ಬಳ್ಳಾರಿ: ದೇಶದ ಐಕ್ಯತೆ ಸಮಗ್ರತೆಗೆ ಶ್ರಮಿಸುವವರಿಗೆ ಮತನೀಡಿ: ಸೋಮದತ್ತಶರ್ಮ

ಬಳ್ಳಾರಿ:  ದೇಶದ ಐಕ್ಯತೆ ಸಮಗ್ರತೆಗೆ ಶ್ರಮಿಸುವವರಿಗೆ ಮತನೀಡಿ: ಸೋಮದತ್ತಶರ್ಮ

ಬಳ್ಳಾರಿ 16: ಸುಭದ್ರ ಸರ್ಕಾರ  ಸುರಕ್ಷಿತ ಸಕರ್ಾರ ಹಾಗೂ ಸಂವಿಧಾನದ ಮೂಲೋದ್ದೇಶಗಳನ್ನು ಒಳಗೊಂಡ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರವನ್ನು ನಿಮರ್ಾಣ ಮಾಡುವ ಪಕ್ಷ ಮತ್ತು ವ್ಯಕ್ತಿಗಳಿಗೆ ಮಾತ್ರ ಮತ ನೀಡಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಬೇಕೆಂದು ನವದೆಹಲಿಯ ಅಖಿಲ ಭಾರತ ವಕೀಲರ ಸಂಘದ ಪ್ರಧಾನ ಕಾರ್ಯದಶರ್ಿಗಳಾದ ಸೋಮದತ್ತ ಶರ್ಮ ಅವರು ಮನವಿ ಮಾಡಿದರು. 

ಸ್ಥಳೀಯ ಬಾಲಾರಜೇನ್ಸಿ ಹೋಟೆಲ್ನಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ,   ಜಾತ್ಯಾತೀತ ಪ್ರಜಾಪ್ರಭುತ್ವ ರಚಿಸಲು ವಕೀಲರು ಹಾಗೂ ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾವಂತ ಜನತೆ ಮತ್ತು ಸಾಮಾನ್ಯ ಜನತೆಯು ಪ್ರಜ್ಞಾವಂತರಾಗಿದ್ದು ಅವರೆಲ್ಲರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ  ದೇಶದ ಐಕ್ಯತೆ  ಮತ್ತು ಅಖಂಡತೆ ಕಾಪಾಡಿಕೊಳ್ಳುವ ವ್ಯಕ್ತಿಗಳಿಗೆ ಮತ್ತು ಪಕ್ಷಗಳಿಗೆ ಮತ ನೀಡಬೇಕೆಂದು ಮಾಧ್ಯಮಗಳ ಮೂಲಕ ಕೋರಿದರು. 

ತಮ್ಮ ವಕೀಲರ ಸಂಘಟನೆಯು ದೇಶದ ಪ್ರಗತಿಗೆ ಶ್ರಮಿಸುತ್ತಿದ್ದು, ವಕೀಲರ ಸಮೂಹವು ಕಕ್ಷಿದಾರರಿಗೆ ನ್ಯಾಯವನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ಕಾನೂನು ನೆರವು ನೀಡುತ್ತಿದ್ದಾರೆ. ನ್ಯಾಯಾಲಯಗಳಲ್ಲಿ ಇರುವ ನ್ಯಾಯಾಧೀಶರು ಮತ್ತು ಇತರೆ ಸಿಬ್ಬಂದಿ ವರ್ಗಗಳ ಖಾಲಿ ಹುದ್ದೆಗಳ ಭತರ್ಿಗೂ ಶ್ರಮಿಸುತ್ತಿದೆ.  ವಕೀಲರ ಕ್ಷೇಮಾಭಿವೃದ್ಧಿಯನ್ನು ಬಯಸುತ್ತಿದೆ. ಜೊತೆಗೆ ರಾಷ್ಟ್ರೀಯ ನ್ಯಾಯಾಲಯಗಳಿಗೆ ಸ್ವಾಯತ್ತತೆ ಕುರಿತು ಚಚರ್ೆ ಮಾಡುವುದು ಈ ಸಭೆಯ ಮುಖ್ಯಾಂಶವಾಗಿದೆ.  ಅದರಲ್ಲೂ ಈ ಚುನಾವಣೆಯ ಪ್ರಯುಕ್ತ ಅದು ಗಂಭೀರ ಸ್ವರೂಪವನ್ನು ತಾಳಿದೆ ಎಂದು ಹೇಳಿದರು. 

ಕಳೆದ ವರ್ಷದ ಸಂಘವು ಕಲತ್ಕಾದಲ್ಲಿ ನಡೆಸಿದ ಸಭೆಯಲ್ಲಿ  ಇಂಡಿಪೆಂಡೆಂಟ್ ನ್ಯಾಷನಲ್  ಜುಡಿಷಿಯಲ್ ಕಮಿಷನ್ನ ಸ್ಥಾಪಿಸಿ ಸೂಕ್ತ ಪದ್ಧತಿಯಲ್ಲಿ ನ್ಯಾಯಾಧೀಶರನ್ನು  ಆಯ್ಕೆ ಮಾಡಬೇಕು.  ಅದರಲ್ಲೂ ವರ್ಗಾವಣೆ ಹೆಸರಿನಲ್ಲಿ ಅವರನ್ನು ಬದಲೀ ಮಾಡುವುದು ಹಾಗೂ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೇರಿ ಅವರನ್ನು ತನಿಖೆಗೆ ಒಳಪಡಿಸುವುದು ನ್ಯಾಯಾಂಗ ಸ್ವಾಯತ್ತತೆಗೆ ದಕ್ಕೆಯಾಗುತ್ತದೆ. . ಈ ಹಿನ್ನೆಲೆಯಲ್ಲಿ ಅಖಿಲ ಭಾರತ ವಕೀಲರ ಸಂಘಟನೆಯ ಆರು ಜನ ಸದಸ್ಯರ ಪೀಠ, ರಚನೆ ಮಾಡಿ ಅದರಲ್ಲಿ ಮೂವರು ನ್ಯಾಯಾಂಗ ಪ್ರತಿನಿಧಿಗಳು ಒಬ್ಬ ಕಾನೂನು ಸಚಿವರು, ಮತ್ತು ಇಬ್ಬರು ತತ್ವ ಸಿದ್ದಾಂತದ ನ್ಯಾಯಾಂಗ ಧುರೀಣರನ್ನು ಒಳಗೊಂಡ ಮುಖ್ಯ ನ್ಯಾಯಾಧೀಶರ ಅನುಮತಿಗೆ ಒಳಪಡಿಸಿ ರಚನೆ ಮಾಡಬೇಕೆಂದು ಸಕರ್ಾರಗಳನ್ನು ಒತ್ತಾಯಿಸಿದರು. 

ಎಪ್ಪತ್ತೆರಡು ವರ್ಷಗಳ ಸ್ವತಂತ್ರ ಭಾರತದಲ್ಲಿ ನ್ಯಾಯ ಒದಗಿಸುವ ವಕೀಲ ವೃತ್ತಿಗೆ ಯಾವ ಸವಲತ್ತು ತಮ್ಮ ನಿವೃತ್ತಿ ಅವಧಿಯಲ್ಲಿ ಲಭ್ಯವಿರುವುದಿಲ್ಲ. ತಮ್ಮ ಕೊನೆ ಜೀವನ ಕಾಲದಲ್ಲಿ ಅವರಿಗೆ ಯಾವ ಸೌಲಭ್ಯವೂ ಇಲ್ಲ. ಈ ವೃತ್ತಿಯನ್ನು ``ನ್ಯಾಯಾಂಗದ ಅಧಿಕಾರಿ'' ಎಂದು ಪರಿಗಣಿಸಿದರೂ  ಅವರಿಗೆ ಕನಿಷ್ಠ ಸೌಲಭ್ಯಗಳು ಸಹ ದೊರೆಯುವುದಿಲ್ಲ. ಈ ಹಿನ್ನಲೆಯಲ್ಲಿ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿದರು. 

ಈ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ವಕೀಲರ ಸಂಘ, ಕನರ್ಾಟಕ ರಾಜ್ಯ ಘಟಕದ ಅಧ್ಯಕ್ಷ 

ಶಂಕರಪ್ಪ, ಎಸ್,  ಅಖಿಲ ಭಾರತ ವಕೀಲರ ಸಂಘದ ಕೇಂದ್ರ ಸಂಘಟನೆಯ ಖಜಾಂಚಿ ಚಮ್ಕೀರಾಜ್ ಹಾಜರಿದ್ದರು.  ಗೋಷ್ಠಿಯ ಆರಂಭದಲ್ಲಿ ಸಂಘದ ರಾಜ್ಯ ಜಂಟಿ ಕಾರ್ಯದಶರ್ಿ   ಟಿ.ಜಿ.ವಿಠ್ಠಲ್,  ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. 


ಸುದ್ದಿ ಓದಿ