'ಮಕ್ಕಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕ ಭಕ್ತಿ ಬೆಳೆಯಲಿ'
ಲೋಕದರ್ಶನ ವರದಿ
ಬೆಳಗಾವಿ 19: ಶರಣರ ಆದರ್ಶವನ್ನು ವೈಚಾರಿಕ ಹಾಗೂ ವೈಜ್ಞಾನಿಕ ನೆಲಗಟ್ಟಿನಲ್ಲಿ ವಿಶ್ಲéೇಸಿದಾಗ, ಅವರು ತಮ್ಮ ಬದುಕನ್ನು ಎಷ್ಟು ಅನುಭಾವಿಕವಾಗಿ ಆನಂದಮಯವಾಗಿ ಆಚರಿಸಿದರು ಎನ್ನುವುದು ಗೊತ್ತಾಗುತ್ತದೆ. ವಿಶ್ವಗುರು ಬಸವಣ್ಣನವರ ಬಾಲ್ಯ ಹಾಗೂ ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಬಾಲ್ಯದಲ್ಲಿ ನಾವು ವ್ಯತ್ಯಾಸವನ್ನು ಕಾಣುತ್ತೇವೆ. ಕಾರಣ, ಗುರು ಬಸವಣ್ಣನವರು ಬಾಲ್ಯದಲ್ಲಿ ತಮ್ಮ ಮನೆಯ ಪದ್ಧತಿಯಂತೆ ಬಹುದೇವತಾ ಆರಾಧನೆಯಲ್ಲಿ ಬೆಳೆದು ಬಂದವರು. ಆದರೆ, ಅವರ ಚಿಕಿತ್ಸಕಾ ಬುದ್ಧಿಯಿಂದ ಎಲ್ಲವನ್ನು ಸತ್ಯದ ಒರೆಗಲ್ಲಿಗೆ ಹಚ್ಚಿ ಪರಿಕ್ಷಿಸಿಯೇ ನಂಬುತ್ತಿದ್ದರು. ಆ ರೀತಿಯಲ್ಲಿ ಮೊದಲು ಬಹುದೇವತಾ ಆರಾಧನೆಯಲ್ಲಿ ರೂಪುಗೊಂಡು, ನಂತರ ಏಕ ದೇವತಾ ಉಪಾಸಕರಾಗಿ - ತ್ರಿಮೂತರ್ಿಗಳಲ್ಲಿ ಒಬ್ಬನಾದ ಶಿವನನ್ನು ಗಾಢವಾಗಿ ಪೂಜಿಸಲು ಅಣಿಯಾದರು. ನಂತರ ನಂತರದಲ್ಲಿ, ನಿರಾಕಾರ ಪರಮಾತ್ಮನು ಒಬ್ಬನೇ ಒಬ್ಬನು, ಆತನಿಗೆ ಯಾವುದೇ ವ್ಯಕ್ತಿಗಳ ಪ್ರಾಣಿಗಳ ಮರ ಗಿಡಗಳ ಆಕಾರ ತರವಲ್ಲ ಎಂದು ವಿಶ್ವದಾಕಾರದಲ್ಲಿ "ಇಷ್ಟಲಿಂಗ"ವನ್ನು ರೂಪಿಸಿ, ಪ್ರಪ್ರಥಮವಾಗಿ ನಿರಾಕಾರ ದೇವರಿಗೆ "ಇಷ್ಟಲಿಂಗ"ದ ಆಕಾರವನ್ನು ಕಂಡುಹಿಡಿದು ಪೂಜಿಸಲು ಅನುವುಮಾಡಿಕೊಟ್ಟರು. ಆದರೆ, ಚಿನ್ಮಯಜ್ಞಾನಿ ಚನ್ನಬಸವಣ್ಣನವರು ಹುಟ್ಟಿನಿಂದಲೆ ನಿರಾಕಾರ ಏಕದೇವೋಪಾಸಕರಾಗಿದ್ದರು. ಇದಕ್ಕೆ ಕಾರಣ ಅವರು ತಾಯಿ ಗರ್ಭದಲ್ಲಿ ಇದ್ದಾಗಲೇ "ಗರ್ಭ ಲಿಂಗಧಾರಣೆ" ಎಂಬ ವೈಶಿಷ್ಟ್ಯಪೂರ್ಣ ಸಂಸ್ಕಾರವನ್ನು ವಿಶ್ವಗುರು ಬಸವಣ್ಣನವರಿಂದ ಪಡೆದುದರಿಂದ. ಹೀಗಾಗಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ದೊರೆಯ ಬೇಕು, ಮಕ್ಕಳು ಬೆಳೆಯುತ್ತಿದ್ದಂತೆ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ದೇವ ಭಕ್ತಿ ಬೆಳೆಯಲು ತಂದೆ ತಾಯಿಗಳು ಶ್ರಮಿಸಬೇಕು. ಆಗ, ಧೀಮಂತ ಸಮಾಜ ವೃದ್ಧಿಯಾಗಲು ಮತ್ತು ಆಕರ್ಷಕ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ.
ಬೆಳಗಾವಿಯ ಬಸವಾಂಕುರ ಸಂಸ್ಥೆಯು ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳಗಳ ಸಹಯೋಗದಲ್ಲಿ, ದಿ. 18 ರಂದು ಬೆಳಗಾವಿಯ ಗೋಕಾಕ್ ರಸ್ತೆಯಲ್ಲಿರುವ 'ವಿಶ್ವಗುರು ಬಸವ ಮಂಟಪ'ದಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗಾರ್ಚನೆ ಮತ್ತು ಪ್ರಾರ್ಥನೆಯ 'ಶರಣ ಸಂಗಮ'ದಲ್ಲಿ "ಶರಣ ಮಕ್ಕಳ ಸಂಭ್ರಮಾಚರಣೆ"ಯ ಕಾರ್ಯಕ್ರಮದಲ್ಲಿ ಶರಣೆ ವಚನಾ ಗುಡಸ್ ಅತಿಥಿಯಾಗಿ ಪಾಲ್ಗೊಂಡು, "ಶರಣರ ಬಾಲ್ಯ ಎನ್ನುವ ವಿಚಾರ ಕುರಿತು ಮಾತನಾಡಿದರು.
ಶರಣ ಚಿ. ಬಸವ ಪ್ರೇಮ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶರಣ ರಾಜೇಶ್ ಗಡ್ಡಿ ಬಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶರಣೆ ಕು. ಹಷರ್ಿತಾ ಕಾಜಗಾರರ್ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲಕ ಶರಣ ಬಸವ ಸ್ವರೂಪ, ಚಿ. ಶರಣೆ ತೃಪ್ತಿ ಕಾಜಗಾರ್, ಪ್ರಜ್ಞಾ ಮತ್ತು ಬಸವದೀಕ್ಷಾರವರು ಅಕ್ಕಮಹಾದೇವಿ ಮತ್ತು ಚನ್ನಬಸವಣ್ಣನವರ ಬಾಲ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಶರಣೆ ರೂಪಾ ಪ್ರಸಾದ್ ರಚಿಸಿದ- "ಏಕ ದೇವೋಪಾಸನೆ ಸಂದೇಶ ಸಾರಿದ ಬಾಲಕ ಬಸವ" ರೂಪಕವನ್ನು ಶರಣೆ ಚಿಣ್ಣರಾದ ಬಸವಾಕ್ಷರ, ಬಸವದೀಕ್ಷಾ, ಸಂಸ್ಕೃತಿ ಗುಡಸ್ ಮತ್ತು ಸ್ವರೂಪ ಮನೋಜ್ಞವಾಗಿ ಪ್ರದಶರ್ಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಬಸವಾಂಕುರದ ಸಂಚಾಲಕರಾದ ಶರಣೆ ರಾಜಶ್ರೀ ಕಾಜಗಾರ್ ಪ್ರಾಸ್ತಾವಿಕ ನುಡಿಗಳನ್ನು ಸಲ್ಲಿಸಿದರು. ಶರಣ ಸಂದೇಶ ಸ್ವಾಗತ ಕೋರಿದರು. ಶರಣೆ ಬಸವದೀಕ್ಷಾ ನಿರೂಪಿಸಿದರು. ಶರಣೆ ಪ್ರಜ್ಞಾ ಶರಣು ಸಮರ್ಪಣೆಗೈದರು.