ಮಹಲಿಂಗಪುರ

ಭಗವಧ್ವಜ ಶೌರ್ಯ ,ಜ್ಙಾನ,ತ್ಯಾಗದ ಪ್ರತೀಕ: ಪ್ರಭು ಹೂಗಾರ.

ಭಗವಧ್ವಜ ಶೌರ್ಯ ,ಜ್ಙಾನ,ತ್ಯಾಗದ ಪ್ರತೀಕ: ಪ್ರಭು ಹೂಗಾರ.

ಮಹಾಲಿಂಗಪುರ: ಭಗವಧ್ವಜ ಶೌರ್ಯ , ಜ್ಙಾನ, ತ್ಯಾಗದ ಪ್ರತೀಕವಾಗಿದೆ. ಪ್ರಭು ಶ್ರೀರಾಮ, ಅರ್ಜುನ,ಶಿವಾಜಿ ಮಹಾರಾಜರಂತಹ ಮಹಾತ್ಮರೂ ಸಹ ಭಗವಧ್ವಜದ ನೆರಳಿನಲ್ಲಿ ಜಯ ಕಂಡವರು ಹಾಗಾಗಿ ಧರ್ಮದ ಉಳಿವಿಗಾಗಿ ಭಗವಧ್ವಜ ಅಗತ್ಯ ಎಂದು ಬೌದ್ಧಿಕ ವಕ್ತಾರ ಪ್ರಭು ಹೂಗಾರ ಹೇಳಿದರು.

ಗುರು ಪೂರ್ಣಿಮೆ ಪ್ರಯುಕ್ತ ಸ್ಥಳೀಯ ಸಿದ್ಧಾರೂಢ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗುರು ಪೂಜಾ ಉತ್ಸವದಲ್ಲಿ ಮಾತನಾಡಿದರು.ಜಗತ್ತಿಗೆ ಗುರುಪರಂಪರೆಯನ್ನು ಕೊಟ್ಟ ದೇಶ ನನ್ನದು, ತ್ಯಾಗ ಅತ್ಮ ಸಾಕ್ಷಾತ್ಕಾರಕ್ಕಾಗಿ ಭಾರತ ಮೀಸಲು. ಇಂತಹ ಭವ್ಯ ಭಾರತಾಂಬೆಯ ಅಭಿವೃದ್ಧಿಗಾಗಿ ಸಂಘದ ಕಾರ್ಯಕರ್ತ ಮೇಲ್ಪಂಕ್ತಿಯಾಗಬೇಕು, ದೇಶಕ್ಕೆ ಏನಾದರೂ ಕೊಡುವ ಉದ್ದೇಶದಿಂದ ಮಾತ್ರ ಸಂಘಕ್ಕೆ ಬರಬೇಕು, ಸ್ವಾರ್ಥಕ್ಕಾಗಿ ಸಂಘದ ಸೋಗು ಬೇಡ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಕ ಐ.ಎಸ್.ಪಾಟೀಲ, ಮನೆಮನೆಗಳಲ್ಲಿ ಸಂಸ್ಕೃತಿಯ ಪರಂಪರೆ ಸಂಘ ಸಂಸ್ಕಾರವಾಗಿದೆ,ಓಂಕಾರದ ದಿವ್ಯತೆ, ಪ್ರಾಣಯಾಮದ ಭವ್ಯತೆಯೊಂದಿಗೆ ಜಗತ್ತಿಗೆ ಬದುಕುವ ಕಲೆ ಕಲಿಸಿಕೊಟ್ಟವರು ನಾವು, ನಮ್ಮ ಯೋಗವೆಂಬುದು ಕೇವಲ ಆಸವನವಲ್ಲ ಅದು ಬದುಕುವ ಕಲೆಯೋಗದ ನೂರನೇ ಒಂದು ಭಾಗ ಮಾತ್ರ ಆಸನಗಳು,ಇಂತಹ ಸಂಸ್ಕಾರದಿಂದ ದೂರ ಸರಿದ ನಾವು ವಿಶ್ವಮಾನವರಾಗುವ ಬದಲು ಅಲ್ಪರಾಗುತ್ತಿದ್ದೇವೆ ಎಂದರು.

ಸಂಘ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಹಾಗೂ ಗುರೂಜಿ ಗೋಳವಾಲ್ಕರ್ ಭಾವಚಿತ್ರಗಳಿಗೆ ನಮಿಸಿ ಭಗವಧ್ವಜಾರೋಹಣ, ಅರ್ಚನೆ ಅರ್ಪಣೆ ನೆರವೇರಿತು.

ಸಾಗರ ಭೋವಿ ಸ್ವಾಗತಿಸಿ, ಸತೀಶ ಕಲಾದಗಿ ಧ್ವಜ ವಂದನೆ ಸಲ್ಲಿಸಿದರು. ಹಿರಿಯರಾದ ಪ್ರಕಾಶ ಮಮದಾಪುರ, ಎಮ್.ಎ.ಇಟ್ನಾಳ,ಹಿರೇಮಠ ಸ್ವಯಂ ಸೇವಕರಾದ ಮಂಜು ಶಿಂಪಿ,ವಿಜಯ ಹಿರೇಮಠ, ಮಂಜು ಗೊಂಬಿ, ಕಾರ್ತಿಕ ಗಲಗಲಿ, ಸಮರ್ಥ ಬಡಿಗೇರ, ರಾಘವೇಂದ್ರ ಶಿರೋಳ, ಸಾಗರ ತಿಪಶೆಟ್ಟಿ, ಶ್ರೀನಿಧಿ ಕುಲಕರ್ಣಿ , ಪ್ರದೀಪ ಕುರೇರ, ಈರಪ್ಪ ಹುಣಶ್ಯಾಳ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು

ಸುದ್ದಿ ಓದಿ