ಮಹಲಿಂಗಪುರ

ಅಜಾತಶತ್ರು ಕಾಂಗ್ರೆಸ್ ನಾಯಕ ಜಾವೇದ್ ಭಾಗವಾನ ಅಗಲಿಕೆಗೆ ಗಣ್ಯರ ಕಂಬನಿ.

ಅಜಾತಶತ್ರು ಕಾಂಗ್ರೆಸ್ ನಾಯಕ ಜಾವೇದ್ ಭಾಗವಾನ ಅಗಲಿಕೆಗೆ ಗಣ್ಯರ ಕಂಬನಿ.

ಮಹಾಲಿಂಗಪುರ: ಅಜಾತಶತ್ರು, ಕಾಂಗ್ರೆಸ್ ಪಕ್ಷದ ಧುರೀಣ ಹಾಗೂ ಪಟ್ಟಣದಲ್ಲಿ ಹಿಂದೂ, ಮುಸ್ಲಿಂ ಸಮುದಾಯಗಳಿಗೆ ಭಾವೈಕ್ಯತೆಯ ಕೊಂಡಿಯಾಗಿದ್ದ ಪುರಸಭೆ ಸದಸ್ಯ ಜಾವೇದ್ ಮಹ್ಮದ್ ಸಾಬ ಭಾಗವಾನ (53) ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.

ತಂದೆ ದಿ.ಮಹ್ಮದ್ ಸಾಬ ಅವರ ಬಳುವಳಿಯಾಗಿ ಬಂದ ರಾಜಕೀಯ ಕ್ಷೇತ್ರದಲ್ಲಿ ಸುಮಾರು 3ದಶಕಗಳಿಂದ ಕಾಂಗ್ರೆಸ್ ಪರವಾಗಿ ಉತ್ತಮ ಕಾರ್ಯ ನಿರ್ವಹಿಸಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿ ನಾಯಕರಾಗಿದ್ದರು. ಹಾಲಿಯಾಗಿ ಹಾಗೂ ಮೂರು ಬಾರಿ ಪುರಸಭೆ ಮತ್ತು ಮುಧೋಳ ಅರ್ಬನ್ ಬ್ಯಾಂಕ್ ಸದಸ್ಯರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಶ್ರೀಯುತರು ತಾಯಿ, ಓರ್ವ ಪುತ್ರ, ಪುತ್ರಿಯರು ಹಾಗೂ ಸಹೋದರರನ್ನಲ್ಲದೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಸಂಜೆ ಅಪಾರ ಜನಸ್ತೋಮದ ಮಧ್ಯೆ ಮುಸ್ಲಿಂ ಸಮುದಾಯದ ಕಬ್ರಸ್ಥಾನದಲ್ಲಿ ದಿ. ಜಾವೇದ್ ಭಾಗವಾನ ಅವರ ಪಾರ್ಥಿವ ಶರೀರಕ್ಕೆ ಧಪನ ಕಾರ್ಯ ನೆರವೇರಿಸಲಾಯಿತು. 

ಕಂಬನಿ :. ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್ ಜಿ.ನಂಜಯ್ಯನಮಠ, ಶಾಸಕ ಆನಂದ ನ್ಯಾಮಗೌಡ, ಶಾಸಕ ಸಿದ್ದು ಸವದಿ, ಮಾಜಿ ವಿಪ ವಿರೋಧ ಪಕ್ಷದ ನಾಯಕ ಎಸ್ ಆರ್. ಪಾಟೀಲ್,ಮಾಜಿ ಸಚಿವರಾದ ಶ್ರೀಮತಿ ಉಮಾಶ್ರೀ, ಆರ್ ಬಿ.ತಿಮ್ಮಾಪೂರ, ವಿವಿಧ ಪಕ್ಷಗಳ ಮುಖಂಡರಾದ ಕುಮಾರ್ ಮಲಘಾಣ, ಯಲ್ಲನ್ನಗೌಡ ಪಾಟೀಲ್, ಬಸನ್ನಗೌಡ ಪಾಟೀಲ್, ಸಿದ್ದು ಕೊಣ್ಣೂರ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಡಾ.ಎ ಆರ್.ಬೆಳಗಲಿ, ಸತೀಶ್ ಬಂಡಿವಡ್ಡರ, ರಂಗನಗೌಡ ಪಾಟೀಲ್, ಸಜನಸಾಬ ಪೆಂಡಾರಿ, ನಜೀರ್ ಕಂಗನೋಳಿ, ಅಜರ್ುನ್ ಹಲಗಿಗೌಡರ ಮುಂತಾದ ಪಟ್ಟಣದ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹಿಂದೂ ಮುಸ್ಲಿಂ ಗಣ್ಯರು ಇವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ 

ಸುದ್ದಿ ಓದಿ