ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
Mother and son fall into river: Search continues for son on 2nd day: Only child in family drowned
ಬೆಳಗಾವಿ : ಪಟ್ಟಣದ ಹಿರಣ್ಯಕೇಶಿ ನದಿ ನೀರಿಗೆ ಬಿದ್ದಿರುವ ತಾಯಿ ಶವವು ಮಂಗಳವಾರ ರಾತ್ರಿ ದೊರೆತಿದ್ದು, ಮಗನ ಶವಕ್ಕಾಗಿ ಎರಡನೇ ದಿನವಾದ ಬುಧವಾರ ಕೂಡಾ ಶೋಧ ಕಾರ್ಯ ಮುಂದುವರಿದಿದೆ. ಆದರೆ ಕುಟುಂಬಕ್ಕೆ ಒಬ್ಬನೆ ಮಗನಾಗಿ ಕುಟುಂಬದ ವಂಶವನ್ನು ಬೆಳೆಸಬೇಕಾಗಿದ್ದ ಮಗನ ಸಾವಿನಿಂದ ನಾಗರಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ನೀರಿನಲ್ಲಿ ಬಿದ್ದವರನ್ನು ಲಕ್ಷ್ಮೀ ಸುಧಾಕರ ಕುಟೋಳ (27) ಹಾಗೂ ಸುಪ್ರೀತ ಸುಧಾಕರ ಕುಟೋಳಿ(10) ಇವರಿಬ್ಬರು ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಇವರು ಸಂಕೇಶ್ವರದ ಹನುಮಾನ ನಗರ ನಿವಾಸಿಗಳಾಗಿದ್ದಾರೆ. ಪತಿ ಸುಧಾಕರ ಈತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ.
ಇವರಿಬ್ಬರು ಮಂಗಳವಾರ ಮಧ್ಯಾಹ್ನ ಹಿರಣ್ಯಕೇಶಿ ನದಿ ನೀರಲ್ಲಿ ಮುಳುಗಿದ್ದಾರೆ ಎಂದು ತಿಳಿದಿದೆ. ನೀರಿಗೆ ಬಿದ್ದು ಎರಡನೇ ದಿನವಾದ ಬುಧವಾರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಬೋಟ್ ಮೂಲಕ ಹಿರಣ್ಯಕೇಶಿ ನದಿ ನೀರಿನಲ್ಲಿ ಹುಡುಕಾಡ ನಡೆಸಿದ್ದಾರೆ.
ಆದರೆ ಬುಧವಾರ ಮಧ್ಯಾಹ್ನ ವರೆಗೆ ಮಗನ ಶವವು ಪತ್ತೆಯಾಗಿಲ್ಲ. ಈ ಬಗ್ಗೆ ಮೃತಳ ಪತಿ ತಾನು ಕೆಲಸಕ್ಕೆ ಹೋದಾಗ ಈ ದೂರವಾಣಿ ಕರೆ ಮಾಡಿದ್ದೆ, ಆದರೆ ಅವರು ಕರ ಸ್ವೀಕರಿಸಲಿಲ್ಲ. ಅದಕ್ಕಾಗಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪತ್ನಿ,ಮಗ ಇರಲಿಲ್ಲ ಬಳಿಕ ತಮಗೆ ಸಂಜೆ ನೀರಲ್ಲಿ ಬಿದ್ದಿರುವ ವಿಷಯ ತಿಳಿಯಿತು ಎಂದು ಮಾಧ್ಯಮದವರ ಮುಂದೆ ಹೇಳಿದರು.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 