ಮಹಲಿಂಗಪುರ

ಪಂಚ ಪೀಠಾಧಿಪತಿಗಳ ಸಾನಿಧ್ಯದಲ್ಲಿ ಬೃಹತ್ ಧರ್ಮ ಸಭೆ: ಡಾ.ರಮೇಶಕುಮಾರ ಶಾಸ್ತ್ರಿ

ಪಂಚ ಪೀಠಾಧಿಪತಿಗಳ ಸಾನಿಧ್ಯದಲ್ಲಿ ಬೃಹತ್ ಧರ್ಮ ಸಭೆ: ಡಾ.ರಮೇಶಕುಮಾರ ಶಾಸ್ತ್ರಿ

ಪಂಚ ಪೀಠಾಧಿಪತಿಗಳ ಸಾನಿಧ್ಯದಲ್ಲಿ ಬೃಹತ್ ಧರ್ಮ ಸಭೆ: ಡಾ.ರಮೇಶಕುಮಾರ ಶಾಸ್ತ್ರಿ  

ಮಹಾಲಿಂಗಪುರ 16: ನವರಾತ್ರಿ ಉತ್ಸವದ ಪ್ರಯುಕ್ತ ಸೆ.18ರ ಗುರುವಾರ ಸಂಜೆ 6.30ಕ್ಕೆ ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿ ಪೀಠದ ಜಗದ್ಗುರುಗಳ ಸಾನಿಧ್ಯದಲ್ಲಿ 30ಕ್ಕೂ ಹೆಚ್ಚು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಬೃಹತ್ ಧರ್ಮಸಭೆ ನಡೆಯಲಿದೆ ಎಂದು ಡಾ. ರಮೇಶಕುಮಾರ ಶಾಸ್ತ್ರಿ ತಿಳಿಸಿದರು. 

ಸ್ಥಳೀಯ ಜಿಎಲ್‌ವಿಸಿ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ರನ್ನಬೆಳಗಲಿಯ ಶ್ರೀ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ ಪುಣ್ಯಕೋಟಿ ಸಿದ್ಧಾಶ್ರಮದ ವತಿಯಿಂದ  ನಾಡಹಬ್ಬ ದಸರಾ ಮತ್ತು ನವರಾತ್ರಿ ಉತ್ಸವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ.18 ಗುರುವಾರ ಬೆಳಿಗ್ಗೆ 7.30ಕ್ಕೆ ನಿಡಸೋಸಿ ಶ್ರೀಗಳಿಂದ ಆದಿಶಕ್ತಿ ಭುವನೇಶ್ವರಿ ದೇವಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ, 8.30 ಕ್ಕೆ ಮಹರ್ಷಿ ಡಾ. ಆನಂದ್ ಗುರೂಜಿ ಅವರಿಂದ ಮಹಾ ಚಂಡಿಕಾ ಯಾಗ, ಮಧ್ಯಾಹ್ನ 3ಕ್ಕೆ ಪಂಚಪೀಠಾಧೀಶ್ವರರ ದಿವ್ಯ ಸಾನಿಧ್ಯದಲ್ಲಿ ಬೃಹತ್ ಕುಂಭಮೇಳ ಹಾಗೂ 5008  ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ, ಸಂಜೆ 6ಕ್ಕೆ ಕಾಶಿಯ ನುರಿತ ಪಂಡಿತರಿಂದ ಶಾಂಭವಿ ಸರೋವರಕ್ಕೆ ಮಹಾಗಂಗಾರತಿ, 6.30ಕ್ಕೆ ಪಂಚ ಪೀಠಾಧೀಶ್ವರರ ಸಾನಿಧ್ಯದಲ್ಲಿ ಬೃಹತ್ ಧರ್ಮ ಸಭೆ, ಆಶೀರ್ವಚನ, ಮಹಾಪ್ರಸಾದ  ಮರುದಿನ ಸೆ. 19ರ ಬೆಳಗ್ಗೆಯಿಂದ ವಿವಿಧ ಮಠಾಧೀಶರ ಭೇಟಿ ಹಾಗೂ ಸಂಜೆ 7.30ಕ್ಕೆ ರಾಜ್ಯದ ಮತ್ತು ಉತ್ತರ ಕರ್ನಾಟಕದ ಹೆಸರಾಂತ ಕಲಾವಿದರಿಂದ ಅದ್ದೂರಿ ಹಾಸ್ಯ ಮತ್ತು ಸಂಗೀತ ರಸಮಂಜರಿ ಜರುಗುವುದಾಗಿ ತಿಳಿಸಿದರು. 

ಮುಖಂಡರಾದ ಸಿದ್ದುಗೌಡ ಪಾಟೀಲ, ಪಂಡಿತ ಪೂಜಾರಿ, ಶಿವನಗೌಡ ಪಾಟೀಲ, ಚಿಕ್ಕಪ್ಪನಾಯಕ, ಹನಮಂತ ಕೊಣ್ಣೂರ, ಶಿವಪ್ಪ ಹಾಡಕರ, ಮಹಾದೇವ ನೇಸೂರ, ನಾಗಪ್ಪ ಪಾಶ್ಚಾಪುರ, ಮಹಾಲಿಂಗಯ್ಯ ಮಠಪತಿ, ಪ್ರಕಾಶ ಪಾಶ್ಚಾಪುರ, ರವಿಚಂದ್ರ ಸಾಲಿಮನಿ ಮತ್ತಿತರರಿದ್ದರು. 


ಸುದ್ದಿ ಓದಿ