ಮುಂದಗೋಡ

ಬಾಲ ಕೃಷ್ಣನ ವೇಷ-ಭೂಷಣ,ಸ್ಪರ್ಧೆ

ಬಾಲ ಕೃಷ್ಣನ ವೇಷ-ಭೂಷಣ,ಸ್ಪರ್ಧೆ

ಲೋಕದರ್ಶನ ವರದಿ

ಮುಂಡಗೋಡ 21: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿನ ಗಾಂಧಿನಗರದ ನವಚೇತನ ಯುವಕ ಮಂಡಳ ಟ್ರಸ್ಟ್ ವತಿಯಿಂದ ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ಬಾಲ ಕೃಷ್ಣನ ವೇಷ-ಭೂಷಣ ಸ್ಪರ್ಧೆ ಹಾಗೂ ಯಶೋಧಾ ಮಯ್ಯಾ ರೂಪಕ ಸ್ಪರ್ಧೆ ಏರ್ಪಡಿಸಲಾಗಿತ್ತು. 

ಬಾಲ ಕೃಷ್ಣನ ವೇಷ-ಭೂಷಣ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಶ್ರೀಹರಿ ರಾಜೇಶ ರಾವ್, ದ್ವಿತೀಯ ರಿದಿ ಬಸವರಾಜ ತೆಲಿ ಮತ್ತು ತೃತೀಯ ಬಹುಮಾನವನ್ನು ಆರ್ಯನ್ ಅಭಿಲಾಷ ನ್ಯಾಸರ್ಗರ ಪಡೆದರು. ಹಿರಿಯರ ವಿಭಾಗದಲ್ಲಿ ಪ್ರಥಮ ಪುನರ್ವಿ ಅಣ್ವೇಕರ, ದ್ವಿತೀಯ ದೀಕ್ಷಾ ಹಿರೇಮಠ ಮತ್ತು ತೃತೀಯ ಬಹುಮಾನವನ್ನು ಖುಷಿ ಹಿರೇಮಠ ಪಡೆದರು. ನಿರ್ಣಾಯಕರಾಗಿ ಅಜಿತ ನಾಗರಕಟ್ಟೆ, ದಯಾನಂದ ನಾಯ್ಕ, ಪಾಂಡುರಂಗ ಟಿಕ್ಕೋಜಿ, ಡಾ. ನಾಗರತ್ನ ಶೆಟ್ಟಿ ಮತ್ತು ಡಾ.ಶಿರಿಶ್ಮಾ ಬಾಲನ್ ಆಗಮಿಸಿದ್ದರು.   

ಯಶೋಧಾ ಮಯ್ಯಾ ರೂಪಕ ಸ್ಪರ್ಧೆಯಲ್ಲಿ ಪ್ರಥಮ ಶ್ರಾವ್ಯ ತಾಯಿ ಅರುಣಾ ಕುತ್ತೆ, ದ್ವಿತೀಯ ರಿಷಿಕಾ ತಾಯಿ ಕಲ್ಪನಾ ಕೋರಿ ಮತ್ತು ತೃತೀಯ ಬಹುಮಾನವನ್ನು ಶ್ರುಷ್ಟಿ ತಾಯಿ ಲಕ್ಷ್ಮೀ ಪಾಟೀಲ ಪಡೆದರು.  ನಿರ್ಣಾಯಕರಾಗಿ ನರಸನಗೌಡ ಗಸ್ತಿ, ಉಮಾ ಎ.ಬಿ. ಮತ್ತು ಡಾ.ನಾಗರತ್ನ ಶೆಟ್ಟಿ ಆಗಮಿಸಿದ್ದರು. ನವಚೇತನ ಯುವಕ ಮಂಡಳ ಟ್ರಸ್ಟ್(ರಿ.)ನ ಪದಾಧಿಕಾರಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ