ಶಿಗ್ಲಿಯಲ್ಲಿ ಶ್ರಾವಣ ಮಾಸ ಮುಕ್ತಾಯ; ಉದ್ಯಮಿ ವೀರಣ್ಣ ಪವಾಡದ ಸನ್ಮಾನ
ಶಿಗ್ಲಿಯಲ್ಲಿ ಶ್ರಾವಣ ಮಾಸ ಮುಕ್ತಾಯ; ಉದ್ಯಮಿ ವೀರಣ್ಣ ಪವಾಡದ ಸನ್ಮಾನ
ಶಿಗ್ಲಿ 12:ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಪ್ರತಿದಿನ ನಡೆದ ರುದ್ರಾಭಿಷೇಕ ಹಾಗೂ ಮಹಾಪೂಜೆಯ ಸಮಾರೋಪ ಕಾರ್ಯಕ್ರಮ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಅತ್ಯುತ್ತಮ ಉದ್ಯಮದಾರ ಪ್ರಶಸ್ತಿ ಪಡೆದ ಗ್ರಾಮದ ಹಿರಿಯ ಮುಖಂಡ ವೀರಣ್ಣ ಹಾಲಪ್ಪ ಪವಾಡದ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹದೇವಪ್ಪ ಬೆಳವಗಿ ಮಾತನಾಡಿ, ಬದುಕಿನಲ್ಲಿ ಭೋಗಮಾರ್ಗಕ್ಕಿಂತ ಯೋಗ ಹಾಗೂ ತ್ಯಾಗಮಾರ್ಗ ಶಾಶ್ವತ ಶಾಂತಿಗೆ ದಾರಿ ತೋರಿಸುತ್ತದೆ. ಭೌತಿಕ ಸಂಪತ್ತು ಮತ್ತು ಲೌಕಿಕ ಸುಖ ಕ್ಷಣಿಕವಾಗಿದ್ದು, ಧರ್ಮದ ನೆಲೆಯಲ್ಲಿ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೀಲಕಂಠೇಶ್ವರ ಕ್ಷೇಮಾಭಿವೃದ್ಧಿ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಗ್ರಾಮದ ಗುರುಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. ಪರಮೇಶ್ ತಡಹಾಳ ಕಾರ್ಯಕ್ರಮ ನಿರೂಪಿಸಿದರು.