“ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ”
“ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ”
ಗಂಗಾವತಿ ಗಂಗಾವತಿ 07 : ತಾಲ್ಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿಯವರ
ಜಯಂತ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ನೆಕ್ಕಂಟಿ ಆದರ್ಶ
ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಮಾಲಾರೆ್ಣಯನ್ನು
ಮಾಡುವ ಮೂಲಕ ಪೂಜೆಯನ್ನು ನೆರವೇರಿಸಿದರು.
ತದನಂತರದಲ್ಲಿ ಮಾತನಾಡಿದ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಮಲ್ಲಪ್ಪ ಮತ್ತು ಅಯ್ಯಪ್ಪ ಅವರು ಮಹರ್ಷಿ ವಾಲ್ಮೀಕಿಯವರ ಹಿನ್ನೆಲೆ, ವೃತ್ತಿ, ವಾಲ್ಮೀಕಿಯವರಿಗೆ ನಾರದಮುನಿಗಳಿಂದ ದೊರೆತ ಉಪದೇಶಗಳನ್ನು ತಿಳಿಸಿ ರಾಮಾಯಣದಿಂದ ನಾವು ಅಳವಡಿಸಿಕೊಳ್ಳಬಹುದಾದ ಜೀವನ ಮೌಲ್ಯಗಳನ್ನು ತಿಳಿಸಿದರು.
9ನೆಯ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಅಭಿವಂಧ್ಯಾ ಮತ್ತು ಕುಮಾರಿ ಅದಿತಿ ರತ್ನಾಕರ ವಾಲ್ಮೀಕಿಯಾಗಿ ಪರಿವರ್ತನೆಯಾದ ರೀತಿ, ರಾಮಾಯಣ ಮಹಾಕಾವ್ಯದ ರಚನೆ ಹಾಗು ರಾಮಾಯಣದಲ್ಲಿನ ಮೌಲ್ಯಗಳು ಮತ್ತು ಪಾತ್ರಗಳ ಕುರಿತು ಸಂಕ್ಷಿಪ್ತ ವಿವರಣೆ, ರಾಮಾಯಣದಲ್ಲಿರುವ ಒಟ್ಟು ಶ್ಲೋಕಗಳ ಕುರಿತು ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಶ್ರೀಮತಿ ಕೃಷ್ಣವೇಣಿ. ಎಸ್, ಶಾಲೆಯ ಪಿ.ಆರ್.ಎಮ್ ನಿಂಗಪ್ಪ ಮತ್ತು ಮಂಜುನಾಥ ಎಮ್ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಧನ್ಯವಾದಗಳೊಂದಿಗೆ,