಲಿ ಸ್ವದೇಶಿ ಬಳಕೆಯತ್ತ ಚಿತ್ತ ಹರಿಸಲಾಗಿದೆ.
ಪರಮಾಣು ಶಕ್ತಿ ಯೋಜನೆ ಮೂಲಕ ಬರುವ ದಶಕದಲ್ಲಿ ರಕ್ಷಣೆ ಸೇರಿ ವಿವಿಧ ಕ್ಷೇತ್ರಗಳ ಬಲವರ್ಧನೆಗೆ ಯೋಜನೆ ಹಾಕಿಕೊಂಡಿರುವುದು ವಿಶೇಷ ಎಂದು ಬಣ್ಣಿಸಿದ್ದಾರೆ.ಜನಾರೋಗ್ಯ ಕಾಳಜಿಗೆ ಹೆಚ್ಚು ಗಮನ ನೀಡಲಾಗಿದೆ. ಕ್ಯಾನ್ಸರ್, ಶುಗರ್ ಸೇರಿ ವಿವಿಧ 17 ಕಾಯಿಲೆಗಳ ಓಷಧಿ ಬೆಲೆ ಕಮ್ಮಿ ಮಾಡಲಾಗಿದೆ. ಹೊಸ ಹೈಸ್ಪೀಡ್ ರೈಲು ಮಾರ್ಗಗಳು ಸ್ಥಾಪಿಸಲಾಗುತ್ತಿದ್ದು, ಹೈದರಾಬಾದ್-ಬೆಂಗಳೂರು ಮಾರ್ಗ ಸೇರಿಸಿರುವುದು ನಮ್ಮ ಭಾಗದವರಿಗೆ ಅನುಕೂಲ ಕಲ್ಪಿಸಲಿದೆ. ಕೃಷಿ, ಉದ್ಯಮ, ಶಿಕ್ಷಣ, ರಕ್ಷಣೆ, ಐಟಿ-ಬಿಟಿ, ನಗರ-ಗ್ರಾಮೀಣ ಅಭಿವೃದ್ಧಿ ಹೀಗೆ ಎಲ್ಲ ವರ್ಗದವರ ಹಿತಕ್ಕೆ ಪೂರಕ ಬಜೆಟ್ ಇದಾಗಿದೆ. ಬಲಿಷ್ಠ ಭಾರತಕ್ಕಾಗಿ ಕೇಂದ್ರ ಸರ್ಕಾರ ಹೊಂದಿರುವ ವಿಜನ್ ಈ ಬಜೆಟ್ ನಲ್ಲಿ ಕಾಣಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾವ ಕ್ಷೇತ್ರಕ್ಕೆ ಬಿಡದೆ ಹಲವಾರು ಮಹತ್ವದ ಜನಪರ ಯೋಜನೆಗಳ ಘೋಷಣೆ ಮುಖಾಂತರ ದೇಶದ ಜನರ ಮನ ಗೆಲ್ಲುವ ಜೊತೆಗೆ ಅಭಿವೃದ್ಧಿಯಲ್ಲಿ ಹೊಸ ಭರವಸೆ ಮೂಡಿಸಲಾಗಿದೆ. ವಿಶ್ವ ಗುರು, ವಿಕಸಿತ ಹಾಗೂ ಸರ್ವೆಜನಾ ಸುಖಿನೋ ಭವಂತು ಪರಿಕಲ್ಪನೆಯಲ್ಲಿ ಬಂಪರ್ ಬಜೆಟ್ ಕೊಟ್ಟಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹ್ರತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಡಾ.ಬೆಲ್ದಾಳೆ ಹೇಳಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ ಸಹಾಯಕ ನಾಗೇಶ ಸಿದ್ದಾ.