ಜಿಲ್ಲೆಯಾದ್ಯಂತ "ಮತ್ತೊಮ್ಮೆ ದಿಗ್ವಿಜಯ" ರಥಯಾತ್ರೆ
ಲೋಕದರ್ಶನ ವರದಿ
ಬೆಳಗಾವಿ 13: ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಶನಿವಾರ ಪತ್ರಿಕಾಗೋಷ್ಟಿ ಕರೆಯಲಾಗಿತ್ತು. ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷಗಳು ತುಂಬಿದ ಸವಿನೆನಪಿನಲ್ಲಿ "ಮತ್ತೊಮ್ಮೆ ದಿಗ್ವಿಜಯ" ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಅದರ ವಿವರಗಳನ್ನು ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವತರ್ಿ ಸೂಲಿಬೆಲೆ ನೀಡಿದರು.
ಸ್ವಾಮಿ ವಿವೇಕಾನಂದರು ಕನರ್ಾಟಕದಲ್ಲಿ ಅತಿ ಹೆಚ್ಚು ದಿನಗಳನ್ನು ಕಳೆದದ್ದು ಬೆಳಗಾವಿಯಲ್ಲಿಯೇ! ಅದೂ 126 ವರ್ಷಗಳ ಹಿಂದೆ. ಹಿಂದೂ ಧರ್ಮದ ಪ್ರತಿನಿಧಿಯಾಗಿ, ಅಂದೊಮ್ಮೆ ಸ್ವಾಮಿ ವಿವೇಕಾನಂದರು ದಿಗ್ವಿಜಯದ ಶಂಖನಾದ ಮಾಡಿದ್ದರು. ಈಗ ನಾವೆಲ್ಲರೂ ಒಗ್ಗಟ್ಟಾಗಿ ದಿಗ್ವಿಜಯದ ಕಹಳೆಯನ್ನು ಮತ್ತೊಮ್ಮೆ ಮೊಳಗಿಸಬೇಕಾಗಿದೆ. ವಿವೇಕಾನಂದರ ತತ್ವಗಳನ್ನು ಮನೆ-ಮನೆಗೆ ತಲುಪಿಸುವ ಪ್ರಯತ್ನ ನಮ್ಮದಾಗಿದೆ. ಅದಕ್ಕಾಗಿ ಯುವಕರ ಪಾತ್ರ ಬಹು ಮುಖ್ಯ. ಯಾತ್ರೆಯಲ್ಲಿ ಅಂದಾಜು ಒಂದು ಸಾವಿರ ಯುವಜನತೆ ಸೇರುವ ಸಾಧ್ಯತೆಗಳಿವೆ ಎಂದು ಸೂಲಿಬೆಲೆ ತಿಳಿಸಿದರು.
ದಿ. 16ರಂದು ಅಥಣಿಯಿಂದ ಯಾತ್ರೆ ಶುರುವಾಗಿ ದಿ.20 ರಂದು ಬೆಳಗಾವಿ ನಗರಕ್ಕೆ ಆಗಮಿಸಲಿದೆ. ನಗರದ ಆರ್.ಎಲ್.ಎಸ್. ಮೈದಾನದಿಂದ ಶುರುವಾಗಿ ಚನ್ನಮ್ಮ ವೃತ್ತದಿಂದ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಬಂದು ಸೇರಲಿದೆ. ದಿ. 21ಕ್ಕೆ ಸವದತ್ತಿಯಲ್ಲಿ ಅಂತ್ಯಗೊಂಡು ನಂತರ ಧಾರವಾಡ ಜಿಲ್ಲೆಗೆ ರಥಯಾತ್ರೆ ಮುಂದುವರಿಯುತ್ತದೆ ಎಂದು ತಿಳಿಸಿದರು.
ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದಶರ್ಿ ಸ್ವಾಮಿ ಆತ್ಮಾನಂದಜೀ ಮಹಾರಜ್ ಮಾತನಾಡಿ ಸ್ವಾಮಿ ವಿವೇಕಾನಂದರು 1892ರ ಅಕ್ಟೋಬರ್ನಲ್ಲಿ ಬೆಳಗಾವಿಗೆ ಆಗಮಿಸಿದ್ದರು. ಆಗ 12 ದಿನಗಳ ಕಾಲ ಅವರು ತಂಗಿದ್ದರು. ಅದರ ಹೆಮ್ಮೆ ಬೆಳಗಾವಿ ನಗರದ್ದಾಗಿದೆ ಎಂದರು.
ವಿವೇಕಾನಂದರ ಬೆಳಗಾವಿ ಭೇಟಿಯ ಸವಿನೆನಪಿಗಾಗಿ ಆಶ್ರಮದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರ ವಿವರಗಳನ್ನು ನೀಡಿದರು. ಶನಿವಾರ ದಿ. 20ರಂದು ಶ್ರೀ ವಿಠ್ಠಲ ರಖುಬಾಯಿ ಸಂಗೀತ ಕಲಾಮಂಚದವರಿಂದ ವರ್ಕರಿ ಭಜನೆಗಳು, ರವಿವಾರ ದಿ.21ರಂದು ಸ್ವಾಮಿ ದಿವ್ಯ ರತ್ನಾನಂದಜಿ ಮಹಾರಾಜರಿಂದ ಭಜನೆಗಳು, ಶನಿವಾರ ದಿ. 27ರಂದು ಸಂಜಯ ದೇಶಪಾಂಡೆ ಅವರಿಂದ ಸಿತಾರ ವಾದನ ಹಾಗೂ ದಿ. 28ರಂದು ಬಾಲಚಂದ್ರ ನಾಕೋಡರಿಂದ ಗಾಯನ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ಈ ಎಲ್ಲ ಕಾರ್ಯಕ್ರಮಗಳು ಸಾಯಂಕಾಲ 6.30ರಿಂದ 8.30ರವರೆಗೆ ನಡೆಯಲಿವೆ. ಕಾರ್ಯಕ್ರಮದಲ್ಲಿ ಸ್ವಾಮಿ ಆತ್ಮಾನಂದಜೀ ಮಹಾರಾಜ್, ಸ್ವಾಮಿ ತ್ಯಾಗಿಶ್ವರಾನಂದಜೀ ಮಹಾರಾಜ್, ದಾವಣಗೆರೆ ಇವರುಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ|| ಡಿ.ಸಿ. ರಾಜಪ್ಪ, ಪೊಲೀಸ್ ಆಯುಕ್ತರು, ಬೆಳಗಾವಿ, ಚಕ್ರವತರ್ಿ ಸೂಲಿಬೆಲೆ, ಯುವಾ ಬ್ರಿಗೇಡ್ ಮಾರ್ಗದಶರ್ಿಗಳು ಹಾಗೂ ವಿಶೇಷ ಆಹ್ವಾನಿತರಾಗಿ ಶಿತಲ್ ದಿನೇಶ ಕೊಲ್ಹಾಪುರೆ ಆಗಮಿಸಲಿದ್ದಾರೆ. ಎಲ್ಲರೂ ರಾಮಕೃಷ್ಣ ಮಿಷನ್ ಆಶ್ರಮ, ಬೆಳಗಾವಿಯಲ್ಲಿ ನಡೆಯಲಿರುವ ಎಲ್ಲ ಕಾರ್ಯಕ್ರಮಗಳಿಗೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸ್ವಾಮಿಗಳು ಹೇಳಿರುತ್ತಾರೆ.
ಬಾಕ್ಸ್:
ನಗರದಲ್ಲಿ ಯುವಪೀಳಿಗೆ ಇಂದು ಗಾಂಜಾ ಅಫಿಮ್ಗಳಂತಹ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಂತಹರನ್ನು ಸರಿದಾರಿಗೆ ತರಲು ಹಾಗೂ ಸಮಾಜದಲ್ಲಿ ತಲೆ ಎತ್ತಿ ಓಡಾಡುವಂತೆ ಮಾಡಲು ವಿವೇಕಾನಂದರ ಪ್ರಭಾವಿ, ಸಕಾರಾತ್ಮಕ ತತ್ವಗಳ ಬೋಧನೆ ಅತ್ಯವಶ್ಯಕವಾಗಿದೆ.
- ಚಕ್ವವತರ್ಿ ಸೂಲಿಬೆಲ