ಕೊರೊನಾ ನಿಯಂತ್ರಿಸುವ ಕುರಿತು ವ್ಯಾಪಾರಸ್ಥರ ಸಭೆ
ಲೋಕದರ್ಶನ ವರದಿ
ರಾಮದುರ್ಗ ಜುಲೈ14: ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ದೃಢ ಪಟ್ಟ ಹಿನ್ನಲೆಯಲ್ಲಿ ಕೊರೊನಾ ನಿಯಂತ್ರಿಸಲು ಸೋಮವಾರ ಪೋಲಿಸ್ ಆವರಣದಲ್ಲಿ ಸ್ಥಳೀಯ ವ್ಯಾಪಾರಸ್ಥರ ಸಭೆಯನ್ನು ಶಾಸಕ ಮಹಾದೇವಪ್ಪ ಯಾದವಾಡ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.
ಕಳೆದ ನಾಲ್ಕು ತಿಂಗಳಿಂದ ದೇಶವ್ಯಾಪಿ ಕೊರೊನಾ ವೈರಸ್ ಹೆಚ್ಚುತ್ತಲೆ ಇದ್ದು ಇತೀಚಿಗೆ ತಾಲೂಕಿನಲ್ಲಿಯೂ ಪ್ರಕರಣಗಳೂ ದೃಢಪಟ್ಟಿದೆ ಹಾಗಾಗಿ ಎಲ್ಲರೂ ಜಾಗೃತರಾಗಲೇಬೇಕು. ಕೊರೊನಾ ನಿಯಂತ್ರಿಸುವಲ್ಲಿ ವ್ಯಾಪಾರಸ್ಥರ ಪಾತ್ರ ಪ್ರಮುಖವಾಗಿದೆ ಆದ್ದರಿಂದ ವ್ಯಾಪಾರಸ್ಥರ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆಯಲಾಗಿದೆ ತಮ್ಮ ಅಭಿಪ್ರಾಯ ತಿಳಿಸಲು ಶಾಸಕ ಮಹಾದೇವಪ್ಪ ಯಾದವಾಡ ಮನವಿ ಮಾಡಿದಾಗ ಬೀದಿ ಬದಿ ವ್ಯಾಪಾರಸ್ಥರು ಮುಂಜಾನೆ 8ರಿಂದಾ ರಾತ್ರಿ 7ರ ವರೆಗೆ ವ್ಯಾಪಾರ ಮಾಡಲು ಅನುಮತಿ ನೀಡಿಬೇಕು ಎಂದು ತಿಳಿಸಿದರು. ಜವಳಿ ಹಾಗೂ ಕಿರಾಣಿ ವರ್ತಕರು ಪಂಚಮಿ ಹಬ್ಬ ಇರುವದರಿಂದಾ ವ್ಯಾಪಾರಕ್ಕೆ ಅನುಮಿತಿ ಬೇಕು ಎಂದು ಹಲವಾರು ವ್ಯಾಪಾರಸ್ಥರು ವಿಭಿನ್ನ ಅಭಪ್ರಾಯ ವ್ಯಕ್ತಪಡಿಸಿದರು ಕೇಲವರು ಸಂಪೂರ್ಣ ಲಾಕ್ ಡೌನ್ ಮಾಡಲು ತಿಳಿಸಿದರು.
ಕೊರೊನಾ ರೋಗದಿಂದಾ ಮುಕ್ತಿಯಾಗಲು ವ್ಯಾಪಾರಸ್ಥರು ಖಡ್ಡಾಯವಾಗಿ ಮಾಸ್ಕ ಧರಿಸಿ ಗ್ರಾಹಕರು ಮಾಸ್ಕ ಧರಿಸಿದರೆ ಮಾತ್ರ ವ್ಯವಹರಿಸಲು ಅನುಮತಿ ನೀಡಿ ಹಾಗೂ ಸ್ಯಾನಿಟೈಜರ್ ಬಳಸಲು ತಿಳಿಸಬೇಕು ಎಂದು ತಿಳಿಸಿದ ಶಾಸಕರು ಜೀವನ ಅತ್ಯಂತ್ಯ ಮುಖ್ಯವಾಗಿದೆ ಆರೋಗ್ಯವಾಗಿದ್ದರೆ ವ್ಯಾಪಾರ ಮತ್ತು ಉದ್ಯೋಗ ಮಾಡಲು ಸಾಧ್ಯ ಎಂದು ಉಧಾಹರಣೆ ಮೂಲಕ ತಿಳಿಸಿದ ಅವರು ಕೊರೊನಾ ತಡೆಯಲು ಲಾಕ್ ಡೌನ್ ಅನಿವಾರ್ಯವಾಗಿದೆ ಎಂದು ಸಭೆಗೆ ತಿಳಿಸಿದಾಗ ತಾಲೂಕ ಆಡಳಿತ ಕೈಗೊಂಡ ತಿಮರ್ಾಣಕ್ಕೆ ನಾವೆಲ್ಲ ಬದ್ದರಿದ್ದೆವೆ ಎಂದು ವ್ಯಾಪಾರಸ್ಥರು ತಿಳಿಸಿದಾಗ ಮಧ್ಯಾಹ್ನ 2 ಗಂಟೆಯಿಂದ ಮುಂಜಾನೆ 7 ಗಂಟೆಯವರೆಗೆ ರಾಮದುರ್ಗ ತಾಲೂಕ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ವಿನಂತಿಸಿದರು.
ಡಿ ವಾಯ್ ಎಸ್ ಪಿ ಶಂಕರಗೌಡ ಪಾಟೀಲ ಮಾತನಾಡುತ್ತಾ ಅವಶ್ಯಕ ಇರುವ ಆರೋಗ್ಯ ಇಲಾಖೆ, ಔಷಧಿ ಅಂಗಡಿಗಳು ಮತ್ತು ರೈತರಿಗೆ ಬೇಕಾದ ಗೊಬ್ಬರ ಬೀಜ ಖರೀದಿಸಲು ಮತ್ತು ಹೊಟೇಲಗಳಲ್ಲಿ ಪಾರ್ಸಲ ಕೊಡಲು ಮಾತ್ರ ಅನುಮತಿ ನೀಡಲಾಗಿದೆ ವ್ಯಾಪಾಸ್ಥರು ಮತ್ತು ತಾಲೂಕಿನ ಜನತೆಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ಕೊರೊನಾ ರೋಗ ತಡೆಯಲು ಲಾಕ್ ಡೌನ ನಿಮಿತ್ಯ ಕಟ್ಟು ನಿಟ್ಟಿನ ಕ್ರಮಕೈಕೊಳ್ಳಲಾಗುವುದು ವಿನಾಕಾರಣ ಜನತೆ ರಸ್ತೆಯಲ್ಲಿ ಸಂಚರಿಸುವದು ಮಾಸ್ಕ ಧರಿಸದೇ ಇರುವುದ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಆರೋಗ್ಯ ಇಲಾಖೆ ನೀಡಿದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಮನೆಯಲ್ಲಿ ಇರಲು ಸಲಹೆ ನೀಡಿದರು. ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಮುರಳೀದರ ದೇಶಪಾಂಡೆ ಪಿಎಸ್ ಐ ಆನಂದ ಡೋಣಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಶಿವಣ್ಣ ಅಂಗಡಿ, ಜಗದೀಶ ಲಾಹೋಟಿ, ಕಿರಾಣಿ ವರ್ತಕರ ಸಂಘದ ಜಿರಂಕಳಿ, ಜವಳಿ ವರ್ತಕ ಅಮರ್ ದೂತ್, ಬೀದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಾದಾಫೀರ ಕಲೈಗಾರ, ಅಪ್ಪಣ್ಣ ವರಗಮಾರಿ, ಹಾಗೂ ಇತರ ವ್ಯಾಪಾರಸ್ಥರು ಹಾಜರಿದ್ದರು.