ರಬಾಕಾವಿಬನಹಟ್ಟಿ

ಬಿಜೆಪಿ ಟಿಕೆಟ್ ನೀಡಲು ಮುಖಂಡರಿಗೆ ಕಿರಣಕುಮಾರ ದೇಸಾಯಿ ಮನವಿ

ಬಿಜೆಪಿ ಟಿಕೆಟ್ ನೀಡಲು ಮುಖಂಡರಿಗೆ ಕಿರಣಕುಮಾರ ದೇಸಾಯಿ ಮನವಿ

ರಬಕವಿ-ಬನಹಟ್ಟಿ : ತೇರದಾಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ನ್ಯಾಯವಾದಿ ಕಿರಣಕುಮಾರ ದೇವಲ ದೇಸಾಯಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀಲಕುಮಾರ ಕಟೀಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯ ಉಸ್ತುವಾರಿ ಧಮೇಂದ್ರ ಪ್ರಧಾನ ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖರಿಗೆ ತೇರದಾಳ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕೆಂದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ಕಿರಣಕುಮಾರ ದೇಸಾಯಿ. ಬಿಜೆಪಿ ವರಿಷ್ಠರಿಗೆ ಕ್ಷೇತ್ರದ ಬಗ್ಗೆ ಮನವರಿಕೆ ಮಾಡಿ ಕೊಟ್ಟಿದ್ದು,  ಬಾರಿ ಸ್ಥಳೀಯರಿಗೆ ಟಿಕೆಟ್ ನೀಡುತ್ತಾರೆಂದು ಭರವಸೆ ನೀಡಿದ್ದಾರೆ. ಬಿಜೆಪಿ ಪಕ್ಷದ ನಿಷ್ಠಾವಂತ, ಶಿಸ್ತಿನ ಸಿಪಾಯಾದ ನನಗೆ ಟಿಕೆಟ್ ನಿಡುವ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಕಿರಣಕುಮಾರ ದೇಸಾಯಿ ಜೊತೆ ಬಿಜೆಪಿ ಪಕ್ಷದ ಪ್ರಮುಖರಾದ ಬಸವರಾಜ ಬಾಳಿಕಾಯಿ, ಅಂಕುಶ ದೇಸಾಯಿ, ಶಂಕರ ಹಣಗಂಡಿ, ಮಂಜುನಾಥ ಕೋತಿನ, ಲಕ್ಕಪ್ಪ ಕರೆನ್ನವರ, ನ್ಯಾಮಣ್ಣ ಜಮಖಂಡಿ, ಡಾ. ವಾದಿರಾಜ ದೇಶಪಾಂಡೆ, ನಿಖಿಲ ಪಾಟೀಲ ಸೇರಿದಂತೆ 50ಕ್ಕೂ ಅಧಿಕ ಕಾರ್ಯಕರ್ತರಿದ್ದರು 

ಸುದ್ದಿ ಓದಿ