1 ದಿನಕ್ಕೆ ಬ್ರಿಟಿಷ್ ಹೈಕಮಿಷನರ್ ಆದ ನೋಯ್ದಾ ವಿವಿ ವಿದ್ಯಾರ್ಥಿತಿನಿ
ಹೊಸದಿಲ್ಲಿ 10 : ನೋಯ್ಡಾ ವಿಶ್ವವಿದ್ಯಾಲಯದ ವಿದ್ಯಾಥರ್ಿನಿ ಇಷಾ ಬೆಹಲ್ ಅವರು
ಒಂದು ದಿನದ ಮಟ್ಟಿಗೆ ಭಾರತದಲ್ಲಿನ
ಬ್ರಿಟಿಷ್ ಹೈಕಮಿಷನರ್ ಆಗುವ ಅತ್ಯಪೂರ್ವ ಸಾಧನೆಯನ್ನು
ಮಾಡಿ ದೇಶದ ಜನತೆಯ ಗಮನವನ್ನು
ಸೆಳೆದಿದ್ದಾರೆ.
ಸಾರ್ವಜನಿಕ ನೀತಿ ಮತ್ತು ಕಾನೂನಿನಲ್ಲಿ
ತನ್ನ ಉನ್ನತ ವ್ಯಾಸಂಗ ಪೂರೈಸಿದ ಬಳಿಕ ತಾನು ಸಾಮಾಜಿಕ
ಉದ್ಯಮಿ ಯಾಗುವ ಗುರಿಯನ್ನು ಇಷಾ ಹೊಂದಿದ್ದಾರೆ.
ನೋಯ್ಡಾ ವಿವಿಯಲ್ಲಿ ಪಾಲಿಟಿಕಲ್ ಸಯನ್ಸ್ ವಿದ್ಯಾರ್ಥಿಯಾಗಿರುವ ಇಷಾ ಮೊನ್ನೆ ಭಾನುವಾರ
24 ತಾಸುಗಳ ಮಟ್ಟಿಗೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಆದರು.
ಹೇಗಪ್ಪ ಅಂದರೆ ಇದೇ ಅ.11ರಂದು
ಆಚರಿಸಲ್ಪಡುವ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಬ್ರಿಟಿಷ್ ಹೈಕಮಿಷನ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಆಕೆ ವಿಜೇತಳಾದದ್ದು !
'ಲಿಂಗ ಸಮಾನತೆ ಎಂದರೆ ನಿಮ್ಮ ದೃಷ್ಟಿಯಲ್ಲಿ ಏನು?' ಎಂಬ ಬಗ್ಗೆ ಕಿರು ವಿಡಿಯೋ ಚಿತ್ರಿಕೆಯನ್ನು ರಚಿಸಿ ಸಲ್ಲಿಸುವ ಬ್ರಿಟಿಷ್ ಹೈಕಮಿಷನ್ ಸ್ಪರ್ಧೆಯನ್ನು 18ರಿಂದ 23ರ ವಯೋಮಿತಿಯ ಮಹಿಳೆಯರಿಗಾಗಿ ಏರ್ಪಡಿಸಲಾಗಿತ್ತು. ಇದರಲ್ಲಿ ದೇಶಾದ್ಯಂತ 58 ವಿದ್ಯಾರ್ಥಿನಿಯರು ಭಾಗವಹಿಸಿ ತಾವು ಸಿದ್ಧಪಡಿಸಿದ ವಿಡಿಯೋ ಸಲ್ಲಿಸಿದ್ದರು. ಇದರಲ್ಲಿ ಇಷಾ ವಿಡಿಯೋ ಸರ್ವಶ್ರೇಷ್ಠವೆಂದು ಪುರಸ್ಕೃತವಾಯಿತು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 