ಪ್ರಸಾರ ಭಾರತಿ ಕೇಂದ್ರ ಕಛೇರಿಯಲ್ಲಿ "ಹಿಂದಿ ದಿವಸ್‌" ಆಚರಣೆ

ಪ್ರಸಾರ  ಭಾರತಿ ಕೇಂದ್ರ ಕಛೇರಿಯಲ್ಲಿ  "ಹಿಂದಿ ದಿವಸ್‌" ಆಚರಣೆ

 ನವದೆಹಲಿ, ಸೆ 14     ಪ್ರಸಾರ ಭಾರತಿ   ಕೇಂದ್ರ  ಕಛೇರಿಯಲ್ಲಿಂದು   “ ಹಿಂದಿ ದಿವಸ್‌ “    ಆಚರಿಸಲಾಯಿತು.   
ಈ ಸಂದರ್ಭದಲ್ಲಿ  ನಡೆದ   ಸಭೆಯ  ಅಧ್ಯಕ್ಷತೆಯನ್ನು  ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಶಶಿ ವೆಂಪತ್ತಿ  ವಹಿಸಿದ್ದರು.
 ನಮ್ಮ   ದೈನಂದಿನ   ಚಟುವಟಿಕೆಗಳಲ್ಲಿ   ರಾಜಭಾಷಾ  ಹಿಂದಿ    ಬಳಕೆ  ಹೆಚ್ಚಿಸಲು ಅಧಿಕಾರಿಗಳು   ಪ್ರತಿಜ್ಞೆ   ಕೈಗೊಂಡರು     ಅಜಾದಿ  ಕಾ  ಅಮೃತ್ ಮಹೋತ್ಸವ   ಆಚರಿಸುತ್ತಿರುವ  ಈ ಸಂದರ್ಭದಲ್ಲಿ    ರಾಜಭಾಷೆಯ  ಪ್ರಾಮುಖ್ಯತೆಯನ್ನು ಒತ್ತಿ  ಹೇಳಿರುವ    ಗೃಹ  ಸಚಿವ ಅಮಿತ್ ಶಾ ಅವರ  ಸಂದೇಶವನ್ನು  ಸಭೆಯಲ್ಲಿ   ಓದಲಾಯಿತು.

ಹಿಂದಿ ಭಾಷೆಯ  ಬಳಕೆ   ಹಾಗೂ  ಅದನ್ನು   ಉತ್ತೇಜಿಸುವ   ಸಾಮೂಹಿಕ  ಜವಾಬ್ದಾರಿಯನ್ನು   ಜನರು ತೆಗೆದುಕೊಳ್ಳುಬೇಕು ಎಂದು    ಪ್ರತಿಪಾದಿಸಿರುವ     ಕೇಂದ್ರ  ವಾರ್ತಾ   ಮತ್ತು  ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್  ಅವರ ಸಂದೇಶವನ್ನು  ಸಭೆಯಲ್ಲಿ  ಉಲ್ಲೇಖಿಸಲಾಯಿತು.

ಆಕಾಶವಾಣಿ  ಹಾಗೂ   ದೂರದರ್ಶನ ಭಾರತದ ಧ್ವನಿಯಾಗಿ  ಕಾರ್ಯನಿರ್ವಹಿಸುತ್ತಿವೆ.  ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳಿಗೆ ತನ್ನ ಕಾರ್ಯಕ್ರಮಗಳಲ್ಲಿ  ಉತ್ತೇಜನ   ನೀಡಿವೆ  ಎಂದು ಪ್ರಸಾರ ಭಾರತಿ  ಸಿ ಇ ಓ    ಶಶಿ ಶೇಖರ್ ವೆಂಪತ್ತಿ  ಹೇಳಿದರು   
ಅಕಾಶವಾಣಿ  ಮಹಾ ನಿರ್ದೇಶಕ ವೇಣುಧರ್ ರೆಡ್ಡಿ ದೂರದರ್ಶನ  ಮಹಾ ನಿರ್ದೇಶಕ ಮಯಾಂಕ್ ಅಗರವಾಲ್  ತಮ್ಮ ಅಭಿಪ್ರಾಯ  ಹಂಚಿಕೊಂಡು     ಪ್ರಸಾರ ಭಾರತಿಯ   ಭದ್ರ ಕೋಟೆಯಾಗಿರುವ ಹಿಂದಿ  ಹಾಗೂ  ಪ್ರಾದೇಶಿಕ ಭಾಷೆಗಳನ್ನು   ಪ್ರೋತ್ಸಾಹಿಸುವಂತೆ  ಜನರಿಗೆ ಮನವಿ ಮಾಡಿದರು.

ಸುದ್ದಿ ಓದಿ