‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಲು ಸದನದಲ್ಲಿ ನಿರ್ಣಯ ಮಂಡಣೆ’
‘Resolution presented in the House to form Kittur Karnataka Development Board’
ಲೋಕದರ್ಶನ ವರದಿ
ಬೆಂಗಳೂರು 26: ಬಹುದಿನದ ಬೇಡಿಕೆಯಾದ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ ಕಲ್ಯಾಣ ಕರ್ನಾಟಕಕ್ಕೆ ನೀಡಿದ ವಿಶೇಷ ಸ್ಥಾನಮಾನ 371ಜೆ ನೀಡಿದಂತೆ ನಮ್ಮ ಭಾಗಕ್ಕೂ ಸರಿಸಮಾನವಾದ ಸ್ಥಾನಮಾನ ನೀಡಿ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ ನಿಗದಿ ಪಡೆಸಲು ಇಂದು ವಿಧಾನಸಭೆಯಲ್ಲಿ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ನಿರ್ಣಯ ಮಂಡಿಸಿದರು.
ಐತಿಹಾಸಿಕ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಬೆಳಗಾವಿ ವಿಭಾಗದ ಕಿತ್ತೂರುಕರ್ನಾಟಕ ವಿಭಾಗದ ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಅಭಿವೃದ್ದಿಯ ದೃಷ್ಟಿಯಿಂದ ಇನ್ನೂ ನೀರೀಕ್ಷಿತ ಮಟ್ಟವನ್ನು ತಲುಪಿಲ್ಲ. ಈ ಭಾಗದ ಪ್ರಗತಿಗೆ ವಿಶೇಷ ಒತ್ತು ನಿಡುವ ಅವಶ್ಯಕತೆ ಇದ್ದು, ಬೇರೆ ಬೇರೆ ಪ್ರದೇಶಗಳಿಗೆ ಹೋಲಿಸಿದರೆ, ಕತ್ತೂರು ಕರ್ನಾಟಕ ಭಾಗವು ಆರ್ಥಿಕವಾಗಿ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಶಿಕ್ಷಣ, ಆರೋಗ್ಯ ಸಾಕ್ಷರತೆ) ತೀರಾ ಹಿಂದುಳಿದೆ. ಈ ಭಾಗದ ಜಿಲ್ಲೆಗಳ ತಲಾ ಆದಾಯ ರಾಜ್ಯದ ಸರಾಸರಿಗಿಂತ ಕಡಿಮೆ ಇದ್ದು, ರಾಜ್ಯದಲ್ಲಿ ಅತೀ ಕಡಿಮೆ ತಲಾ ಆದಾಯ ಹೊಂದಿದೆ. ಈ ಪ್ರದೇಶದಲ್ಲಿ ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯಗಳ ಕೊರೆತೆಯಿದೆ. ಡಾ: ನಂಜುಂಡಪ್ಪ ವರದಿ ಅನ್ವಯ ಈ ಪ್ರಾದೇಶಿಕ ಅಸಮತೋಲವನ್ನು ನಿವಾರಿಸಲು ವಿಶೇಷ ಆರ್ಥಿಕ ಪ್ಯಾಕೇಜ್, ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯ ಅಗತ್ಯವಿದೆ.
ಈಗಾಗಲೇ ಬೆಳಗಾವಿಯ ಸುರ್ಣ ವಿಧಾನಸೌಧದಲ್ಲಿ ಜರುಗಿದ ಚಲೀಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಎಲ್ಲಾ ಶಾಸಕರು ಪಕ್ಷಾತೀತವಾಗಿ ಮಾತನಾಡಿದ್ದರ ಪ್ರಕಾರ ಕಿತ್ತೂರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಮತ್ತು ಸರ್ವಾಂಗೀಣ ಪ್ರಗತಿಗಾಗಿ ಹಾಗೂ ರಾಜ್ಯದಲ್ಲಿ ವಿವಿಧ ಮಂಡಳಿಗಳನ್ನು ರಚಿಸಿದಂತೆ ಉತ್ತರ ಕರ್ನಾಟಕ ಭಾಗದ “ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ”ಯನ್ನು ರಚಿಸುವುದು ಹಾಗೂ ಈ ಮಂಡಳಿಗೆ ಪ್ರತಿವರ್ಷ ಆಯವ್ಯವಯದಲ್ಲಿ ಕನಿಷ್ಟ ರೂ. 5 ಸಾವಿರ ಕೋಟಿ ವಿಶೇಷ ಅನುದಾನವನ್ನು ಮೀಸಲಿಡುವುದಕ್ಕಾಗಿ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳುವಂತೆ ಈ ಸದನದ ಮೂಲಕ ನಿರ್ಣಯ ಮಂಡಿಸಿ ಕೋನರಡ್ಡಿ ಅವರು ಒತ್ತಾಯಿಸಿದರು.
ಇದಕ್ಕೆ ಬೆಂಬಲಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕರಾದ ಲಕ್ಷ್ಮಣ ಸವದಿ, ಉಪನಾಯಕ ಅರವಿಂದ ಬೆಲ್ಲದ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಸಿ ಈಗಾಗಲೇ ಪಕ್ಷಾತೀತವಾಗಿ ಅಂದಾಜು 45 ಶಾಸಕರು ಸಹಿ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಗೋವಿಂದರಾವ ಸಮೀತಿ ವರದಿ ಸಲ್ಲಿಸಿದ ನಂತರ ಪರೀಶೀಲಿಸುವುದಾಗಿ ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿ ಭರವಸೆ ನೀಡಿದ್ದರು. ಅದರ ಪ್ರಕಾರ ಈ ಭಾಗಕ್ಕೂ ಕೂಡ ವಿಶೇಷ ಅನುದಾನ ನೀಡಲು ಎಲ್ಲ ಶಾಸಕರು ಹಕ್ಕೋತ್ತಾಯಕ್ಕೆ ಬೆಂಬಲಿಸಿದರು.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 