ಮೂರು ಚೆಕ್ ಪೋಸ್ಟಗಳಿಗೆ ಪೊಲೀಸ್ ವರಿಷ್ಟಾಧಿಕಾರಿ ಭೇ ಟಿ
ಲೋಕದರ್ಶನ ವರದಿ
ಮುಂಡರಗಿ 19: ಮುಂಬರುವ 2023 ನೇಯ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯವಾಗಿ ಮಾದರಿ ನೀತಿ ಸಂಹಿತೆ ಪಾಲನೆಯ ಭಾಗವಾಗಿ ಮುಂಡರಗಿ ತಾಲೂಕಿನಲ್ಲಿ ಸ್ಥಾಪನೆ ಮಾಡಲಾಗಿರುವ ಮೂರು ಚೆಕ್ ಪೋಸ್ಟಗಳಿಗೆ ಶನಿವಾರ ಗದಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಭೆೇಟಿ ನೀಡಿ ಪರಿಶೀಲಿಸಿದರು.
ಗದಗ ಜಿಲ್ಲೆಗೆ ಹೊಂದಿಕೊಂಡಿರುವ ತಾಲೂಕಿನ ಪ್ರಮುಖ ರಸ್ಥೆಗಳಾದ ಮುಂಡರಗಿಯಿಂದ ಕೊಪ್ಪಳ ರಸ್ತೆಯಲ್ಲಿರುವ ಬಿ.ಎ.ಎಂ.ಎಸ್ ಕಾಲೇಜು ಬಳಿ, ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ, ಹಡಗಲಿ ರೋಡ್, ಕೊರ್ಲಹಳ್ಳಿ ಮತ್ತು ಗದಗ ದಿಂದ ಕೊಪ್ಪಳ ರೋಡ್ ಹಳ್ಳಿಕೇರಿ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಅಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಅಧಿಕಾರಿ/ ಆರಕ್ಷಕ ಮತ್ತು ಅಬಕಾರಿ ಸಿಬ್ಬಂದಿಗಳಿಗೆ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಲು ಹಾಗೂ ತಪಾಸಣೆ ಮಾಡಿದ ಬಗ್ಗೆ ರಿಜಿಸ್ಟರನಲ್ಲಿ ದಾಖಲಿಸಬೇಕೆಂದು ಸೂಚಿಸಿದರು.
ಹಾಗೂ ವಾಹನದಲ್ಲಿ ದಾಖಲೆ ಇಲ್ಲದೆ ನಗದು ಸಾಗಾಣಿಕೆ, ಅಕ್ರಮವಾಗಿ ಸಾರಾಯಿ ಸಾಗಾಣಿಕೆ, ಮಾದಕ ವಸ್ತುಗಳ ಸಾಗಾಣಿಕೆ, ಅಮೂಲ್ಯ ಲೋಹಗಳ ಸಾಗಾಣಿಕೆ, ಉಚಿತವಾಗಿ ಹಂಚಿಕೆ ಮಾಡಲು ಬೇರೆ ಬೇರೆ ವಸ್ತುಗಳ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಲ್ಲಿ, ಸಂಬಂಧಪಟ್ಟವರ ಮೇಲೆ ನಿಯಮಾನುಸಾರ ವಿವಿಧ ಕಾಯ್ದೆ ಮತ್ತು ಕಲಮುಗಳ ಪ್ರಕಾರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ನಿರ್ದೇಶನ ನೀಡಿದರು. ಈ ವೇಳೆ ಮುಂಡರಗಿಯ ಸಿಪಿಐ, ಆರ್.ಎಫ್.ಓ ಹಾಗೂ ಸಿಬ್ಬಂದಿಗಳು ಇದ್ದರು.