ಶಿಕ್ಷಣ ಮತ್ತು ಸಂಸ್ಕಾರದ ಜೊತೆಗೆ ಸಾಮಾನ್ಯ ಜ್ಞಾನವು ಅಗತ್ಯ
Along with education and culture, general knowledge is essential
ರಾಣೆಬೆನ್ನೂರು 10: ಮಾನವ ಜೀವಿಯಾಗಿ ಹುಟ್ಟಿಬರುವುದೇ ಆಕಸ್ಮಿಕ. ಯಾರೇ ತಪ್ಪು ಮಾಡಿದರೂ ತಪ್ಪು ತಪ್ಪೇ. ಕಾನೂನು ಎಲ್ಲರಿಗೂ ಒಂದೇ. ಭಾರತೀಯ ಕಾನೂನಿಗೆ ಪ್ರತಿಯೊಬ್ಬರು ತಲೆಬಾಗಲೇಬೇಕು. ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಮತ್ತು ತಾಲೂಕ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಹೇಮಲತಾ ಬಿ. ಹುಲ್ಲೂರ ಹೇಳಿದರು. ಅವರು ಗುರುವಾರ ಸಂಜೆ ಮಾರುತಿ ನಗರದ ಸರ್ಕಾರಿ ಪ.ಪೂ. ಕಾಲೇಜು ಭವನದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕಾ ಆಡಳಿತ, ಪೊಲೀಸ್ ಇಲಾಖೆ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಆಯೋಜಿಸಿದ್ದ, 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ದೇಶದ ಭವಿಷ್ಯದ ನಾಗರಿಕರು. ನಮ್ಮ ನಿತ್ಯ ಬದುಕಿನ ಜೀವನದಲ್ಲಿ ಶಿಕ್ಷಣ ಮತ್ತು ಸಂಸ್ಕಾರದ ಜೊತೆಗೆ ಸಾಮಾನ್ಯ ಜ್ಞಾನವನ್ನು ಅರ್ಥ ಮಾಡಿಕೊಂಡು, ವಾಹನ ಇಲಾಖೆಗೆ ಸಂಬಂಧಿಸಿದಂತೆ ಕನಿಷ್ಠ ಮಾಹಿತಿಯನ್ನು ತಾವು ತಿಳಿದು ಮತ್ತೊಬ್ಬರಿಗೆ ತಿಳಿಸುವ ಕಾರ್ಯದಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು. ಜಿಲ್ಲೆಯು ಸೇರಿದಂತೆ ನಾಡಿನಲ್ಲಿ ನಿತ್ಯವೂ ಅಪಘಾತಗಳ ಸರಣಿ ಎಲ್ಲೆಡೆಯೋ ಕಾಣುತ್ತಿದ್ದೇವೆ ಅಪಘಾತಗಳಿಗೆ ಮುಖ್ಯ ಕಾರಣ ಅಜಾಗರೂ ಕತೆ ಮತ್ತು ಮಧ್ಯಪಾನ ಸೇವಿಸಿ ವಾಹನ ಚಾಲನೆ. ವಾಹನಗಳನ್ನು ಚಲಾಯಿಸುವಾಗ ಅತ್ಯಂತ ಜಾಗರೂಕತೆಯಿಂದ ಚಲಾಯಿಸಬೇಕು ಇಲ್ಲದೆ ಹೋದರೆ ತಮ್ಮ ಜೊತೆಗೆ ಮತ್ತೊಬ್ಬರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸುಬ್ರಾಯ ಹೆಗಡೆ ಅವರು, ಜೀವನ ಮತ್ತು ಜೀವ ಅತ್ಯಮೂಲ್ಯ. ಅಪಘಾತ ಸಂಭವಿಸಿ ಯಾರಿಗೂ ನೋವಾದರೂ ಸಹಾ, ಜೀವನಪರ್ಯಂತ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವಾಹನ ಚಲಾಯಿಸುವಾಗ ಅದಕ್ಕೆ ಸಂಬಂಧಿಸಿದ ಚಾಲನಾ ಪರವಾನಿಗೆ ಪತ್ರ ಕಡ್ಡಾಯ. ಪರವಾನಿಗಿ ಪತ್ರವಿದ್ದರೆ, ಭವಿಷ್ಯದಲ್ಲಿ ದೊರೆಯಬಹುದಾದ ಎಲ್ಲ ರೀತಿಯ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ ಇಲ್ಲದೆ ಹೋದರೆ ಅನೇಕ ರೀತಿಯ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು.
ಪಾಚ್ಚಿಮಾತ್ಯ ರಾಷ್ಟ್ರಗಳಲ್ಲಿ ವಾಹನ ಸವಾರರು ಸಂಬಂಧಿಸಿದ ದಾಖಲೆಗಳನ್ನು ತಮ್ಮ ಜೊತೆ ಇಟ್ಟುಕೊಂಡು ಸಂಚರಿಸುವುದರಿಂದ, ಅನುಭವಿಸಿಬಹುದಾದ ಯಾವುದೇ ತೊಂದರೆಯಿಂದ ಸರಳವಾಗಿ ರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದು ಸಾಧ್ಯಂತವಾಗಿ ರಸ್ತೆ ನಿಯಮಾವಳಿ ಮತ್ತು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳು ಕುರಿತು ಮಾತನಾಡಿದರು. ಪ್ರಧಾನ ದಿವಾಣಿ ನ್ಯಾಯಾಧೀಶ ಹಾಗೂ ತಾ. ಕಾ. ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಆದಿತ್ಯಕುಮಾರ ಎಚ್.ಆರ್. ಅವರು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್. ಬುರಡಿಕಟ್ಟಿ ಅವರು, ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಕುರಿತು ಒಂದು ದಿನ ಮಾಹಿತಿ ನೀಡಿ, ವಾಹನ ಚಾಲನಾ ಪರವಾನಿಗೆ ಪಡೆದ ಮತ್ತು ಇರುವುದನ್ನು ತಾವೇ ದೃಢೀಕರಿಸಿಕೊಂಡರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಈ ಕುರಿತು ಚಿಂತನೆ ನಡೆಸಿದಾಗ ಅರ್ಧ ಸಮಸ್ಯೆಗಳು ಕಾಲೇಜು ಮಟ್ಟದಿಂದಲೇ ಪರಿಹಾರ ಕಂಡಂತಾಗುತ್ತದೆ ಎಂದು ತಮ್ಮ ಅಮೂಲ್ಯ ಸಲಹೆ ನೀಡಿದರು. ಸಾರಿಗೆ ನಿಯಮ ಕುರಿತು ಇಲಾಖೆಯ ನಾಗರಾಜ್, ತಾಲೂಕಾ ವೈದ್ಯಾಧಿಕಾರಿ ಡಾ. ಪ್ರಕಾಶ ಬಿ., ಗ್ರಾಮಾಂತರ ಸಿಪಿಐ ನಾಗೇಶ, ಕಾಲೇಜು ಪ್ರಾಚಾರ್ಯ ವಿವೇಕಾನಂದ ಪಿ.ಆರ್., ನೋಟರಿ ಕುಮಾರ ಡಿ. ಮಡಿವಾಳರ, ಆಫರ ಸರ್ಕಾರಿ ವಕೀಲ ಟಿ.ಎಸ್. ಜಂಗರಡ್ಡೇರ, ಮಾಜಿ ಪ್ರಚಾರ ಎಚ್‌ಎಮ್ ದೊಡ್ಡಬಿಲ್ಲ, ಕಾಲೇಜು ಉಪನ್ಯಾಸಕರು, ಮೋಟಾರು ವಾಹನ ನೀರೀಕ್ಷಕ ಅನಿಲಕುಮಾರ ಜಿ. ಸೇರಿದಂತೆ ಮತ್ತಿತರ ಗಣ್ಯರು, ಸಾರಿಗೆ ಇಲಾಖೆ ಸಿಬ್ಬಂದಿ, ಲಾರಿ, ಮೋಟಾರು, ಆಟೋ ಟ್ಯಾಕ್ಸಿ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕುಸುಮಾಂಜಲಿ ಪ್ರಾರ್ಥಿಸಿದರು. ಎ. ಆರ್. ಟಿ.ಓ.ಅಧಿಕ್ಷಕ ನಾಗರಾಜ್ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಶಿಕ್ಷಣ ಇಲಾಖೆ ಸಿ.ಆರ್. ಪಿ. ಆರಿ್ವ. ಪಾಟೀಲ, ನಿರೂಪಿಸಿ, ಸಾರಿಗೆ ಇಲಾಖೆ ಪ್ರಥಮ ದರ್ಜೆ ಸಹಾಯಕ ಆರ್. ಜಗದೀಶ್ ವಂದಿಸಿದರು. ಸಂದರ್ಭದಲ್ಲಿ ರಸ್ತೆ ನಿಯಮಾವಳಿಗಳು ಕುರಿತು ಭಿಕ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 