ಸ್ವಚ್ಛತೆ ಆಗಿರಲಿ ನಿಮ್ಮ ಮೊದಲ ಆದ್ಯತೆ
-ಡಾ. ಹೇಮಾವತಿ ಸೊನ್ನೊಳ್ಳಿ
ಬೆಳಗಾವಿ
ಪದ್ಮಜಾ ಹಾಗೂ ಪದ್ಮಜಾಳ ಪತಿ ಶೇಖರ ಇಬ್ಬರೂ ಮನೆಯ ಸ್ವಚ್ಛತೆಯ ಕಡೆಗೆ ಅಷ್ಟೊಂದು ಗಮನ ಹರಿಸುತ್ತಿರಲಿಲ್ಲ. ಮನೆಯಲ್ಲಿಯ ವಸ್ತುಗಳನ್ನು ಸರಿಯಾಗಿ ಹೊಂದಿಸಿ ಇಡುತ್ತಿರಲಿಲ್ಲ. ಅವರೆ. ಗಾಜು, ಕುಚರ್ಿ, ಟೇಬಲ್ ಹೀಗೆ ಎಲ್ಲದರ ಮೇಲೂ ಧೂಳು ಎದ್ದು ಕಾಣುತ್ತಿತ್ತು. ಮನೆಯ ಯಾವುದೇ ಕೋಣೆಗಳನ್ನು ಸ್ವಚ್ಛವಿಡದ ಕಾರಣ ಮನೆಯಲ್ಲಿ ಅಸ್ತವ್ಯಸ್ಥತೆಯಿಂದ ಕೂಡಿರುತ್ತಿತ್ತು. ಅವರ ಮಕ್ಕಳಿಬ್ಬರೂ ಬೆಳೆದು ದೊಡ್ಡವರಾಗಿದ್ದರೂ ಅವರೂ ಕೂಡಾ ಸ್ವಚ್ಛತೆಯ ಕಡೆಗೆ ಗಮನವನ್ನೇ ಹರಿಸುತ್ತಿರಲಿಲ್ಲ. ಅವರ ಮನೆ ನೋಡಿದವರಿಗೆ ಅನಿಸದೆ ಇರುತ್ತಿರಲಿಲ್ಲ. ಇದೊಂದು ಮನೆಯೋ ಅಥವಾ ಕಸದ ತೊಟ್ಟಿಯೋ ಎಂದು ಹೀಗಾಗಿ ಮನೆ ಮಂದಿಗೆಲ್ಲ ಮೇಲಿಂದ ಮೇಲೆ ಅನಾರೋಗ್ಯ ಕಾಡುತ್ತಿರುತ್ತಿತ್ತು.
ಲಕ್ಷ್ಮಮ್ಮ ಮುಂಜಾನೆದ್ದು ಅಂಗಳವನ್ನು ಗೂಡಿಸಲು ಹೋದಾಗ ತಮ್ಮ ಅಂಗಳದ ಕಸವನ್ನೆಲ್ಲ ಬೇರೆಯವರ ಅಂಗಳಕ್ಕೆ ರಾಜಾರೋಷವಾಗಿ ದೂರಿ ಬರುತ್ತಿದ್ದರು. ತಮ್ಮ ಅಂಗಳದ ಕಡೆಗೆ ಕಸವನ್ನೆಲ್ಲ ದೂಕಿದ್ದಾರೆ ಎಂದು ಅವರು ಇವರ ಅಂಗಳದೆಡೆಗೆ ಕಸವನ್ನು ದೂಕುತ್ತಿದ್ದರು. ಹೀಗಾಗಿ ಕಸದ ನಿಮಿತ್ತ ದಿನವೂ ಇಬ್ಬರಲ್ಲೂ ಜಗಳವಾಗುತ್ತಿತ್ತು. ಆದರೂ ಲಕ್ಷ್ಮಮ್ಮ ಬೇರೆಯವರ ಅಂಗಳಕ್ಕೆ ಕಸವನ್ನು ಸರಿಸುವ ಚಾಳಿಯನ್ನೇ ಬಿಡುತ್ತಲೇ ಇರಲಿಲ್ಲ. ಅವರಿಗೆ ಮೊದಲಿನಿಂದಲೂ ಆ ಚಟ ಮೈಗಂಟಿಗೊಂಡು ಬಿಟ್ಟಿತ್ತು. ದಿನಪ್ರತಿ ನಡೆಯುವ ಜಗಳ ಸುತ್ತಮುತ್ತಲಿನವರಿಗೆ ಕಿರಿ ಕಿರಿಯಾಗುತ್ತಿತ್ತು.
ಗೋವಿಂದರಾಜು ತಮ್ಮ ಮನೆಯಲ್ಲಿ ಹಾಗೂ ಮನೆ ಸುತ್ತ ಮುತ್ತ ತುಂಬಾ ಸ್ವಚ್ಛವಾಗಿಟ್ಟುಕೊಂಡಿದ್ದರು. ಆದರೆ ಕೂಡಿಸಿದ ಕಸವನ್ನೆಲ್ಲ ಕಸ ಒಯ್ಯುವವರು ಬಂದವರಿಗೆ ಕೊಡುತ್ತಿರಲಿಲ್ಲ. ಏಕೆಂದರೆ ಅವರಿಗೆ ತಿಂಗಳಿಗೊಮ್ಮೆ ಹಣ ಕೊಡಬೇಕಾಗುತ್ತದೆಂದು ತಮ್ಮ ಮನೆಯಲ್ಲಿ ಕೂಡಿಸಿದ ಕಸವನ್ನೆಲ್ಲ ಎಲ್ಲರೂ ಏಳುವ ಮೊದಲು ನಸುಕಿನಲ್ಲಿ ಎದ್ದು ತಮ್ಮ ಮನೆಯ ಆಜು ಬಾಜು ಎಲ್ಲಿ ಖಾಲಿ ಜಾಗ ಇರುತ್ತದೆಯೋ ಅಲ್ಲಿ ಸುರಿದು ಬರುತ್ತಿದ್ದರು, ಇವರು ಮಾಡುವ ದುಷ್ಟ ಕಾರ್ಯ ಬೇರೆಯವರ ಗಮನಕ್ಕೆ ಬಾರದೆ ಇರುತ್ತದೆಯೋ? ಇದನ್ನು ಗಮನಿಸಿದ ಕೆಲವರು ಗೋವಿಂದರಾಜುವಿಗೆ ಅಲ್ಲೆ ಇಲ್ಲೆ ಯಾಕ್ರಿ ಕಸ ಚೆಲ್ತಿರಿ? ವಾತಾವರಣ ಎಲ್ಲಾ ಯಾಕ ಕೆಡಸ್ತೀರಿ? ಕಸ ಒಯ್ಯಲು ಬಂದವರಿಗೆ ಕಸ ಕೊಡೊಕ್ಕೆ ಆಗೋದಿಲ್ವಾ? ಎಂದು ಎಷ್ಟು ಸಾರಿ ಜೋರು ಮಾಡಿದರೂ ಅವರು ಲಕ್ಷವನ್ನೇ ಕೊಡುತ್ತಿರಲಿಲ್ಲ. ಕದ್ದು ಮುಚ್ಚಿ ಕಸವನ್ನು ಆ ಕಡೆ ಕಡೆ ಚೆಲ್ಲಿಯೇ ಬರುತ್ತಿದ್ದರು.
ಮಕ್ಕಳಿಂದ ಹಿಡಿದು ವಯಸ್ಸಾದವರೆಲ್ಲರೂ ಸಾಮಾನ್ಯವಾಗಿ ಮಾಡುವುದೆನೆಂದರೆ ಉಪಯೋಗಿಸಿಯಾದ ಬೇಡವಾದ ಚಿಕ್ಕ ಪುಟ್ಟ ವಸ್ತುಗಳನ್ನು ಎಲ್ಲೆಂದರಲ್ಲಿ ಹಿಂದೆ ಮುಂದೆ ಯೋಚಿಸದೆ ಬೀಸಾಡಿ ಬಿಡುವುದು. ಏನಾದರೂ ತಿಂದಾದ ಮೇಲೆ ನಿರುಪಯುಕ್ತ ಹಾಳೆ ಚೀಟಿಗಳನ್ನು ಅಲ್ಲಲ್ಲಿ ಬಿಸಾಡುವುದು. ಹಣ್ಣುಗಳನ್ನು ತಿಂದಾದ ಮೇಲೆ ಸಿಪ್ಪೆಯನ್ನು ಮನಬಂದಲ್ಲಿ ಚೆಲ್ಲಿ ಬಿಡುವುದು. ಬಸ್ಸುಗಳನ್ನು, ರಸ್ತೆಗಳನ್ನು, ಆವರಣಗಳನ್ನು, ಸಾರ್ವಜನಿಕ- ಕಟ್ಟಡಗಳನ್ನು, ಗುಡಿಗುಂಡಾರಗಳನ್ನು, ತೋಟಗಳನ್ನು ಹೀಗೆ ಎಲ್ಲೆಡೆಗೆ ಸಿಕ್ಕ ಸಿಕ್ಕದ್ದು ಚೆಲ್ಲಿ ಅನಾರೋಗ್ಯಕರ ವಾತಾವರಣವನ್ನು ನಿಮರ್ಿಸುತ್ತಾರೆ.
ಬಹಳ ಜನರಲ್ಲಿರುವ ಕೆಟ್ಟ ಚಟವೆಂದರೆ ಎಲ್ಲಿ ಬೇಕಾದರಲ್ಲಿ ಉಳುವುದು, ನೋಡಿದರೆ ವಾಕರಿಕೆ ಬರುತ್ತದೆ. ಕಂಡ ಕಂಡಲ್ಲಿ ಉಗುಳುವುದು ಅನಾಗರಿಕ ಹಾಗೂ ಅಸಹ್ಯ ಚಾಳಿ ಇದು. ಬಾಯಿ ತುಂಬ ಅಡಿಕೆ ತಂಬಾಕವನ್ನು ತುಂಬಿಕೊಂಡು ಸಿಕ್ಕ ಸಿಕ್ಕಲ್ಲೇ ಉಗುಳುತ್ತಾ ಹೋಗುತ್ತಾರೆ.
ಎಂಥೆಂಥ ಒಳ್ಳೊಳ್ಳೆ ಕಟ್ಟಡಗಳ ಮೂಲೆ ಮೂಲೆಗಳಲ್ಲಿ ಉಗುಳುತ್ತಾರೆ. ರಸ್ತೆಗಳಲ್ಲಿಂತೂ ಉಗುಳಿ ಉಗುಳಿ ಹೊಲಸು ಮಾಡಿ ಬಿಡುತ್ತಾರೆ. ಅಂಥ ರಸ್ತೆ ಮೇಲೆ ಓಡಾಡಲು ಹೇಸಿಗೆ ಎನಿಸುತ್ತದೆ. ಉಗುಳಿದ ಉಗುಳಿದ ಮೇಲೆ ಕ್ರೀಮಿ ಕೀಟಗಳು ಕುಳಿತು ಆರೋಗ್ಯಕ್ಕೆ ಮಾರಕವಾಗುವಂಥ ಪರಿಸ್ಥಿತಿಯನ್ನು ನಿಮರ್ಿಸುತ್ತಿದೆ. ದೇಶ ಎಷ್ಟೇ ಮುಂದುವರಿತಾ ಇದ್ದರೂ ಮನುಷ್ಯ ಮಾತ್ರ ಸುಧಾರಣೆಯಾಗದೆ ಉಗುಳುವ ಹೇಯಕಾರಕ ಚಟವನ್ನು ಮುಂದುವರಿಸಿಕೊಂಡು ಹೋಗುತ್ತಾ ಇರುವುದು ನಿಜಕ್ಕೂ ದುರದೃಷ್ಟಕರ.
ಇದೇಕೆ ಹೀಗೆ ಅಂತಾ? ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯ. ಸ್ವಚ್ಛತೆಗೆ ಗಮನ ಕೊಡುವವರು ಕೆಲವೇ ಜನರಿದ್ದಾರೆ. ಆದರೆ ಈ ಪ್ರಜ್ಞೆ ಎಲ್ಲರಲ್ಲೂ ಮೈಗೂಡಬೇಕು. ಅಂದಾಗ ಮಾತ್ರ ಸ್ವಚ್ಛ ಭಾರತ ಅಭಿಯಾನಕ್ಕೆ ನಾವು ಗೌರವ ನೀಡಿದಂತಾಗುತ್ತದೆ. ಕೇವಲ ಒಂದು ದಿನ ಎರಡು ದಿನ ಸ್ವಚ್ಛ ಮಾಡಿ ಕೈಚೆಲ್ಲಿ ಕುಳಿತರೆ ಆಗದು. ನಿರಂತರ ಎಲ್ಲರೂ ತಮ್ಮ ಮನೆ, ಅಂಗಳ, ನಮ್ಮ ನೆರೆಹೊರೆಯ ಖುಲ್ಲಾ ಜಾಗ, ರಸ್ತೆಗಳು, ಸಾರ್ವಜನಿಕ ಸ್ಥಳಗಳು, ಬಸ್ಸು, ರೈಲು ಹೀಗೆ ಎಲ್ಲೆಡೆ ನಾವು ಶಿಸ್ತು ಹಾಗೂ ಸ್ವಚ್ಛತೆ ಎದ್ದು ಕಾಣುವಂತೆ ಮಾಡಲು ಸತತ ಲಕ್ಷಕೊಟ್ಟು ಆರೋಗ್ಯಕರ ವಾತಾವರಣ ನಿಮರ್ಿಸಬೇಕು. ಇದರಿಂದ ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ. ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಛತೆಯ ಕಡೆಗೆ ಕಟ್ಟುನಿಟ್ಟಿನಿಂದ ಎಲ್ಲರೂ ಗಮನ ಹರಿಸಬೇಕು.
'ಟಜಚಿಟಿಟಟಿಜ ಟಿಜಥಣ ರಠಜಟಟಿಜ' ಅಂತಾ ಹೇಳ್ತಾರೆ. ಸ್ವಚ್ಛತೆ ಇದ್ದಲ್ಲಿ ದೇವರ ಅಸ್ತಿತ್ವ ಇರುತ್ತದೆ. ಇದು ಮಾನವನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪೂರಕವಾದುದು. ಪ್ರತಿ ವ್ಯಕ್ತಿ ಉಗುಳುವ ಚಟವನ್ನು ಮೊಟ್ಟಮೊದಲು ತ್ಯಜಿಸಬೇಕು ನಿಮಗೆ ಬೇಡವಾದ ವಸ್ತುಗಳನ್ನು ನಿಮ್ಮ ಖಾಲಿ ಬ್ಯಾಗಿನಲ್ಲಿ ಹಾಕಿಕೊಂಡು ಅಥವಾ ಕಸದ ತೊಟ್ಟಿಗೆ ಹಾಕಿ ಸ್ವಚ್ಚವಾದ ವಾತಾವರಣ ನಿಮರ್ಿಸಿ, ನಿಮ್ಮ ಖಾಲಿ ಬ್ಯಾಗಿನಲ್ಲಿ ಹಾಕಿಕೊಂಡು ನಿರುಪಯುಕ್ತ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಿ. ಸ್ವಚ್ಛತೆ ಆಗಿರಲಿ ನಿಮ್ಮ ಮೊದಲ ಆದ್ಯತೆ ಎಂಬುದೇ ನನ್ನ ಆಶೆ.