29ರಂದು ಹಸಿರು ಟಾವೆಲ್ ಪುಸ್ತಕ ಬಿಡುಗಡೆ

29ರಂದು ಹಸಿರು ಟಾವೆಲ್ ಪುಸ್ತಕ ಬಿಡುಗಡೆ

ಲೋಕದರ್ಶನ ವರದಿ 

ಗಜೇಂದ್ರಗಡ : ಸಮೀಪದ ನೆಲ್ಲೂರ ಗ್ರಾಮದಲ್ಲಿ ಆ.29ರಂದು ಬೆಳಗ್ಗೆ 10.30ಕ್ಕೆ 'ಸಂಗಾತ ಪುಸ್ತಕ' ಪ್ರಕಟಿಸಿರುವ ಸಾಹಿತಿ ಟಿ.ಎಸ್‌.ಗೊರವರ ರಚಿಸಿರುವ ರೈತಹೋರಾಟಗಾರ ಕೂಡ್ಲೆಪ್ಪ ಗುಡಿಮನಿ ಅವರ ಜೀವನ ಆಧಾರಿತ 'ಹಸಿರು ಟಾವೆಲ್' ಪುಸ್ತಕ ಬಿಡುಗಡೆ ಹಾಗೂ  ಕೂಡ್ಲೆಪ್ಪ ಅವರ ಒಡನಾಡಿಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ.                                                                                                                                                                                            ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕೃಷ್ಣಾ ಏತ ನೀರಾವರಿ ಯೋಜನೆ ಜಾರಿ ಹೋರಾಟ ಸಮಿತಿ, ಗಜೇಂದ್ರಗಡ-ರೋಣ ತಾಲ್ಲೂಕು ಸಮಿತಿ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕವಿ ಬಿ.ಪೀರ್‌ಬಾಷಾ ಪುಸ್ತಕ ಬಿಡುಗಡೆ ಮಾಡಿ, ಪುಸ್ತಕ ಕುರಿತು ಮಾತನಾಡುವರು.  ಬಿ.ಎ.ಕೆಂಚರೆಡ್ಡಿ, ಐ.ಜೆ.ಮ್ಯಾಗೇರಿ, ಪ್ರಮೋದ್ ತುರ್ವಿಹಾಳ, ರವೀಂದ್ರ ಹೊನವಾಡ, ಪುಂಡಲೀಕ ಕಲ್ಲಿಗನೂರ, ಮಲ್ಲಿಕಾರ್ಜುನ ಹಡಪದ, ಉದಯರವಿ ಗುಡಿಮನಿ, ಉಮೇಶ ಗುಡಿಮನಿ, ಎಂ.ಪಿ.ಪಾಟೀಲ, ಆರ್‌.ವಿ.ಗೌಡರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರೈತ ಮುಖಂಡ ಸುರೇಶ್ ಬಾಬು ಪಾಟೀಲ ಅಧ್ಯಕ್ಷತೆ ವಹಿಸುವರು. ಕೂಡ್ಲೆಪ್ಪ ಗುಡಿಮನಿ, ಲೇಖಕ ಟಿ.ಎಸ್‌.ಗೊರವರ ಉಪಸ್ಥಿತರಿರುವರು.ವಕೀಲರಾದ ಕೆ.ಎಚ್‌.ಪಾಟೀಲ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. 


ಸುದ್ದಿ ಓದಿ