ಬೆಳಗಾವಿ: 'ಯುವ ಇಂಜಿನಿಯರ್ ಕರ್ತವ್ಯ ಜವಾಬ್ದಾರಿಯಾಗಿ ನಿರ್ವಹಿಸಿ'
ಲೋಕದರ್ಶನ ವರದಿ
ಬೆಳಗಾವಿ 16: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ 73ನೇ ಸ್ವಾತಂತ್ರೋತ್ಸವವನ್ನು 15ರಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಈ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ 72 ವರ್ಷಗಳ ಸ್ವಾತಂತ್ರಾನಂತರವೂ ನಮ್ಮ ದೇಶ ನೈಸಗರ್ಿಕ ವಿಕೋಪಗಳಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ.
ಇಂತಹ ವಿಕೋಪಗಳಿಗೆ ಒಳಗಾದ ನಿರಾಶ್ರಿತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಇಂಜಿನಿಯರ್ಗಳ ಹಾಗೂ ತಂತ್ರಜ್ಞರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ನಮ್ಮ ಯುವ ಇಂಜಿನಿಯರ್ಗಳು ತಮ್ಮ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ವಿತಾವಿ ಕುಲಸಚಿವರಾದ ಡಾ. ಎ. ಎಸ್. ದೇಶಪಾಂಡೆ, ಪರೀಕ್ಷಾ ವಿಭಾಗದ ಕುಲಸಚಿವರಾದ ಡಾ. ಸತೀಶ ಅಣ್ಣಿಗೇರಿ, ಹಣಕಾಸು ಅಧಿಕಾರಿ ಎಂ. ಎ. ಸಪ್ನಾ, ವಿತಾವಿ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾಥರ್ಿಗಳು ಸಮಾರಂಭದಲ್ಲಿ ಭಾಗಹಿಸಿದ್ದರು.