ಶ್ರೀ ಸಪ್ತ ಮಹಾಮುನಿ ಋಷಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ

ಶ್ರೀ ಸಪ್ತ ಮಹಾಮುನಿ ಋಷಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ   Enshrining of the idols of the seven great sages

ಲೋಕದರ್ಶನ ವರದಿ

   ಕಂಪ್ಲಿ 23:  ಪಟ್ಟಣದ ದೇವಾಂಗ ಸಮುದಾಯದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ಶ್ರೀದೇವಲ ಸಪ್ತ ಮಹಾಮುನಿಗಳಾದ ದೇವಲ, ವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ, ದೇವಶಾಲಿ, ದೇವದಾಸ ಶಿಲಾ ಪ್ರತಿಮೆಗಳ ಪ್ರಾಣಪ್ರತಿಷ್ಠಾಪನಾ ಗುರುವಾರ ನಡೆಯಿತು. ಹೊಸಪೇಟೆ ದೇವಾಂಗಮಠದ ಶಂಕ್ರಯ್ಯಸ್ವಾಮಿ ಹಾಗೂ ದೇವಾಂಗಮಠದ.ಅನೆಮಠ. ಮಂಜುನಾಥ ಸ್ವಾಮಿ ಪೌರೋಹಿತ್ಯದಲ್ಲಿ ಕಲಶ ಸ್ಥಾಪಕ, ಅಭಿಷೇಕ, ಹೋಮ ಹವನಾಧಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಗಳಿಂದ ನಡೆದವು. ದೇವಾಂಗಮಠದ ಶಂಕ್ರಯ್ಯಸ್ವಾಮಿ ಮಾತನಾಡಿ, ದೇವಲ ಮಹರ್ಷಿಯ ಏಳು ಅವತಾರದ ಸಪ್ತರ್ಷಿಗಳ ಶಿಲಾ ಪ್ರತಿಮೆ ಪ್ರತಿಷ್ಠಾಪಿಸಿದ್ದು ಓಚಿತ್ಯಪೂರ್ಣವಾಗಿದೆ.

ದೇವಾಂಗ ಪುರಾಣವು ದೇವಾಂಗ ಸಮುದಾಯದವರ ಹೆಮ್ಮೆಯ ಪುರಾಣವಾಗಿದ್ದು, ಮಕ್ಕಳಿಗೆ ದೇವಲ ಮಹರ್ಷಿಯ ಕುರಿತು ಮಾಹಿತಿ ನೀಡುವಲ್ಲಿ ಪೋಷಕರು ಮುಂದಾಗಬೇಕುಎಂದರು.ಬಳ್ಳಾರಿಯ ವಿಎಸ್‌ಕೆ ವಿವಿಯ ಯೋಗ ಉಪನ್ಯಾಸಕ ದೂಪದ ಮಹೇಶಬಾಬು ಇವರಿಂದ ಶ್ರೀದೇವಲ ಸಪ್ತರ್ಷಿಗಳ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ದೇವಾಂಗಮಠದ ಸಾವಿತ್ರಮ್ಮ ತ್ರಿಪುರಾಂತಸ್ವಾಮಿ, ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಗೌರವಾಧ್ಯಕ್ಷ ಶೀಲವಂತರ ವಿರೇಶ, ಉಪಾಧ್ಯಕ್ಷರಾಗಿ ಶೀಲವಂತರ ತುಳಿಸಿ ರಾಮಚಂದ್ರ, ಕಾರ್ಯದರ್ಶಿ ಮಾಗನೂರು ರಾಜೇಶವರ್ಮ,

ಸಹಕಾರ್ಯದರ್ಶಿ ದೂಪದ ಪ್ರಶಾಂತಕುಮಾರ್, ಪುಟ್ಟಿ ರಾಘವೇಂದ್ರ, ಖಜಾಂಚಿ ಗದ್ಗಿ ವಿರುಪಾಕ್ಷಿ, ಸದಸ್ಯರಾದ ಡಿ.ದೂಪದ ಸುಭಾಷಚಂದ್ರ, ದೂಪದ ಮಂಜುನಾಥ, ವೀರೇಶ, ಸಜ್ಜೆ ರಮೇಶ, ಕಡೆಕಲ್ ವಿರುಪಣ್ಣ, ಕಾಕಂಡ್ಡಿ ಮಹೇಶ, ಸಜ್ಜೆ ವೆಂಕಟೇಶ, ಓದ ವಿರುಪಾಕ್ಷಿ, ಸಲಹಾ ಸಮಿತಿ ಸದಸ್ಯರಾದ ವನಕೆ ಶಂಕರ​‍್ಪ, ಶೀಲವಂತರ ಸುಬ್ಬಣ್ಣ, ಪೋಡಿ ನಾರಾಯಣಪ್ಪ, ಓದ ಬಸವರಾಜ, ಹಂಪರಗುಂದಿ ನಾಗರಾಜ ಹಾಗೂ ಗದ್ದಿ ಚೌಡೇಶ್ವರಿದೇವಿ ಸೇವಾ ಸಮಿತಿ, ಶ್ರೀಬನಶಂಕರಿ ದೇವಾಂಗ ಮಹಿಳಾ ಸಮುದಾಯದವರು ಸೇರಿದಂತೆ ಸಮಾಜದ ಭಕ್ತರು ಪಾಲ್ಗೊಂಡಿದ್ದರು.