ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
Argument over nightie: Husband arrested for attempting to kill wife by setting her on fire
ಬೆಳಗಾವಿ : ಪತ್ನಿಗೆ ನೈಟಿ ಹಾಕಿರುವ ವಿಷಯವಾಗಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದ ಜಗಳವು ವಿಕೋಪಕ್ಕೆ ಹೋಗಿ ಮಹಾಶಯ ಪತಿಯೋರ್ವ ತನ್ನ ಪತ್ನಿಗೆ ಬೆಂಕಿ ಹಚ್ವಿ ಕೊಲೆಗೆ ಯತ್ನ ನಡೆಸಿದ್ದು ಪತಿಯನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಹೇಳಿದರು.
ಬುಧವಾರ ಸಂಜೆ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌನ (ನೈಟಿ) ಹಾಕಿಕೊಳ್ಳುವ ವಿಷಯವಾಗಿ ಪತಿ ಪತ್ನಿಯ ನಡುವೆ ತಂಟೆ ನಡೆದು ಪತಿ ಪತ್ನಿಗೆ ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಲು ಪ್ರಯತ್ನಿಸಿದಆಪಾದಿತನಿಗೆ ಬಂಧನ ಮಾಡಲಾಗಿದೆ ಎಂದರು. ಈ ವಿಷಯವಾಗಿ ದಿ. 19ರಂದು ರಾತ್ರಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಶ್ರೀಮತಿ ಸಂತೋಷಿ ನಾರಾಯಣ ಭಾತಖಾಂಡೆ (ಸಾ : ಕರಜಗಿ, ತಾಲ್ಲೂಕು: ಖಾನಾಪುರ) ಇವರು ನಂದಗಡ ಠಾಣೆಗೆ ದೂರು ನೀಡಿದ್ದರು.
ದೂರುದಾರರ ಮಗಳಾದ ಮಂಜುಳಾ ಕೊಂ. ಕೃಷ್ಣಾಜಿ ಪಾಟೀಲ (27) ಇವಳುಖಾನಾಪೂರ ತಾಲೂಕಿನ ಹತ್ತರವಾಡ ಗ್ರಾಮದ ಕೃಷ್ಣಾಜಿ ಪರಸರಾಮ ಪಾಟೀಲ ಇವನೊಂದಿಗೆ ಕಳೇದ 8 ವರ್ಷಗಳ ಹಿಂದೆ ಮದುವೆಮಾಡಿಕೊಟ್ಟಿದ್ದು, ಅವಳಗಂಡ ಕೃಷ್ಣಾಜಿ ಪರಶರಾಮ ಪಾಟೀಲ, ಅವಳ ಮಾವ ಪರಶರಾಮ ಪಾಟೀಲ, ಅವಳ ಅತ್ತೆ ರೇಣುಕಾ ಪರಶರಾಮ ಪಾಟೀಲ, ಅವಳ ಮೈದುನ ಸೋಮನಾಥ ಪರಶರಾಮ ಪಾಟೀಲ ಇವರುಮದುವೆಯಾದಾಗಿನಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು.
ಇದೇ ದಿ. 19ರಂದು ಮುಂಜಾನೆ 11 ಗಂಟೆಗೆ ನಂದಗಡ ಗ್ರಾಮದ ದುರ್ಗಾನಗರದಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ಆಪಾದಿತನಾದ ಕೃಷ್ಣಾಜಿ ತನ್ನ ಹೆಂಡತಿ ಮಂಜುಳಾ ಇವಳ ಜೊತೆಗೆ ಗೌನ ಹಾಕುವ ಸಲುವಾಗಿ ತಂಟೆ ಮಾಡಿ “ಗೌನ ಕಾಡ ನಹಿತರ ತುಲಾ ಸೋಡನಾರ ನಾಹಿ” ಅಂತಾ ಅಂದವನೇಮನೆಯಲ್ಲಿದ್ದ ಮ್ಯಾಚ್ ಬಾಕ್ಸ್ ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.
ಈ ಬಗ್ಗೆ ದೂರು ಸಲ್ಲಿಸಿದ್ದು ನಂದಗಡಪೊಲೀಸ್ ಠಾಣೆ ಅಪರಾಧ ಸಂಖ್ಯೆಃ 62/2026 ಕಲಂ-109, 85 ಸಹಕಲಂ-3 (5) ಬಿಎನ್ಎಸ್-2023 ನೇದ್ದಕ್ಕೆಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇತ್ತು. ಈ ಪ್ರಕರಣದಲ್ಲಿ ಗಾಯಗೊಂಡ ಮಹಿಳೆ ಸದ್ಯ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಿಂದ ದಿ. 20 ರಂದು ಗೋವಾ ರಾಜ್ಯದ ಮೆಡಿಕಲ್ ಕಾಲೇಜ್ ಬಾಂಬೋಲಿಮ್ ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರ ಹೊಂದುತ್ತಿರುತ್ತಾಳೆ.
ಇವಳ ಪರಿಸ್ಥಿತಿ ಸದ್ಯ ಚಿಂತಾಜನಿಕ ವಾಗಿರುತ್ತದೆ. ಡಾಃ ವೀರಯ್ಯಾ ಹಿರೇಮಠ, ಡಿ.ಎಸ್.ಪಿ, ಬೈಲಹೊಂಗಲ ಇವರುಆಪಾದಿತನ ಪತ್ತೆಗಾಗಿ ತಂಡವನ್ನು ರಚಿಸಿ ಇವರ ಮಾರ್ಗದರ್ಶನದಲ್ಲಿ ರವಿಕುಮಾರ ಎಲ್. ಧರ್ಮಟ್ಟಿ ಪೊಲೀಸ್ ಇನ್ಸಪೆಕ್ಟರ ನಂದಗಡ ಠಾಣೆ ಹಾಗೂ ಎಸ್. ಎಸ್. ಬದಾಮಿ ಪಿಎಸ್.ಐ (ಕಾ&ಸು) ಯು. ಬಿ. ಶಿಂತ್ರಿ ಸಿಎಚ್.ಸಿ. ಬ.ನಂ-2662, ಇವರೊಂದಿಗೆ ಪತಿ ಕೃಷ್ಣಾಜಿ ಪರಶರಾಮ ಪಾಟೀಲ ಇವನಿಗೆ ಪತ್ತೆ ಮಾಡಿ ದಿ. 20ರಂದು ವಿಚಾರಣೆಗೊಳಪಡಿಸಿದಾಗ ಅವನು ಕೃತ್ಯ ಮಾಡಿದ ಬಗ್ಗೆಒಪ್ಪಿಕೊಂಡಿದ್ದರಿಂದ ಸದರಿಯವನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದ್ದು ಎಂದು ಎಸ್ ಪಿ ರಾಮರಾಜನ್ ಅವರು ತಿಳಿಸಿದರು. ಸದ್ಯ ಪತಿ ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ.
ಸದರಿ ಪ್ರಕರಣ ಪತ್ತೆ ಮಾಡಿದ ತಂಡದ ಕಾರ್ಯಾವನ್ನು ಎಸ್.ಪಿ. ರಾಮರಾಜನ್,ಹಾಗೂ ಹೆಚ್ಚುವರಿ ಎಸ್.ಪಿ. ಇವರು ಶ್ಲಾಘಿಸಿರುತ್ತಾರೆ.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 