ನಿವೇದಾರ್ಪಣ ಅಕಾಡಮಿ ಆಫ್ ಮುಜಿಕ್, ವತಿಯಿಂದ "ಗುಲ್ದಸ್ತಾ" ಸಂಗೀತ ಸಂಜೆ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ, 3: ನಿವೇದಾರ್ಪಣ ಅಕಾಡಮಿ ಆಫ್ ಮುಜಿಕ್, ಬೆಳಗಾವಿಯ ವತಿಯಿಂದ ಆಯೋಜಿಸಿದ ಕರೋಕೇ ಸಂಗೀತ ಸ್ಪಧರ್ೆಯಲ್ಲಿ ವಿಜೇತ ರಾದವರಿಂದ "ಗುಲ್ದಸ್ತಾ" ಕನ್ನಡ, ಮರಾಠಿ ಹಾಗೂ ಹಿಂದಿ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.
ವಿವಿಧ ವಯೋಮಿತಿಯ ಒಟ್ಟು 15 ಹವ್ಯಾಸಿ ಕಲಾವಿದರು ಗೀತೆಗಳನ್ನು ಪ್ರಸ್ತುತಪಡಿಸಿ ಸುಮಾರು 3ಗಂಟೆ ಗಳ ಕಾಲ ಜನರನ್ನು ರಂಜಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಳಗಾವಿಯ ಖ್ಯಾತ ವೈದ್ಯರಾದ ಡಾ|| ಮಾಧವ ಪ್ರಭು, ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡುತ್ತ ನಮ್ಮ ಸಂಸ್ಕೃತಿಯಲ್ಲಿ ಸಂಗೀತವನ್ನು ಇನ್ನೊಂದು ವಿಧದ ವೈದ್ಯಕೀಯ ಪದ್ದತಿಯಂತೆಯೇ ಅನುಸರಿಸಿಕೊಂಡು ಬರಲಾಗುತ್ತಿದ್ದು ಉತ್ತಮ, ಮಧುರ ಸಂಗೀತವು ಸಾಕಷ್ಟು ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿರುವುದನ್ನು ಉದಾಹರಣೆ ಸಮೇತ ವಿವರಿಸಿದರು. ಸ್ಪದರ್ಾಳುಗಳಿಗೆ ತರಬೇತಿ ನೀಡಿ,ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಕ್ರಮವನ್ನು ಹಾಗೂ ಸ್ಪಧರ್ಾಳುಗಳು ಇದರ ಸದುಪಯೋಗ ಪಡಿಸಿಕೊಂಡು ಸುಮಧುರ ಗೀತೆಗಳನ್ನು ಪ್ರಸ್ತುತಪಡಿಸಿದ್ದನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನಗರದ ಖ್ಯಾತ ಸಂಗೀತ ಕಲಾವಿದರಾದ ಪ್ರಭಾಕರ ಶಹಾಪೂರಕರ, ಗಜಲ್ ಗಾಯಕರಾದ ಶೇಖ ಹಾಗೂ ಗಾಯಕಿ ಮಾಧುರಿ ಮುತಾಲಿಕದೇಸಾಯಿ ಅವರುಗಳು ಉಪಸ್ಥಿತ ರಿದ್ದರು. ಕನ್ನಡ, ಹಿಂದಿ ಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಎಲ್ಲ ಕಲಾವಿದರಿಗೆ ಆಕರ್ಷಕ ಫಲಕ ನೀಡಿ ಗೌರವಿಸಲಾಯಿತು. ಗುಲದಸ್ತಾ 2018 ಸ್ಪಧರ್ಾಳುಗಳು ಸಹ ಇದೇ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಿದ ಶ್ರೀಮತಿ.ನಿವೇದಿತಾ ಚಂದ್ರಶೇಖರ ಅವರಿಗೆ ಗೌರವಾರ್ಪಣೆ ಸಲ್ಲಿಸಿದರು. ಶಿಲ್ಪಾ ಕುಲಕಣರ್ಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.