ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ: 18 ಜನರ ದಾರುಣ ಸಾವು

ಉತ್ತರ ಪ್ರದೇಶದಲ್ಲಿ ಭೀಕರ  ಅಪಘಾತ: 18  ಜನರ ದಾರುಣ ಸಾವು

ಲಕ್ನೋ,  ಜುಲೈ 28   ಉತ್ತರ ಪ್ರದೇಶದಲ್ಲಿ ಸಂಭವಿಸಿದ  ಭೀಕರ  ರಸ್ತೆ ಅಪತಾತದಲ್ಲಿ 18 ಜನರು ಮೃತಪಟ್ಟಿದ್ದಾರೆ .
ಬಾರಾಬಂಕಿ ಜಿಲ್ಲೆಯ  ಲಕ್ನೋ-ಅಯೋಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರಕ್ ರಸ್ತೆ ಬದಿ ನಿಂತಿದ್ದ  ಬಸ್ ಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದ್ದು ಪರಿಣಾಮ  18 ಜನರು ಮೃತಪಟ್ಟಿದ್ದು, ಇತರೆ  15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ .
ಎಲ್ಲಾ ಗಾಯಗೊಂಡವರನ್ನು ಲಕ್ನೋ ಟ್ರಾಮಾ ಕೇಂದ್ರಕ್ಕೆ ಸೇರಿಸಲಾಗಿದೆ. ದುರಂತ ಸಂಭವಿಸಿದಾಗ ಗ  ಬಸ್ ಹರಿಯಾಣದಿಂದ ಬಿಹಾರಕ್ಕೆ ಹೋಗುತ್ತಿತ್ತು ಎಂದು ಹೇಳಲಾಗಿದೆ.
ಭಾರಿ ಮಳೆಯಿಂದಾಗಿ  ಬಸ್ ಅನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ರಿಪೇರಿ ಮಾಡುತ್ತಿದ್ದಾಗ  ಲಕ್ನೋ ಕಡೆಗೆ ಪ್ರಯಾಣಿಸುತ್ತಿದ್ದ ಟ್ರಕ್ ಬಸ್ ಗೆ ಬಲವಾಗಿ ಡಿಕ್ಕಿ ಹೊಡೆಯಿತು   ಎಂದು  ಪೊಲೀಸ್ ಮೂಲಗಳು ಹೇಳಿವೆ.

ಸುದ್ದಿ ಓದಿ