ಇಂಡಿ

ಹೋಳಿ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಿಸಿ: ಡಿವೈಎಸ್‍ಪಿ

ಹೋಳಿ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಿಸಿ: ಡಿವೈಎಸ್‍ಪಿ
ಪಟ್ಟಣದ ಪೊಲೀಸ್ ಉಪವಿಭಾಗದ ಕಾರ್ಯಾಲಯದ ಸಭಾಭವನದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಏರ್ಪಡಿಸಿದ ಶಾಂತಿ ಸಭೆಯ ಅಧ್ಯಕ್ಷೆತೆ ವಹ

ಇಂಡಿ 25: ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದಿಕೊಳ್ಳುವ ಮೂಲಕ ಹೋಳಿ ಹಬ್ಬವನ್ನು ಆಚರಿಸಬೇಕು ಎಂದು ಇಂಡಿ ಡಿವೈಎಸ್‍ಪಿ ಶ್ರೀಧರ ದೊಡ್ಡಿ ಹೇಳಿದರು.

ಅವರು ಪಟ್ಟಣದ ಪೊಲೀಸ್ ಉಪವಿಭಾಗದ ಕಾರ್ಯಾಲಯದ ಸಭಾಭವನದಲ್ಲಿ ಹೋಳಿ ಹಬ್ಬದ  ಪ್ರಯುಕ್ತ ಏರ್ಪಡಿಸಿದ ಶಾಂತಿ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದರು.

ಕಳೆದ ವರ್ಷದ ಇದೇ ಅವಧಿಯಲ್ಲಿ ವಿಶ್ವವನ್ನೆ ತಲ್ಲಣಗೊಳಿಸಿದ ಮಹಾ ಮಾರಿ ಕೊರೋನಾ ವೈರಸ್‍ನ ಎರಡನೇ ಹಂತದ ಅಲೆ ಮತ್ತೆ ಸೂರುವಾಗಿದೆ. ಆದ್ದರಿಂದ ಯಾರು ಭಯ ಪಡಬೇಕಿಲ್ಲ ಆದರೆ ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಹಿಸಿ ನಮ್ಮ ಹಿತವನ್ನು ನಾವೇ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ನಿಮ್ಮಲ್ಲರದಾಗಿದೆ. ಈಗಾಗಲೇ ಈ ಕುರಿತು ಎಲ್ಲ ವಿವಿಧಡೇ ಜಾಗೃತಿ ಮೂಡಿಸುವ ಕಾರ್ಯಾ ಮಾಡುತ್ತಿದ್ದೆವೆ. ಸಾರ್ವಜನಿಕರು ಕೂಡಾ ಸ್ಯಾನಿಟೈಸ್‍ರ ಬಳಕೆ ಮಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹೋಳಿ ಹಬ್ಬವನ್ನು ಇದೇ ಮಾ.28ರಂದು ಕಾಮಣಧಹನ ಮಾಡಿ ಏ.1ರಂದು ಬಣ್ಣದಾಟ ಆಡಬೇಕು ಎಂದು ಎಲ್ಲ ಮುಖಂಡರು ಏನು ನಿರ್ಣಯ ಮಾಡಿದ್ದಿರಿ ಇದಕ್ಕೆ ನಮ್ಮ ಸಹಕಾರ ಇದೆ. ಅದರಂತೆ ತಾವು ಕೂಡಾ ಸಹಕರಿಸಬೇಕು ಬಣ್ಣ ಆಡುವಾಗ ಯಾರಾದರು ಕುಡಿದು ಗದ್ದಲ ಗಲಾಟೆ ಮಾಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ದು ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ. ದಯವಿಟ್ಟು ಇದಕ್ಕೆ ಯಾರು ಆಸ್ಪದ ಮಾಡಿಕೊಡಬಾರದು ಒಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಂತರ ಇಂಡಿ ಸಿಪಿಐ ಬಡದೇಸಾರ ಮಾತನಾಡಿ ಪ್ರಸ್ತುತ ಪರಿಸ್ಥಿತಿ ಅನುಗುಣವಾಗಿ ನಾವೂ ನೀವು ಸೇರಿ ಹೊಳಿ ಹಬ್ಬವನ್ನು ಆಚರಿಸಲು  ನಿರ್ಣಯ ಮಾಡಿದ್ದೇವೆ. ಆದರೆ ದಿನದಿಂದ ದಿನಕ್ಕೆ ಕೊರೋನಾ ವೈರಸ್‍ನ ಎರಡನೇ ಹಂತದಲ್ಲಿ ಸೋಂಕಿತರ ಸಂಖ್ಯೇ ಹೆಚ್ಚುತಾ ಸಾಗಿರುವುದರಿಂದ  ಮುಂದೆ ಸರ್ಕಾರ ಕೈಗೊಳ್ಳುವ ಆದೇಶವನ್ನು ನಾವೆಲ್ಲರು ಪಾಲಿಸಬೇಕಾಗುತ್ತದೆ. ಈಗಲೇ ಸರ್ಕಾರದ ನಡೆಯ ಬಗ್ಗೆ ಏನನ್ನು ಹೇಳಲಾಗದು ನಗರದ, ಗ್ರಾಮೀಣ ಭಾಗದ ಎಲ್ಲ ಮುಖಂಡರು, ಸಾರ್ವಜನಿಕರು ಇದಕ್ಕೆ ಸಹಕರಿಸಿ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಮುಖಂಡ ಕಾಸುಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ಇಲಿಯಾಸ ಬೋರಾಮಣಿ, ಜಗದೀಶ ಕ್ಷೇತ್ರಿ, ಪ್ರಶಾಂತ ಕಾಳೆ, ಹುಚ್ಚಪ್ಪ ತಳವಾರ, ಪ್ರಕಾಶ ಬಿರಾದಾರ ಹೊಳಿ ಹಬ್ಬದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಗರ ಠಾಣೆಯ ಪಿಎಸ್‍ಐ ಮಾಳಪ್ಪ ಪೂಜಾರಿ, ಪುರಸಭೆ ಉಪಾಧ್ಯಕ್ಷ ಇಸ್ಮಾಯಿಲ ಅರಬ, ಸದಸ್ಯರಾದ ಅಯುಬ ಬಾಗವಾನ, ದೇವೆಂದ್ರ ಕುಂಬಾರ, ಜಹಾಂಗಿರ ಸೌಧಾಗರ, ಲಿಂಬಾಜಿ ರಾಠೋಡ, ಸತೀಶ ಕುಂಬಾರ, ಉಮೇಶ ದೇಗಿನಾಳ, ಖಾಜಿ ಹಾಗೂ ಅವಿನಾಶ ಬಗಲಿ, ಮಹೇಶ ಹೊನ್ನಬಿಂದಗಿ, ಶ್ರೀಶೈಲ ಅರ್ಜುಣಗಿ ಸೇರಿದಂತೆ ವ್ಯಾಪರಸ್ಥರು ಅನೇಕರು ಉಪಸ್ಥಿತರಿದ್ದರು.


ಸುದ್ದಿ ಓದಿ