ಉತ್ತರ ಕರ್ನಾಟಕದ ಜಾನಪದ ಕೋಗಿಲೆ ಕುಂಬಾರ ಹಳ್ಳದ ನಿಂಗಪ್ಪ ಬೀಳಗಿಗೆ ಗೌರವ ಸನ್ಮಾನ

ಉತ್ತರ ಕರ್ನಾಟಕದ ಜಾನಪದ ಕೋಗಿಲೆ ಕುಂಬಾರ ಹಳ್ಳದ ನಿಂಗಪ್ಪ ಬೀಳಗಿಗೆ ಗೌರವ ಸನ್ಮಾನ Tribute to Ningappa Bilagi of Kumbara Halla, the folk cuckoo of North Karnataka

ಪಾಲಬಾವಿ 29 : ರಾಯಬಾಗ ತಾಲೂಕು ಹಿಡಕಲ್ಲ ಗ್ರಾಮದಲ್ಲಿ ಶರಣ ಸದ್ಭಕ್ತರಾದ ಹನುಮಂತ ತಮ್ಮಣ್ಣ ಒಡೆಯರ ತೋಟದಲ್ಲಿ ಪ್ರತಿವರ್ಷದಂತೆ ಈ ವರ್ಷವು  ಶಿವಯೋಗಿ ಅಮೋಘಸಿದ್ದೇಶ್ವರ ಜಾತ್ರೆಯ ದಶಮಾನೋತ್ಸವವು ಹಾಗೂ ಲಕ್ಷದೀಪೋತ್ಸವ, "ಸಿದ್ಧರಭೇಟಿ" ಮಹೋತ್ಸವವು ಕಳೆದ ಎರಡು ದಿನಗಳ ವರೆಗೆ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.   ಉತ್ತರ ಕರ್ನಾಟಕದ ಜಾನಪದ ಕೋಗಿಲೆ "ಶ್ರೀ ಮೊದಗೊಂಡೇಶ್ವರ ಸದ್ಭಾವನಾ" ಪ್ರಶಸ್ತಿ ಪುರಸ್ಕೃತರು, ಹೆಸರಾಂತ ಡೊಳ್ಳಿನ ಪದಗಳ ಹಾಡುಗಾರರು ಕುಂಬಾರಹಳ್ಳದ ನಿಂಗಪ್ಪ ಬೀಳಗಿ ಅವರನ್ನು ಅಮೋಘಸಿದ್ದೇಶ್ವರ ದೇವಸ್ಥಾನದ ಗದ್ದುಗೆ ಪೂಜಾರಿಗಳು ಪೂಜ್ಯ ಮಾಳಸಿದ್ದ ಒಡೆಯರವರು.

ಫಲಪುಷ್ಪ ನೀಡಿ, ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಸದಾಶಿವ ಮುತ್ಯಾ ಮಹಾರಾಜರು, ಅಮಣ್ಣ ಒಡೆಯರ, ವಿಠ್ಠಲ ಹಳ್ಳೂರೆ, ತುಕಾರಾಮ ಸೂರಣ್ಣವರ, ಪ್ರಾಚಾರ್ಯ ಟಿ.ಎಸ್‌.ವಂಟಗೂಡಿ, ಜಾನಪದ ಕಲಾವಿದ ಭೀಮರಾವ ಘಂಟಿ,  ಲಗಮಣ್ಣ ಸೂರಣ್ಣವರ, ಮಾಯಪ್ಪ ಕಂಠೀಕಾರ, ಶಂಕರ ಕ್ಯಾಸ್ತಿ, ನ್ಯಾಯವಾದಿ ಪರಗೌಡ ದರೂರ, ಸಂಗಪ್ಪ ಸುಖಾಲಿ, ಸುಭಾಷ ಸೂರಣ್ಣವರ, ಈರ​‍್ಪ ಸುಖಾಲಿ, ಪಾಂಡು ಸೂರಣ್ಣವರ, ಚನ್ನಪ್ಪ ಅಂಗಡಿ, ಮಹಾದೇವ ವಡಗಾವಿ, ಲಕ್ಷ್ಮಣ ಪಾಟೀಲ, ನ್ಯಾಯವಾದಿ ಎನ್‌.ಎಸ್‌.ವಡೆಯರ, ಅಮರ ಸೂರಣ್ಣವರ, ಘುಳಪ್ಪ ಸೂರಣ್ಣವರ, ಹಾಲಪ್ಪ ಪಾಟೀಲ, ಶಿಂಗಾಡಿ ಹೊಸಟ್ಟಿ, ಅಮರ ಚಿಪ್ಪಲಕಟ್ಟಿ, ಪಾಯಪ್ಪ ನಾಗನೂರ, ಚಂದ್ರಕಾಂತ ಸುನದಾಳ ಇತರರು ಇದ್ದರು.