ಎಲ್ಲರೊಂದಿಗೆ ಬೆರೆತು ಬದುಕು ನಡೆಸಿ: ಶಿವಕುಮಾರ
ಲೋಕದರ್ಶನವರದಿ
ರಾಣೆಬೆನ್ನೂರು 30: ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಿ ಎಲ್ಲರೊಂದಿಗೆ ಬೆರೆತು ಬದುಕು ನಡೆಸಬೇಕು, ಇದು ನಮ್ಮ ಪ್ರಗತಿಗೆ ಪೂರಕವಾಗುತ್ತದೆ ಎಂದು ಪ್ರಾಂಶುಪಾಲ ಡಾ| ಬಿ.ಶಿವಕುಮಾರ ಹೇಳಿದರು.
ನಗರ ಹೊರವಲಯದ ಶ್ರೀತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿದ್ಯಾಥರ್ಿಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮುಖಮಾಡುತ್ತಿರುವುದು ಭಾರತ ದೇಶದ ಇತಿಹಾಸ ಪರಂಪರೆಯ ಜನಪದ ಕಲೆಯು ನಶಿಸುವಂತಾಗಿದೆ. ಸಂಸ್ಕೃತಿ ಪರಂಪರೆಯ ದೇಶೀಯ ಸಾಂಪ್ರದಾಯಿಕ ಜೀವನ ಬಿಂಬಿಸುವ, ಉಡುಗೆ ತೊಡುಗೆಗಳನ್ನು ತೊಡುವ ಮೂಲಕ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು.
ಪ್ರೊ. ದಿನೇಶ ಮಾಗನೂರ, ಡಾ| ಶಿವಕುಮಾರ ಹೊನ್ನಾಳಿ, ಶಶಿಧರ ಕುರಗೋಡಪ್ಪನವರ ಸೇರಿದಂತೆ ವಿದ್ಯಾಥರ್ಿಗಳು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು. ಕಾಲೇಜಿನ ನೂರಾರು ವಿಧ್ಯಾಥರ್ಿಗಳು ಸಂಸ್ಕೃತಿ ಪ್ರತಿಬಿಂಬಿತ ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಜಾನಪದ, ಕೋಲಾಟ, ಭಜನೆ, ಕುಟ್ಟುವ, ಬೀಸುವ, ಕೋಲಾಟದ ನೃತ್ಯಗಳನ್ನು ಪ್ರದಶರ್ಿಸಿ ಸಾರ್ವಜನಿಕರ ಗಮನ ಸೆಳೆದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 