ಸಹಕಾರಿ ಬ್ಯಾಂಕ್ ಚುನಾವಣೆಗೆ 37 ನಾಮಪತ್ರ ಸಿಂಧು
37 nomination papers for Co-operative Bank election Sindhu
ಸಹಕಾರಿ ಬ್ಯಾಂಕ್ ಚುನಾವಣೆಗೆ 37 ನಾಮಪತ್ರ ಸಿಂಧು
ತಾಳಿಕೋಟಿ 12: ಪಟ್ಟಣದ ಪ್ರತಿಷ್ಠಿತ ಸಹಕಾರಿ ಕೋ- ಆಪರೇಟಿವ್ ಬ್ಯಾಂಕ್ ಇದರ ಆಡಳಿತ ಮಂಡಳಿ ನಿರ್ದೇಶಕರ 13 ಸ್ಥಾನಗಳಿಗೆ ಒಟ್ಟು 37 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಎಲ್ಲಾ 37 ನಾಮಪತ್ರಗಳೂ ಸಿಂಧುತ್ವ ಪಡೆದುಕೊಂಡಿವೆ. ನಾಮಪತ್ರ ಪರೀಶೀಲನೆ ದಿನವಾದ ಜನವರಿ 12ರಂದು, ನಾಮಪತ್ರಗಳನ್ನು ಪರೀಶೀಲಿಸಿದ ಚುನಾವಣಾಧಿಕಾರಿ ಚೇತನ್ ಭಾವಿಕಟ್ಟಿ ಹಾಗೂ ಸಹಾಯಕ ಚುನಾವಣಾಧಿಕಾರಿ ಆರಿ್ಬ.ಧಮ್ಮೂರಮಠ ಅವರು ಎಲ್ಲಾ 37 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ ಎಂದು ಪ್ರಕಟಿಸಿದ್ದಾರೆ.
ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಾಮಾನ್ಯ ಕ್ಷೇತ್ರಕ್ಕೆ 18 ಅಭ್ಯರ್ಥಿಗಳು, ಮಹಿಳಾ ಕ್ಷೇತ್ರಕ್ಕೆ 6, ಪರಿಶಿಷ್ಟ ಜಾತಿ ಯ 03, ಪರಿಶಿಷ್ಟ ಪಂಗಡಕ್ಕೆ 02, ಹಿಂದುಳಿದ ವರ್ಗ ಅ ಗೆ 04, ಹಿಂದುಳಿದ ವರ್ಗ ಬ ಗೆ 04 ಹೀಗೆ ಒಟ್ಟು 37 ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದರು ಈಗ ಇವರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಜನೆವರಿ 13ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದ್ದು ಜನೆವರಿ 19 ರಂದು ಮತದಾನ ನಡೆಯಲಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 