ಪಿ ಎಸ್ ಶಾಲಾ ಮೈದಾನದಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ

ಪಿ ಎಸ್ ಶಾಲಾ ಮೈದಾನದಲ್ಲಿ 77 ನೇ ಗಣರಾಜ್ಯೋತ್ಸವ  ಆಚರಣೆ

           ಕೊಲ್ಹಾರ  27: ಸಂವಿಧಾನ ಮೌಲ್ಯಗಳಾದ ಸಮಾನತೆ ಐಕ್ಯತೆ ಭಾತೃತ್ವ ಸರ್ವಧರ್ಮ ಸಮನ್ವಯತೆ ಸಾಧಿಸಿದಾಗ ಮಾತ್ರ ಸಂವಿಧಾನದ ಮೌಲ್ಯ ಹೆಚ್ಚಾಗುತ್ತದೆ: ತಹಶೀಲ್ದಾರ ಎಸ್ ಎಚ್ ಅರಕೇರಿ ತಾಲ್ಲೂಕು ಆಡಳಿತದಿಂದ ಪಟ್ಟಣದ ಎಮ್ ಪಿ ಎಸ್ ಶಾಲಾ ಮೈದಾನದಲ್ಲಿ 77 ನೇ ಗಣರಾಜ್ಯೋತ್ಸವನ್ನು ಸೋಮವಾರ ತಾಲ್ಲೂಕು ದಂಡಾಧಿಕಾರಿ ಎಸ್ ಎಚ್ ಅರಕೇರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಸಂವಿಧಾನದ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು ಅಂದಾಗ ಸಂವಿಧಾನ ಮೌಲ್ಯ ಹೆಚ್ಚುತ್ತದೆ ಮತ್ತು ಸಂವಿಧಾನ ರಚನಾ ಸಭೆ ಹಾಗೂ ಕರಡು ರಚನಾ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಡಾ ಬಾಬು ರಾಜೇಂದ್ರ ಪ್ರಸಾದ್ ಮತ್ತು ಡಾ ಬಿ ಆರ್ ಅಂಬೇಡ್ಕರ ಅವರ ಶ್ರಮದಾನ ಕೊಂಡಾಡಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ   

          ಕೈಲಾಸನಾಥ ಸ್ವಾಮಿಗಳು ಶೀಲವಂತ ಹೀರೆಮಠ ಕೊಲ್ಹಾರ ಮಾತನಾಡಿ ಸಂವಿಧಾನ ನಮಗೆ ಸಾಮಾಜಿಕ, ಆರ್ಥಿಕ ರಾಜಕೀಯ ನ್ಯಾಯ ಸಮಾನತೆ ಮತ್ತು ತಾರತಮ್ಯ ನಿವಾರಿಸಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ  ಸಾಧನೆಗೈದ ಶ್ರೀಗಳಿಗೆ ,ಪತ್ರಕರ್ತರಿಗೆ,ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಉಪಾಧ್ಯಕ್ಷ ರಾಜಮಾ ನದಾಫ್,ಪಂಚ ಗ್ಯಾರಂಟಿ ಅಧ್ಯಕ್ಷ ಸಂತೋಷ್ ಗಣಾಚಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದೀನ, ಮುಖ್ಯಾಧಿಕಾರಿ ವೀರೇಶ ಹಟ್ಟಿ ಪಿಎಸ್‌ಐ ಅಶೋಕ ನಾಯ್ಕ, ಲಕ್ಷ್ಮೀ ತಲ್ಲೂರ, ಎಸ್ ಎಸ್ ಪಡಸಲಗಿ, ಎಂ ಕೆ ಪುರೋಹಿತ, ಎಸ್ ಎನ್ ತಡಲಗಿ, ಸಂಗಮೇಶ ಜಂಗಮಶೆಟ್ಟಿ ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಪಟ್ಟಣದ ನಾಗರೀಕರು ಭಾಗವಹಿಸಿದ್ದರು. 


ಸುದ್ದಿ ಓದಿ