ಸಿಂಧಗಿ

ಸಹನೆ, ಸೃಜನಶೀಲತೆಗೆ ಇನ್ನೊಂದು ಹೆಸರೆ ಅಟಲ್ ಬಿಹಾರಿ ವಾಜಪೇಯಿ

ಸಹನೆ, ಸೃಜನಶೀಲತೆಗೆ ಇನ್ನೊಂದು ಹೆಸರೆ ಅಟಲ್ ಬಿಹಾರಿ ವಾಜಪೇಯಿ

ಲೋಕದರ್ಶನ ವರದಿ

ಸಿಂದಗಿ 26:  ಈ ದೇಶಕಂಡ ಅಪ್ರತಿಮ ಹೋರಾಟಗಾರ, ರಾಜಕಾರಣಿ ಸೌಜನ್ಯ, ಸಹನೆ, ಸೃಜನಶೀಲತೆಗೆ ಇನ್ನೊಂದು ಹೆಸರೆ ಅಟಲ್ ಬಿಹಾರಿ ವಾಜಪೇಯಿ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಅಸಂಘಟಿತ ಕಾರ್ಮಿಕರ ಜಿಲ್ಲಾ ಸಂಚಾಲಕ ಮುತ್ತು ಶಾಬಾದಿ ಹೇಳಿದರು.

ಪಟ್ಟಣದ ರಾಗರಂಜನಿ ಸಂಗೀತ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಅಟಲ್ ಬಿಹಾರಿ ವಾಜಪೇಯಿ ಅವರಜನ್ಮ ದಿನಾಚರಣೆ ನಿಮಿತ್ಯವಾಗಿ ಕಟ್ಟಡ ಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ದೇಶದ ಕಟ್ಟಕಡೆಯ ವ್ಯಕ್ತಿ ಸಮಾಜದಲ್ಲಿ ಮುಂಚೂಣಿಯಾಗಿ ನಿಲ್ಲಬೇಕು ಸ್ವಾವಲಂಭನೆಯ ಬದುಕನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಅಟಲ್‍ಜಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಹತ್ತಾರು ಯೋಜನೆಗಳನ್ನು ರೂಪಿಸಿ ಮನೆ ಮಾತಾಗಿದ್ದರು. ಕೇವಲ ಬಿಜೆಪಿ ಪಕ್ಷದವರಿಗೆ ಅಟಲಜಿ ಅವರು ಹತ್ತಿರವಾಗಿಲ್ಲ ಅನೇಕ ಪಕ್ಷದವರಿಗೂ ಅವರು ಹತ್ತಿರದ ಸಂಭಂಧವನ್ನು ಬೆಳೆಸಿಕೊಂಡಿದ್ದರು ಅವರೋಬ್ಬ ಅಜಾತಶತ್ರುವಾಗಿ ಸಜ್ಜನಿಕೆಯ ರಾಜಕಾರಣಕ್ಕೆ ಹೆಸರಾದವರು ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ ಮತ್ತು ಬಿಜೆಪಿ ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ ಮಾತನಾಡಿ, ಅಟಲ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯ ನಿಮಿತ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಕಟ್ಟಡಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಿದದ್ದು ಅರ್ಥ ಪೂರ್ಣವಾಗಿದೆ. ಅಟಲಜಿ ಅವರು ಭಾರತೀಯ ಜನತಾ ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿ ಪಕ್ಷವನ್ನು ಮೇಲಸ್ತರಕ್ಕೆ ತಂದವರು. ತಮ್ಮ ಅಧಿಕಾರದ ಅವಧಿಯಲ್ಲಿ ಭಾರತ ದೇಶವನ್ನು ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿ ಮಾಡಿದವರು ಅವರೋಬ್ಬ ಸೃಜನಶೀಲ ರಾಜಕಾರಣಿ ಅವರ ಆದರ್ಶಗಳು ನಮಗೆಲ್ಲ ಶ್ರೀರಕ್ಷೆಯಾಗಿದೆ ಎಂದರು.

ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಜೋಗೂರ ಮತ್ತು ರಾಜಶೇಖರ ಪೂಜಾರಿ ಅವರಿಗೆ ಮುತ್ತು ಶಾಬಾದಿ ಅವರು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಮಲ್ಲು ಪೂಜಾರಿ, ಬಾಪೂಗೌಡ ಬಿರಾದಾರ, ಶಿವಾನಂದ ತಾವರಖೇಡ, ಪರುಶುರಾಮ ದಿಂಡವಾರ, ಮಲ್ಲು ಜಿಗಳಿ, ಭೀಮಾಶಂಕರ ಎಸ್, ಈರಣ ್ಣಬಂದಾಳ, ಆನಂದ ಪೂಜಾರಿ, ಬಸು ಗೌಂಡಿ, ರಮೇಶಗೌಂಡಿ, ಮುಡ್ಡಪ್ಪ ವಡ್ಡರ, ರಘುಪತಿ ಬಂಡಿವಡ್ಡರ, ಕಾಶೀನಾಥ ವಾಲಿ, ಮೈನುದ್ದಿನ ಬನ್ನೆಟ್ಟಿ, ನಾಗಪ್ಪ ಮೇಸ್ರ್ತಿ, ಮಡಿವಾಳಪ್ಪ ಬಂಕಲಗಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ