ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಬೆಳಗಾವಿ : ನಗರದ ಮನೆಯೊಂದರಲ್ಲಿದ್ದ 1.02 ಕೋಟಿ ಮೌಲ್ಯದ 930 ಗ್ರಾಮ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಭAಧಿಸಿದAತೆ ಇಬ್ಬರು ಆರೋಪಿತರನ್ನು ಬಂಧಿಸಲಾಗಿದ್ದು, ಬಂಧತರಿAದ 73.03 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪತ್ತೆ ಮಾಡಲಾಗಿದೆ ಎಂದು ನಗರ ಪೊಲೀಸ ಆಯುಕ್ತ ಭೂಷಣ್ ಬೋರಸೆ ಅವರು ಇಂದಿಲ್ಲಿ ಹೇಳಿದರು.
ಶುಕ್ರವಾರ ಸಂಜೆ ತಮ್ಮ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಂಪ್ ಪೊಲೀಸ ತಂಡವು ಇಬ್ಬರು ಖದೀಮರಾದ ರಾಹುಲ್ ಸತೀಶ ಕಾಂಬಳೆ (27) (ಸಾ: ಕಾಗವಾಡ) ಮತ್ತು ಬಾಬಾಸಾಹೇಬ ಈರಪ್ಪ ಕಟಗೇರಿ (ಸಾ: ಕಾಗವಾಡ) ಇವರಿಬ್ಬರು ಬಂಧಿತ ಆರೋಪಿತರಾಗಿದ್ದಾರೆ ಎಂದು ತಿಳಿಸಿದರು.
ಅನ್ನಪೂರ್ಣ ದಡೇದ ಎನ್ನುವವರಿಗೆ ಸೇರಿದ್ದ ಮನೆಯಲ್ಲಿ ಈ ಕಳ್ಳತನ ಮಾಡಲಾಗಿತ್ತು. ಈ ಕುರಿತು ಅನ್ನಪೂರ್ಣ ಅವರು ಕ್ಯಾಂಪ್ ಪೊಲೀಸ ಠಾಣೆಯಲ್ಲಿ 930 ಗ್ರಾಮ ಚಿನ್ನ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಈ ದೂರು ಪಡೆದು ಅಪರಾದ ವಿಭಾಗದ ಡಿಸಿಪಿ ನಿರಂಜನ್ ಅವರ ನೇತೃತ್ವದಲ್ಲಿ ಖಡೇಬಜಾರ್ ಎಸಿಪಿ ಶೇಖರಪ್ಪ ಹಾಗೂ ಕ್ಯಾಂಪ್ ಪಿಐ ಆನಂದ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಮನೆಯಲ್ಲಿದ್ದ ಹಿರಿಯರಾದ ಡಾ. ವಿಶ್ವನಾಥ ಅವರಿಗೆ ಅನಾರೋಗ್ಯ ಇರುವ ಹಿನ್ನೆಲೆಯಲ್ಲಿ ಆರೈಕೆಗಾಗಿ (ಕೇರ್ ಟ್ರೆಕರ್) ರೀತಿ ಈ ಮನೆಯಲ್ಲಿ ಡೆಸೆಂಬರ್ ತಿಂಗಳಲ್ಲಿ ಕೆಲಸಕ್ಕೆ ರಾಹುಲ್ ಸೇರಿದ್ದನು. ಮೂರು ತಿಂಗಳ ಹಿಂದಿನಿAದ ಮನೆಯಲ್ಲಿ ಕೆಲಸ ಮಾಡಿದ್ದನು. ಬಳಿಕ ಅವನಿಗೆ ಈ ಮನೆಯ ಟ್ರೆಜರಿಯಲ್ಲಿ ಚಿನ್ನ ಇರುವ ಬಗ್ಗೆ ಮಾಹಿತಿ ದೊರೆತಿದೆ.
ಚಿನ್ನವನ್ನು ಹಂತ ಹಂತವಾಗಿ ಕಳ್ಳತನ ಮಾಡಿರುತ್ತಾನೆ. ಬಳಿಕ ನಾಪತ್ತೆಯಾಗಿರುತ್ತಾನೆ. ಈ ಚಿನ್ನವನ್ನು ಬೇರೆಯಡೆ ಮಾರಾಟ ಮಾಡಲು ಬಾಬಾಸಾಹೇಬ ಈರಪ್ಪ ಕಟಗೇರಿ (ಸಾ: ಕಾಗವಾಡ) ಇವನ ಮುಖಾಂತರ ಚಿನ್ನ ಮಾರಾಟಕ್ಕೆ ಪ್ರಯತ್ನ ಮಾಡಿದ್ದಾನೆ. 52.5 ಲಕ್ಷ ಮೌಲ್ಯದ 350 ಗ್ರಾಂ ಚಿನ್ನವನ್ನು ಮತ್ತು ಇನ್ನು ಕೆಲವು ಚಿನ್ನದ ಆಭರಣಗಳನ್ನು ಮತ್ತೂಟ್ ಪೈನಾನ್ಸ್ ಸೇರಿ ಕೆಲವುಗಳಲ್ಲಿ ಇಟ್ಟುಕೊಂಡು ಅದರಿಂದ ಬಂದಿದ್ದ ಹಣವನ್ನು 22.08 ಲಕ್ಷ ಹಣವನ್ನು ರಾಹುಲ್ ಕಾಂಬಳೆ ಅವರ ಖಾತೆಗೆ ವರ್ಗಾವಣೆ ಮಾಡಿದ್ದನು.
ಪೈನಾನ್ಸ್ ಗಳಲ್ಲಿನ 22.08 ಲಕ್ಷ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಒಟ್ಟು ಈ ಪ್ರಕರಣದಲ್ಲಿ 73.03 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸ ಆಯುಕ್ತರು ಹೇಳಿದರು. ಈ ಪ್ರಕರಣ ಪತ್ತೆ ಕರ‍್ಯದಲ್ಲಿ ಪಿಐ ಆನಂದ ಜೊತೆಗೆ ಪಿಎಸ್‌ಐ ಶ್ರೀಮತಿ ಎ. ರುಕ್ಮಣಿ, ಎಎಸ್‌ಐ ಗಳಾದ ಆರ್.ಆರ್.ಸನದಿ, ಎಲ್.ಕೆ.ಪಾಟೀಲ, ಎಎಸ್ ಐ ಎಸ್.ವಿ.ಪಾಟೀಲ ಮತ್ತು ಬಸವರಾಜ, ಮುನವಳ್ಳಿ, ಕರೆಗಾರ, ಲಮಾನಿ, ತೇಲಿ, ಸನ್ಮನಿ, ಮತ್ತು ಅವರ ಟೆಕ್ನಿಕಲ್ ತಂಡವು ಈ ಪತ್ತೆ ಕರ‍್ಯ ಮಾಡಿದೆ. ಪತ್ತೆ ಮಾಡಿದ್ದ ತಂಡಕ್ಕೆ ನಗದು ಹಣ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ನಾರಾಯಣ ಬರಮನಿ ಉಪಸ್ಥಿತರಿದ್ದರು.