ಮಹಲಿಂಗಪುರ

ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ:ಬೀಳಗಿ

ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ:ಬೀಳಗಿ

ಮಹಾಲಿಂಗಪುರ : ವಿಶ್ವಾದಾದಂತ ಮುಸ್ಲಿಂ ಬಾಂದವರು ಶ್ರದ್ಧಾ ಭಕ್ತಿಯಿಂದ ಆಚರಿಸುವ ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತ ಹಬ್ಬವನ್ನು ನಗರದ ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ದ ರೀತಿಯಿಂದ ಆಚರಿಸಬೇಕು ಎಂದು ಬೀಳಗಿ ಹೇಳಿದರು

ಅವರು ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಬಕ್ರೀದ್ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿ ಎಸ್ ಆಯ್ ಪ್ರವೀಣ್ ಬೀಳಗಿ ಬರುವ ಗುರುವಾರ  ಆಚರಿಸಲ್ಪಡುವ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಅವರು ಬಕ್ರಿದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಅನಧೀಕೃತವಾಗಿ ಜಾನುವಾರುಗಳ ವಧೆ, ಜಾನುವಾರು ಸಾಗಾಣಿಕೆ ತಡೆಗಟ್ಟುವ ಕುರಿತಂತೆ ಪೋಲಿಸ್ ಠಾಣೆಯ ಅವರಣದಲ್ಲಿ ಶುಕ್ರವಾರ ಸಂಜೆ ನಡೆದ ಪೂರ್ವ ಭಾವಿ ಶಾಂತಿ ಸಭೆಯಲ್ಲಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ.ಪುರಸಭೆಯ ಅಧಿಕಾರಿ ಚಿದಾನಂದ ಹಿರೇಮಠ,ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಶಂಕರಗೌಡ ಪಾಟೀಲ,ಪರಶುರಾಮ್ ಮೈತ್ರಿ,ಮುಸ್ಲಿಂ ಸಮುದಾಯದ ಹಿರಿಯರಾದ ಪಾರುಕ್ ಪಕಾಲಿ,ಸಿರಾಜ್ ಐನಾಪುರ,ಜಮೀರ್ ಯಕ್ಸಂಬಿ,ನಬಿ ಯಕ್ಸಂಬಿ,ಎಫ್ ಹೆಚ್ ಕುಂಟೋಜಿ, ಸಿರಾಜ್ ಪಾಂಡು ಸೇರಿದಂತೆ ಇಲಾಖೆಯ ಸಿಬ್ಬಂದಿಯವರಾದ ಧರ್ಮಣ್ಣ ಮಾದರ, ಜಗದೇಶ ಪಾಟೀಲ, ಗಚೆನ್ನವರ,ಸೇರಿ ಹಲವರು  ಸಮಾಜದ ಹಿರಿಯರು ಮುಖಂಡರು ಭಾಗವಹಿಸಿದರು 

ಸುದ್ದಿ ಓದಿ