ರಾಜ್ಯದಲ್ಲಿ ಕೃಷಿ ಕಾಯ್ದೆ ವಾಪಸ್ ಬಗ್ಗೆ ತುಟಿ ಬಿಚ್ಚದ ಸರಕಾರ, ನಾಳೆ ಅಧಿವೇಶಕ್ಕೆ ರೈತರ ಮುತ್ತಿಗೆ : ಕೋಡಿಹಳ್ಳಿ

ರಾಜ್ಯದಲ್ಲಿ ಕೃಷಿ ಕಾಯ್ದೆ ವಾಪಸ್ ಬಗ್ಗೆ ತುಟಿ ಬಿಚ್ಚದ ಸರಕಾರ, ನಾಳೆ ಅಧಿವೇಶಕ್ಕೆ ರೈತರ ಮುತ್ತಿಗೆ : ಕೋಡಿಹಳ್ಳಿ

ಬೆಳಗಾವಿ, ಡಿ, 12 : ಕೇಂದ್ರ ಸರಕಾರ ಜಾರಿಗೆ ತಂದಿದ್ದ ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ವಾಪಸ್ ಪಡೆದಿದ್ದರು ರಾಜ್ಯ ಸರಾಕಾರ ಇದರ ಕುರಿತು ತುಟಿ ಬಿಚ್ವುತ್ತಿಲ್ಲ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ವಿರುದ್ದವಾಗಿ ರಾಜ್ಯದ ಅನ್ನಾದತರು ನಾಳೆ ಡಿ. 13ರಂದು ಅಧಿವೇಶನಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ. 

   ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತ ಸಮುಹಕ್ಕೆ ಮಾರಕವಾಗಿದ್ದ ಮೂತು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ಕೊನೆಗೆ ರೈತ ಹೋರಾಟಕ್ಕೆ ಮನಿದು ಒಂದು ವರ್ಷದ ಬಳಿಕ ಈ ಮಸೂದೆಗಳನ್ನು ಮತ್ತೆ ವಾಪಸ್ನಪಡೆಯಲಾಗಿದೆ.

  ಆದರೆ ರಾಜ್ಯ ಸರಕಾರ ವಿಧಾನಸಭಾ  ಸಭಾಧ್ಯಕ್ಷರಿಗೆ ಕೃಷಿ ಮಸೂದೆ ವಾಪಸ್ಬಪಡೆಯವ ಬಗ್ಗೆ ಯಾವ ಪ್ರಸ್ತಾಪ ಇಟ್ಟಿರುವದಿಲ್ಲ. ಇದರಿಂದ ಇದು ರೈತ ವಿರೋಧಿ ಸರಕಾರ ಎಂದು ನಾವು ಭಾವಿಸಬೇಕಾಗುತ್ತದೆ.  ಅಲ್ಲದೆ ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಮಾಧಸ್ವಾಮಿ ಅವರು ಕೇಂದ್ರ ಮಸೂದೆ ಗಳನ್ನು‌ವಾಪಸ್ ಪಡೆದರೆ ನಾವು ಪಡೆಯಬೇಕಾ ಎಂದು ಹೇಳುವ ಮೂಲಕ ತಮ್ಮ ನಡತೆಯನ್ನು ಪ್ರದರ್ಶಿಸುವ ಮೂಲಕ ಅಹಂಕಾರದ ಮಾತುಗಳನ್ನು‌ ಆಡಿದ್ದಾರೆ. ಇವೆಲ್ಲ ನಿಮ್ಮ ಸರಕಾರದ ನಡುವಳಿಕೆಯನ್ನು ನಾವು ರೈತರು ಖಂಡಿಸುತ್ತೇವೆ. 

  ಈ ಅಧಿವೇಶನದಲ್ಲಿ ಒಂದು ವೇಳೆ ಈ‌ ಮೂರು ಕೃಷಿ ಮಸೂದೆ ಗಳನ್ನು ವಾಪಸ್ ಪಡೆಯದಿದ್ದರೆ, ಅಧಿವೇಶನ ಮತ್ತಿಗೆ ಜೊತೆಗೆ ರೈತರ ನಿರಂತರ ಹೋರಾಟ ಮುಂದೆ ವರೆಯಲಿದೆ. ಅಲ್ಲದೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಭಾಗಿಯಾಗುವ ಪ್ರತಿಯೊಂದು ಕಾರ್ಯಕ್ರಮ ಗಳಲ್ಲಿ ನಿಮ್ಮ ವಿರುದ್ದ ಕಪ್ಪು ಬಾವುಟ ಪ್ರದರ್ಶನ ನಡೆಸಲಾಗುವದು ಎಂದು ಸಿಎಂ ಹಾಗೂ ಸಚಿವರಿಗೆ ಎಚ್ಚರಿಕೆ ನೀಡಿದ್ದರು.

ಕೇಂದ್ರ ವಾಪಸ್ ಪಡೆದ ತಕ್ಷಣ ನಾವು ಪಡೆಬೇಕಾ ಎನ್ನುವ ನಿಮಗೆಲ್ಲ ಬುದ್ಧಿಭ್ರಮೆ ಆಗಿದೆಯಾ, ಭಾರತ ಸರ್ಕಾರದ ಅಧೀನದಲ್ಲಿ ನೀವು ಕೆಲಸ ಮಾಡಲ್ವಾ ಎಂದು ಸಿಎಂ‌ ಹಾಗೂ ಸಚಿವರ ವಿರುದ್ದ ವಾಗ್ದಾಳಿ ನಡೆಸಿದರು.

   ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಬೇಕು ಇಲ್ಲವಾದರೆ ಬಸವರಾಜ ಬೋಮ್ಮಾಯಿ ಸರ್ಕಾರ ರೈತ ವಿರೋಧಿ ಆಗಿದೆ ಎನ್ನುವ ಹಣೆಪಟ್ಟಿ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.

  ಡಿ. 13ರಂದು  ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಅಧಿವೇಶನ ಮುತ್ತಿಗೆ ಕಾರ್ಯಕ್ರಮ ನಡೆಯಲಿದೆ. ರೈತರ ನೆಮ್ಮದಿಯಿಂದ ಬದುಕಲು ಸರ್ಕಾರ ಬಿಡಬೇಕೆಂದು ಕೋಡಿಹಳ್ಳಿ ಆಗ್ರಹ ಮಾಡಿದರು.

  ಎನೇ ಆಗಲಿ ಸರಕಾರದ ವಿರುದ್ದ ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ರೈತ ಹೋರಾಟದ ಬಿಸಿ ಮುಟ್ಟಿಸಲು ರೈತರು ಸಜ್ಜಾಗಿದ್ದಾರೆ.


ಸುದ್ದಿ ಓದಿ