ಮುಧೋಳ

‘ಗೊಂದಳಿ ಸಮಾಜದ ಎಲ್ಲ ವಿದ್ಯಾರ್ಥಿಗಳು ಶಿಕ್ಷಣವಂತರಾಗಲಿ’

‘ಗೊಂದಳಿ ಸಮಾಜದ ಎಲ್ಲ ವಿದ್ಯಾರ್ಥಿಗಳು ಶಿಕ್ಷಣವಂತರಾಗಲಿ’

ಮುಧೋಳ 10: ರಾಜ್ಯದಲ್ಲಿ ಸಣ್ಣ ಸಮಾಜದಲ್ಲೊಂದಾದ ಗೊಂದಳಿ ಸಮಾಜದ ಎಲ್ಲ ಮಕ್ಕಳು ಅತ್ಯುತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಮುಧೋಳ ತಾಲೂಕಾ ಗೊಂದಳಿ ಸಮಾಜದ ಅಧ್ಯಕ್ಷ ಸುಭಾಸ ಗಾಯಕವಾಡ ಹೇಳಿದರು.  

ಸೋಮವಾರ ಗೊಂದಳಿ ಸಮಾಜದ ಕಚೇರಿಯಲ್ಲಿ ಎಸ್‌.ಎಸ್‌.ಎಲ್‌.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.  

ಓರ್ವ ಡಿ ದರ್ಜೆಯ ನೌಕರರ ಮಗಳು ತನುಶ್ರೀ ಗಾಯಕವಾಡ ಎಸ್ ಎಸ್‌.ಎಲ್‌.ಸಿಯಲ್ಲಿ 607 ಅಂಕಗಳನ್ನು ಪಡೆದು ವೈದ್ಯಳಾಗುವ ಕನಸು ಕಂಡಿದ್ದು ಅವಳ ಆಸೆಯನ್ನು ಪೂರೈಸಲು ಸಮಾಜ ಮುಂದಾಗಬೇಕು ಎಂದು ಹೇಳಿದರು.  

ಸಮಾಜದ ಹಲವು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರಾದ ಸಾಧಕ ವಿದ್ಯಾರ್ಥಿಯ ಪಾಲಕರಾದ ಸುಭಾಸಚಂದ್ರ ಗಾಯಕವಾಡ,ಲಕ್ಷ್ಮೀಬಾಯಿ ಗಾಯಕವಾಡ, ಸಮಾಜದ ಮುಖಂಡರಾದ,ಅನೀಲ ವಾಗ್ಮೋಡೆ,  ಮಾರುತಿ ಗಣಾಚಾರಿ, ಶಿವಾಜಿ ಅಡೇಕರ, , ರಮೇಶ ಗಾಯಕವಾಡ, ಮಹಾದೇವ ಗಾಯಕವಾಡ, ಸಂಜು ಮುಖೆ, ಆನಂದ ಗಾಯವಾಡ ಇದ್ದರು. 


ಸುದ್ದಿ ಓದಿ