ಧಾರವಾಡ - ಹುಬ್ಬಳ್ಳಿ

ಆಗಸ್ಟ್‌ 22 ರಂದು”ನನಗ್ಯಾಕೋ ಡೌಟು” ರಂಗರೂಪ ಪ್ರದರ್ಶನ

ಆಗಸ್ಟ್‌ 22 ರಂದು”ನನಗ್ಯಾಕೋ ಡೌಟು” ರಂಗರೂಪ ಪ್ರದರ್ಶನ

ಲೋಕದರ್ಶನ ವರದಿ 

ಧಾರವಾಡ 20 : ರಂಗಾಯಣ ಧಾರವಾಡವು ಆಗಸ್ಟ್‌ 22 ರಂದು ಸಂಜೆ 6.30ಕ್ಕ್ಕೆ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಬಿ.ಆರ್‌.ಲಕ್ಷ್ಮಣರಾವ್ ಅವರ ರಚನೆಯ, ಝಕೀರ ನದಾಫ ಅವರ ಮಾರ್ಗದರ್ಶನದಲ್ಲಿ “ನನಗ್ಯಾಕೋ ಡೌಟು” ರಂಗರೂಪವನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕರಾದ ಝಕೀರ ನದಾಫ ಅವರು ಉಪಸ್ಥಿತರಿರುವರು. ಪ್ರವೇಶ ದರ ರೂ.100/-ನ್ನು ನಿಗದಿಪಡಿಸಲಾಗಿದೆ. ಸಾಹಿತ್ಯಾಸಕ್ತರು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ